ಡಿಸೆಂಬರ್ 14ರ ಗುರುವಾರ ರಾಜ್ಕೋಟ್ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ 2023 ರ ಎರಡನೇ ಸೆಮಿಫೈನಲ್ (Vijay Hazare Trophy 2023 Semifinal) ಪಂದ್ಯದಲ್ಲಿ, ರಾಜಸ್ಥಾನ ತಂಡವು, ಕರ್ನಾಟಕ ತಂಡವನ್ನು (Karnataka vs Rajasthan) 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಬರೋಬ್ಬರಿ 17 ವರ್ಷಗಳ ನಂತರ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 23 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಇಲ್ಲಿಂದ 128 ಎಸೆತಗಳಲ್ಲಿ 180 ರನ್ ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿ ತಂಡದ ಗೆಲುವಿನಲ್ಲಿ ದೀಪಕ್ ಹೂಡಾ (Deepak Hooda) ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ರಾಜಸ್ಥಾನ ತಂಡ 43.4 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಇದೀಗ ಡಿಸೆಂಬರ್ 16 ರಂದು ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡ, ಹರಿಯಾಣ ತಂಡವನ್ನು ಎದುರಿಸಲಿದೆ.
ವಿಜಯ್ ಹಜಾರೆ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 282 ರನ್ ಗಳಿಸಿತು. ತಂಡದ ಪರ ಅಭಿನವ್ ಮನೋಹರ್ ಕೇವಲ 80 ಎಸೆತಗಳಲ್ಲಿ 91 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮನೋಜ್ ಭಾಂಡಿಗೆ ಕೂಡ ಕೇವಲ 39 ಎಸೆತಗಳಲ್ಲಿ 63 ರನ್ ಸಿಡಿಸಿದರು. ಈ ಇಬ್ಬರ ಸ್ಫೋಟಕ ಇನ್ನಿಂಗ್ಸ್ ಆಧಾರದ ಮೇಲೆ ತಂಡವು ಈ ಸ್ಕೋರ್ ತಲುಪಬಹುದು. ಇದಾದ ಬಳಿಕ ಕರ್ನಾಟಕ ಬೌಲಿಂಗ್‌ನಲ್ಲಿ ಅದ್ಭುತ ಆರಂಭ ಪಡೆದಿದ್ದು, ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ರಾಜಸ್ಥಾನದ 2 ವಿಕೆಟ್ ಉರುಳಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಿತು.
283 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡದ ಇಬ್ಬರು ಆರಂಭಿಕ ಬ್ಯಾಟ್ಸ್‌ಮನ್‌ಗಳು ಕೇವಲ 1 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಇಬ್ಬರಿಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದಾದ ಬಳಿಕ 14 ರನ್ ಗಳಿಸಿ ಮಹಿಪಾಲ್ ಲೊಮ್ರೋರ್ ಕೂಡ ತಮ್ಮ ವಿಕೆಟ್ ಒಪ್ಪಿಸಿದರು. ಇಲ್ಲಿಂದ ಕರಣ್ ಲಂಬಾ ಜೊತೆಗೂಡಿ ದೀಪಕ್ ಹೂಡಾ ಮೊದಲ 10 ಓವರ್‌ಗಳಲ್ಲಿ ತಂಡದ ಸ್ಕೋರನ್ನು 39ರನ್ಗಳಿಗೆ ಕೊಂಡೊಯ್ದರು. ಇದರ ನಂತರ, ದೀಪಕ್ ಒಂದು ತುದಿಯಿಂದ ವೇಗವಾಗಿ ರನ್ ಗಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಇದರಲ್ಲಿ ಅವರು ಕೇವಲ 85 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
ಇಲ್ಲಿಂದ ಕರ್ನಾಟಕ ತಂಡಕ್ಕೆ ಪಂದ್ಯದಲ್ಲಿ ತಿರುಗೇಟು ನೀಡುವ ಯಾವುದೇ ಅವಕಾಶವನ್ನು ದೀಪಕ್ ನೀಡಲಿಲ್ಲ. ದೀಪಕ್ 180 ರನ್‌ಗಳ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಹೊಡೆದರು. ಈ ಸಮಯದಲ್ಲಿ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 140.62 ಆಗಿತ್ತು. ಆದರೆ ಕರಣ್ ಲಂಬಾ ಈ ಪಂದ್ಯದಲ್ಲಿ ಕೊನೆಯವರೆಗೂ ಅಜೇಯರಾಗಿ ಉಳಿದು 112 ಎಸೆತಗಳಲ್ಲಿ 73 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
1⃣5⃣0⃣ up for Deepak Hooda 👏👏
He brings it up off just 108 balls.
He's played some fabulous shots. 👌👌
Follow the match ▶️ https://t.co/Zvqm6l7cL2@IDFCFIRSTBank | #VijayHazareTrophy pic.twitter.com/8qJ53nLmA6
— BCCI Domestic (@BCCIdomestic) December 14, 2023
ವಿಜಯ್ ಹಜಾರೆ ಟ್ರೋಫಿಯಲ್ಲಿ ದೀಪಕ್ ಹೂಡಾ ಅವರ ಪ್ರದರ್ಶನವನ್ನು ನೋಡುವುದಾದರೆ, ಅವರು ಆಡಿರುವ 8 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ 80 ರ ಸರಾಸರಿಯಲ್ಲಿ 480 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 2 ಅರ್ಧ ಶತಕಗಳು ಸೇರಿವೆ. ಇದು ಅವರ ಲಿಸ್ಟ್-ಎ ವೃತ್ತಿಜೀವನದಲ್ಲಿ ದೀಪಕ್ ಅವರ ಆರನೇ ಶತಕವಾಗಿದೆ ಮತ್ತು ಇದುವರೆಗಿನ ಈ ಸ್ವರೂಪದಲ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ಮುಂಬರುವ 2024 ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ದೀಪಕ್ ಅವರನ್ನು ಉಳಿಸಿಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:12 am, Fri, 15 December 23