ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಟೆಸ್ಟ್‌ಗಳ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಈ ಪಂದ್ಯ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli)ಗೆ ಐತಿಹಾಸಿಕ ಮತ್ತು ವಿಶೇಷವಾಗಿದೆ. ಈ ಟೆಸ್ಟ್ ಪಂದ್ಯ ವಿರಾಟ್ ಟೆಸ್ಟ್ ವೃತ್ತಿಜೀವನದ 100ನೇ ಪಂದ್ಯವಾಗಿದೆ. ಇದಕ್ಕಾಗಿ ವಿರಾಟ್ ಜೊತೆಗೆ ಅಭಿಮಾನಿಗಳು ಕೂಡ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿಗೆ ವಿಶೇಷವಾಗುವಂತೆ ಬಿಸಿಸಿಐ ಕೂಡ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಅನುಮತಿ ನೀಡಿದೆ. 2008ರಲ್ಲಿ ಕೊಹ್ಲಿ ಚೊಚ್ಚಲ ಪಂದ್ಯವನ್ನಾಡಿದ್ದರು. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಆಡಿದ್ದರು. ಅಂದಿನಿಂದ ಅವರು 99 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕೊಹ್ಲಿಯ ಈ ವಿಶೇಷ ಸ್ಥಾನಕ್ಕೆ ಬಿಸಿಸಿಐ ಅನುಭವಿ ಸೌರವ್ ಗಂಗೂಲಿ ಸೇರಿದಂತೆ ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ.
ಕೊಹ್ಲಿಯ ಪ್ರಯಾಣವನ್ನು ನೆನಪಿಸಿಕೊಂಡ ಸಚಿನ್
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ವಿರಾಟ್ ಕೊಹ್ಲಿಗೆ ವಿಶ್ ಮಾಡಿರುವ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಚಿನ್ ವಿಡಿಯೋದಲ್ಲಿ, ನಾನು ಕೊಹ್ಲಿ ಬಗ್ಗೆ ಮೊದಲು ಕೇಳಿದಾಗ ನಾವು ಆಸ್ಟ್ರೇಲಿಯಾದಲ್ಲಿದ್ದೆವು ಎಂಬುದು ನನಗೆ ಇನ್ನೂ ನೆನಪಿದೆ. ವಿರಾಟ್ ಕೊಹ್ಲಿ ಪ್ರಯಾಣ ಅದ್ಭುತವಾಗಿದೆ. 2007 ರ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ, ಪ್ರತಿಯೊಬ್ಬರೂ ಭವಿಷ್ಯದತ್ತ ನೋಡುತ್ತಿರುವ ಆಟಗಾರನ ಬಗ್ಗೆ ಮಾತನಾಡುತ್ತಿದ್ದರು. ಆಗ ನಾನು ವಿರಾಟ್ ಕೊಹ್ಲಿ ಹೆಸರನ್ನು ಮೊದಲು ಕೇಳಿದೆ. ಕಳೆದ ಕೆಲವು ವರ್ಷಗಳಿಂದ ಅವರು ಆಡುವುದನ್ನು ನೋಡುವುದು ತುಂಬಾ ಸಂತೋಷವಾಗಿದೆ. ಎಂತಹ ಅದ್ಭುತ ಸಾಧನೆ, ಅವರ 100ನೇ ಟೆಸ್ಟ್ ಪಂದ್ಯಕ್ಕೆ ಅಭಿನಂದನೆಗಳು ಎಂದು ಬಣ್ಣಿಸಿದ್ದಾರೆ.
The Master Blaster @sachin_rt congratulates @imVkohli on his milestone.
Listen in to that special anecdote from 2011.#VK100 pic.twitter.com/nDPsLDq3Fr
— BCCI (@BCCI) March 3, 2022
ಶುಭ ಹಾರೈಸಿದ ದ್ರಾವಿಡ್ ಮತ್ತು ಗಂಗೂಲಿ
ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ವಿರಾಟ್ ಅವರನ್ನು ಹೊಗಳಿದ್ದಾರೆ. ಟೆಸ್ಟ್ ಕ್ರಿಕೆಟ್ ಆಡುವುದು ಅಷ್ಟು ಸುಲಭವಲ್ಲ. ಇದು ಕೊಹ್ಲಿ ಹೆಮ್ಮೆ ಪಡುವಂತಹ ಸಾಧನೆಯಾಗಿದೆ. ಕೊಹ್ಲಿ ನನ್ನ ಜೊತೆಯೂ ಕ್ರಿಕೆಟ್ ಆಡಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಅವರು ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ. ಇದು ಸುಲಭವಲ್ಲ. ಅವರು ಇಷ್ಟಕ್ಕೆ ಮಾತ್ರ ತೃಪ್ತರಾಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಇನ್ನೂ ಸಾಧಿಸುವುದು ಬಹಳಷ್ಟಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಕೊಹ್ಲಿ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಪ್ರಯಾಣ ಅದ್ಭುತವಾಗಿದೆ. 11 ವರ್ಷಗಳ ಹಿಂದೆ ಚೊಚ್ಚಲ ಪಂದ್ಯವನ್ನಾಡಿದ್ದಾಗಿನಿಂದ್ದ ಈವರೆಗೆ ಕೊಹ್ಲಿ ಅದ್ಭುತ ಮೈಲುಗಲ್ಲು ಸಾಧಿಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:Sachin Tendulkar: ಗಾಯಗೊಂಡಿದ್ದ ಪಕ್ಷಿಯ ಜೀವ ಉಳಿಸಿದ ಸಚಿನ್ ತೆಂಡೂಲ್ಕರ್! ಹೃದಯವಂತ ಎಂದ ನೆಟ್ಟಿಗರು; ವಿಡಿಯೋ