
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2026 ರ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್, ತಂಡವನ್ನು ಎದುರಿಸಿತು. ರನ್‌ಗಳ ಮಳೆಯೇ ಹರಿದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಅಂತಿಮವಾಗಿ 10 ರನ್‌ಗಳಿಂದ ಗೆಲುವು ಸಾಧಿಸುವುದರಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಯುಪಿ 20 ಓವರ್‌ಗಳಲ್ಲಿ 197 ರನ್ ಕಲೆಹಾಕಲಷ್ಟೇ ಶಕ್ತವಾಗಿ ಪಂದ್ಯವನ್ನು ಕಳೆದುಕೊಂಡಿತು.
ಗುಜರಾತ್ ಜೈಂಟ್ಸ್ ತಂಡವು ಯುಪಿ ವಾರಿಯರ್ಸ್ ತಂಡವನ್ನು 10 ರನ್‌ಗಳಿಂದ ಸೋಲಿಸಿತು. 207 ರನ್‌ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 197 ರನ್ ಗಳಿಸಿತು. ಆಶಾ ಶೋಭನಾ 27 ರನ್ ಮತ್ತು ಶಿಖಾ ಪಾಂಡೆ 1 ರನ್ ಗಳಿಸಿ ಅಜೇಯರಾಗಿ ಉಳಿದರು.
ಯುಪಿ ವಾರಿಯರ್ಸ್ 17.5 ಓವರ್‌ಗಳಲ್ಲಿ 7 ವಿಕೆಟ್‌ಗೆ 168 ರನ್ ಗಳಿಸಿದೆ. ಗೆಲ್ಲಲು ಅವರಿಗೆ 12 ಎಸೆತಗಳಲ್ಲಿ 40 ರನ್‌ಗಳ ಅಗತ್ಯವಿದೆ.
ಫೋಬೆ ಲಿಚ್‌ಫೀಲ್ಡ್ 24 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಿತ ಅರ್ಧಶತಕ ಬಾರಿಸಿದ್ದಾರೆ. ಶ್ವೇತಾ ಶೆರಾವತ್ 11 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಯುಪಿ ವಾರಿಯರ್ಸ್ 10.5 ಓವರ್‌ಗಳಲ್ಲಿ 4 ವಿಕೆಟ್‌ಗೆ 102 ರನ್ ಗಳಿಸಿದೆ. ಗೆಲುವಿಗೆ 54 ಎಸೆತಗಳಲ್ಲಿ 106 ರನ್‌ಗಳ ಅಗತ್ಯವಿದೆ.
ಯುಪಿ ವಾರಿಯರ್ಸ್ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 49 ರನ್ ಗಳಿಸಿದೆ. ಗೆಲ್ಲಲು ಅವರಿಗೆ 78 ಎಸೆತಗಳಲ್ಲಿ 159 ರನ್‌ಗಳ ಅವಶ್ಯಕತೆಯಿದೆ. ಮೆಗ್ ಲ್ಯಾನಿಂಗ್ 23 ಮತ್ತು ಫೈವಿ ಲಿಚ್‌ಫೀಲ್ಡ್ 24 ರನ್ ಗಳಿಸಿದ್ದಾರೆ.
ಯುಪಿ ವಾರಿಯರ್ಸ್ 3 ಓವರ್‌ಗಳಲ್ಲಿ 1 ವಿಕೆಟ್‌ಗೆ 17 ರನ್ ಗಳಿಸಿದ್ದು, ಗೆಲ್ಲಲು 191 ರನ್‌ಗಳ ಅವಶ್ಯಕತೆಯಿದೆ. ಮೆಗ್ ಲ್ಯಾನಿಂಗ್ 3 ಮತ್ತು ಫೈವಿ ಲಿಚ್‌ಫೀಲ್ಡ್ 12 ರನ್ ಗಳಿಸಿದ್ದಾರೆ.
ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್ ಗಳಿಸಿತು. ಜಾರ್ಜಿಯಾ ವೇರ್‌ಹ್ಯಾಮ್ 27 ರನ್ ಮತ್ತು ಭಾರ್ತಿ ಫುಲ್ಮಾಲಿ 14 ರನ್ ಗಳಿಸಿ ಅಜೇಯರಾಗಿ ಉಳಿದರು.
ಗುಜರಾತ್ ಜೈಂಟ್ಸ್ ತಂಡ 17 ಓವರ್‌ಗಳಲ್ಲಿ 3 ವಿಕೆಟ್‌ಗೆ 167 ರನ್ ಗಳಿಸಿದೆ. ಆಶ್ಲೇ ಗಾರ್ಡ್ನರ್ (37 ಎಸೆತಗಳಲ್ಲಿ 60) ಮತ್ತು ಜಾರ್ಜಿಯಾ ವೇರ್‌ಹ್ಯಾಮ್ (6) ಕ್ರೀಸ್‌ನಲ್ಲಿದ್ದಾರೆ.
ಗುಜರಾತ್ ಜೈಂಟ್ಸ್ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 90 ರನ್ ಗಳಿಸಿದೆ. ಆಶ್ಲೇ ಗಾರ್ಡ್ನರ್ (12) ಮತ್ತು ಅನುಷ್ಕಾ ಶರ್ಮಾ (23) ಕ್ರೀಸ್‌ನಲ್ಲಿದ್ದಾರೆ.
ಶಿಖಾ ಪಾಂಡೆ ಎಸೆದ ಮೊದಲ ಓವರ್‌ನಲ್ಲಿ 14 ರನ್‌ಗಳು ಬಂದವು. ಗುಜರಾತ್ ಜೈಂಟ್ಸ್ ತಂಡವು ತನ್ನ ಎರಡನೇ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿದೆ.
ಡಿಯಾಂಡ್ರಾ ಡಾಟಿನ್, ಮೆಗ್ ಲ್ಯಾನಿಂಗ್ (ನಾಯಕಿ), ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್ (ವಿಕೆಟ್ ಕೀಪರ್), ಆಶಾ ಸೋಭಾನಾ, ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ, ಕ್ರಾಂತಿ ಗೌಡ್.
ಸೋಫಿ ಡಿವೈನ್, ಬೆತ್ ಮೂನಿ (ವಿಕೆಟ್ ಕೀಪರ್), ಆಶ್ಲೀಗ್ ಗಾರ್ಡ್ನರ್ (ನಾಯಕಿ), ಜಾರ್ಜಿಯಾ ವೇರ್ಹ್ಯಾಮ್, ಅನುಷ್ಕಾ ಶರ್ಮಾ, ಕನಿಕಾ ಅಹುಜಾ, ಭಾರತಿ ಫುಲ್ಮಾಲಿ, ಕಾಶ್ವಿ ಗೌತಮ್, ತನುಜಾ ಕನ್ವರ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್ ಠಾಕೂರ್.
ಟಾಸ್ ಗೆದ್ದ ಯುಪಿ ವಾರಿರರ್ಸ್ ನಾಯಕಿ ಮೆಗ್ ಲ್ಯಾನಿಂಗ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 2:33 pm, Sat, 10 January 26