AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sachin Tendulkar: ಗಾಯಗೊಂಡಿದ್ದ ಪಕ್ಷಿಯ ಜೀವ ಉಳಿಸಿದ ಸಚಿನ್ ತೆಂಡೂಲ್ಕರ್! ಹೃದಯವಂತ ಎಂದ ನೆಟ್ಟಿಗರು; ವಿಡಿಯೋ

Sachin Tendulkar: ಈ ವಿಡಿಯೋದಲ್ಲಿ ಸಚಿನ್ ತಮ್ಮ ಕೈಯಲ್ಲಿ ಹಕ್ಕಿಯೊಂದನ್ನು ಹಿಡಿದುಕೊಂಡಿದ್ದಾರೆ. ಅವರ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಹಕ್ಕಿಗೆ ನೀರುಣಿಸುತ್ತಿರುವುದು ಕೂಡ ಕಂಡುಬರುತ್ತದೆ. ಸ್ವಲ್ಪ ಸಮಯದ ನಂತರ ಸಚಿನ್ ಆ ಪಕ್ಷಿಯ ಹಸಿವು ನೀಗಿಸಿದ್ದಾರೆ.

Sachin Tendulkar: ಗಾಯಗೊಂಡಿದ್ದ ಪಕ್ಷಿಯ ಜೀವ ಉಳಿಸಿದ ಸಚಿನ್ ತೆಂಡೂಲ್ಕರ್! ಹೃದಯವಂತ ಎಂದ ನೆಟ್ಟಿಗರು; ವಿಡಿಯೋ
ಸಚಿನ್ ತೆಂಡೂಲ್ಕರ್
TV9 Web
| Updated By: ಪೃಥ್ವಿಶಂಕರ|

Updated on:Feb 26, 2022 | 5:33 PM

Share

ಭಾರತದ ದಿಗ್ಗಜ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಆಟಕ್ಕೆ ಮಾತ್ರವಲ್ಲದೆ ಅವರ ಉದಾರ ವರ್ತನೆಯಿಂದಲೂ ಅಸಂಖ್ಯಾತ ಅಭಿಮಾನಿಗಳನ್ನು ವಿಶ್ವದ್ಯಾಂತ ಪಡೆದಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಸಚಿನ್ ಎತ್ತಿದ ಕೈ. ಸಚಿನ್ ನೆರವಾಗುವವರಲ್ಲಿ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳಿಗೂ ಸಹಾಯ ಮಾಡುವುದಕ್ಕೆ ಸಚಿನ್ ಒಮ್ಮೆಯೂ ಯೋಚಿಸುವುದಿಲ್ಲ. ಇತ್ತೀಚೆಗೆ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಸಚಿನ್, ಗಾಯದಿಂದ ನಿತ್ರಾಣಗೊಂಡಿದ್ದ ಪಕ್ಷಿಯೊಂದರ ಪ್ರಾಣ ಉಳಿಸಿದ್ದಾರೆ. ಈ ವಿಡಿಯೋ ಜೊತೆಗೆ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನೂ ನೀಡಿದ್ದಾರೆ.

ಸಚಿನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಲ್ಲಿಯವರೆಗೆ ಈ ವೀಡಿಯೊವನ್ನು ಹಲವಾರು ಜನರು ವೀಕ್ಷಿಸಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಚಿನ್ ತೆಂಡೂಲ್ಕರ್ ಅವರ ದಯೆ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಸಚಿನ್ ಹೃದಯವಂತ ಎಂದು ಬಣ್ಣಿಸಿದ್ದಾರೆ.

ಪಕ್ಷಿಯ ಜೀವ ಉಳಿಸಿದ ಸಚಿನ್

ಬೀಚ್‌ನಲ್ಲಿ ಗಾಯದಿಂದ ನಿತ್ರಾಣಗೊಂಡಿರುವ ಪಕ್ಷಿಗೆ ನೀರುಣುಸಿ, ಆಹಾರ ನೀಡುತ್ತಿರುವ ವಿಡಿಯೋವೊಂದನ್ನು ಸಚಿನ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ ತಮ್ಮ ಕೈಯಲ್ಲಿ ಹಕ್ಕಿಯೊಂದನ್ನು ಹಿಡಿದುಕೊಂಡಿದ್ದಾರೆ. ಅವರ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಹಕ್ಕಿಗೆ ನೀರುಣಿಸುತ್ತಿರುವುದು ಕೂಡ ಕಂಡುಬರುತ್ತದೆ. ಸ್ವಲ್ಪ ಸಮಯದ ನಂತರ ಸಚಿನ್ ಆ ಪಕ್ಷಿಯ ಹಸಿವು ನೀಗಿಸಿದ್ದಾರೆ. ವೀಡಿಯೊದ ಕೊನೆಯಲ್ಲಿ, ಪಕ್ಷಿ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಸಚಿನ್ ಹೇಳಿಕೊಂಡಿದ್ದಾರೆ. ಜೊತೆಗೆ ಈ ವೀಡಿಯೊದ ಶೀರ್ಷಿಕೆಯಲ್ಲಿ, ಸ್ವಲ್ಪ ಕಾಳಜಿ ಮತ್ತು ಪ್ರೀತಿಯು ನಮ್ಮ ಈ ಜಗತ್ತನ್ನು ಹೆಚ್ಚು ಉತ್ತಮ ಸ್ಥಳವನ್ನಾಗಿ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

ನಕಲಿ ಜಾಹೀರಾತಿನಿಂದಾಗಿ ಸಚಿನ್ ಬೇಸರ ಇತ್ತೀಚೆಗಷ್ಟೇ ನಕಲಿ ಜಾಹೀರಾತುಗಳಿಂದ ಸಚಿನ್ ಬೇಸರಗೊಂಡಿದ್ದರು. ಕೆಲವು ದಿನಗಳ ಹಿಂದೆ, ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಸಚಿನ್, ಕ್ಯಾಸಿನೊಗಳ ಪರ ಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ಬಿಂಬಿಸಲಾಗಿತ್ತು. ಈ ಕುರಿತು ಸಚಿನ್ ಅವರು, ನಾನು ಅಂತಹ ವಿಷಯಗಳನ್ನು ಎಂದಿಗೂ ಅನುಮೋದಿಸಿಲ್ಲ ಮತ್ತು ಈ ಜಾಹೀರಾತುಗಳು ನಕಲಿ ಎಂದು ಹೇಳಿಕೊಂಡಿದ್ದರು. ಅಲ್ಲದೆ ಈ ಜಾಹೀರಾತು ಮಾಡಿದವರ ವಿರುದ್ಧವೂ ಅವರ ತಂಡ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಹೇಳಿಕೊಂಡಿದ್ದರು. ಜೊತೆಗೆ ತಾನು ವೈಯಕ್ತಿಕವಾಗಿ ಮದ್ಯ, ಜೂಜು ಅಥವಾ ತಂಬಾಕನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ ಎಂದು ಸಚಿನ್ ಹೇಳಿಕೊಂಡಿದ್ದರು. ಆದರೆ ನನ್ನ ಫೋಟೋವನ್ನು ಈ ರೀತಿಯಾಗಿ ದುರುಪಯೋಗಪಡಿಸಿಕೊಳ್ಳುವುದು ದುಃಖಕರವಾಗಿದೆ ಎಂದು ಸಚಿನ್ ಹೇಳಿಕೊಂಡಿದ್ದಾರೆ.

Published On - 5:32 pm, Sat, 26 February 22