TV9 Kannada Digital Survey: ಆರ್​ಸಿಬಿ ಮುಂದಿನ ನಾಯಕ ಯಾರು? ಟಿವಿ9 ನಡೆಸಿದ ಸರ್ವೆಯಲ್ಲಿ ಬಂತು ಅಚ್ಚರಿ ಪಲಿತಾಂಶ!

ಟಿವಿ9 ಕನ್ನಡ ಡಿಜಿಟಲ್​ ಸರ್ವೆ: ಈ ಸರ್ವೆಯಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದು, ತಮ್ಮ ಆಯ್ಕೆಯನ್ನು ತಿಳಿಸಿದ್ದಾರೆ. ಆದರೆ ಈ ಸರ್ವೆಯಲ್ಲಿ ನೀಡಿದ 3 ಆಟಗಾರರ ಆಯ್ಕೆಯನ್ನು ಹೊರತುಪಡಿಸಿ, ಅಭಿಮಾನಿಗಳು ಆರ್​ಸಿಬಿ ತಂಡದ ಮಾಜಿ ನಾಯಕ ಕೊಹ್ಲಿ ಮೇಲೆ ಹೆಚ್ಚಿನ ಒಲವು ತೋರಿದ್ದಾರೆ.

TV9 Kannada Digital Survey: ಆರ್​ಸಿಬಿ ಮುಂದಿನ ನಾಯಕ ಯಾರು? ಟಿವಿ9 ನಡೆಸಿದ ಸರ್ವೆಯಲ್ಲಿ ಬಂತು ಅಚ್ಚರಿ ಪಲಿತಾಂಶ!
ಆರ್​​ಸಿಬಿ ಪೂರ್ಣ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Feb 26, 2022 | 5:51 PM

ಐಪಿಎಲ್ (IPL 2022) ಸೀಸನ್ 15 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್​ 26 ರಿಂದ ಐಪಿಎಲ್ ಶುರುವಾಗುವುದು ಖಚಿತವಾಗಿದೆ. ಎಲ್ಲಾ ತಂಡಗಳು ತಮ್ಮ ತಮ್ಮ ತಂಡಗಳನ್ನು ಸಿದ್ದಗೊಳಿಸಿಕೊಂಡಿವೆ. ಜೊತೆಗೆ ತಮ್ಮ ತಂಡದ ಸಾರಥ್ಯ ಯಾರು ವಹಿಸಿಕೊಳ್ಳಬೇಕು ಎಂಬುದರ ಬಗ್ಗೆ ನಿರ್ಧಾರ ಪ್ರಕಟಿಸಿವೆ. ಆದರೆ ಐಪಿಎಲ್​ನಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಆರ್​ಸಿಬಿ (RCB) ಮಾತ್ರ ಇದುವರೆಗೂ ತನ್ನ ತಂಡದ ನಾಯಕ ಯಾರಾಗಲಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿಲ್ಲ. ಐಪಿಎಲ್ ಆರಂಭದಿಂದಲೂ ಕಪ್ ಗೆಲ್ಲುವ ಫೆವರೆಟ್ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುವ ಆರ್​ಸಿಬಿ ಕೆಲವೊಂದು ಸೀಸನ್​ಗಳಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಪ್ರಶಸ್ತಿ ಕಳೆದುಕೊಂಡರೆ, ಕೆಲವೊಮ್ಮೆ ಕಳಪೆ ಬೌಲಿಂಗ್​ನಿಂದಾಗಿ ಪ್ರಶಸ್ತಿ ಗೆಲ್ಲಲಾಗಿಲ್ಲ. ಇದುವರೆಗೂ 2 ಬಾರಿ ಫೈನಲ್​ಗೇರಿರುವ ಆರ್​ಸಿಬಿ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಹೀಗಾಗಿ ಈ ಬಾರಿ ಶತಾಯಗತಾಯ ಕಪ್ ಗೆಲ್ಲಲೇಬೇಕೆಂದುಕೊಂಡಿರುವ ಆರ್​ಸಿಬಿ ನಾಯಕನ ಹುಡುಕಾಟದಲ್ಲಿದ್ದು, ಮೆಗಾ ಹರಾಜಿನಲ್ಲಿ ನಾಯಕತ್ವಕ್ಕೆ ಸೂಕ್ತರೆನಿಸುವ ಕೆಲವು ಆಟಗಾರರನ್ನು ಖರೀದಿಸಿತ್ತು. ಅಂತಹ ಪ್ರಮುಖ ಆಟಗಾರರಲ್ಲಿ ಮೂವರು ಆಟಗಾರರನ್ನು ಆಯ್ಕೆ ಮಾಡಿ ಟಿವಿ9 ಕನ್ನಡ ಡಿಜಿಟಲ್ ಮಾಧ್ಯಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಸರ್ವೆ ನಡೆಸಿತ್ತು. ಈ ಸರ್ವೆಯ ಪ್ರಕಾರ ತಂಡದ ನಾಯಕತ್ವವನ್ನು ಯಾರು ವಹಿಸಿಕೊಳ್ಳಬೇಕು ಎಂಬುದರ ಬಗ್ಗೆ ಆರ್​ಸಿಬಿ ಅಭಿಮಾನಿಗಳು ತಮ್ಮದೆ ಆದ ಪ್ರತಿಕ್ರಿಯೆ ನೀಡಿದ್ದಾರೆ.

ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ

ಐಪಿಎಲ್ ಸೀಸನ್ 14 ಆರಂಭದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದರು. ಅದರಂತೆ 14ನೇ ಆವೃತ್ತಿ ಮುಕ್ತಾಯದೊಂದಿಗೆ ಕೊಹ್ಲಿಯ ಆರ್​ಸಿಬಿ ಕ್ಯಾಪ್ಟನ್ಸಿ ಕೂಡ ಅಂತ್ಯವಾಗಿತ್ತು. ಇದಾಗ್ಯೂ ವಿರಾಟ್ ಕೊಹ್ಲಿ ಯಾಕಾಗಿ ದಿಢೀರ್ ರಾಜೀನಾಮೆ ನೀಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಕಾರಣಗಳನನ್ನು ನೀಡಿರಲಿಲ್ಲ. ಕೆಲಸದ ಹೊರೆ ಹೆಚ್ಚಾಗಿರುವ ಕಾರಣ ನಾಯಕತ್ವವನ್ನು ತ್ಯಜಿಸುವುದಾಗಿ ಕೊಹ್ಲಿ ತಿಳಿಸಿದ್ದರು. ಇದರಿಂದ ಆರ್​ಸಿಬಿ ಹೊಸ ನಾಯಕನ ಹುಡುಕಾಟ ಶುರು ಮಾಡಿದೆ. ಇದರ ಮುಂದುವರೆದ ಅಧ್ಯಾಯವಾಗಿ ಟಿವಿ9 ಕನ್ನಡ ಈ ಸರ್ವೆ ನಡೆಸಿತ್ತು. ಆದರೆ ಸ್ವತಃ ಕೊಹ್ಲಿಯೇ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸರ್ವೆಯಲ್ಲಿ ಅವರ ಹೆಸರನ್ನು ಪರಿಗಣಿಸಿರಲಿಲ್ಲ.

ಟಿವಿ9 ಕನ್ನಡ ನಡೆಸಿದ ಸರ್ವೆಯಲ್ಲಿ ಬಂದ ಉತ್ತರವೇನು?

ಆರ್​ಸಿಬಿ ತಂಡದ ಸಾರಥ್ಯ ಯಾರು ವಹಿಸಬೇಕು ಎಂಬ ಪ್ರಶ್ನೆಯನ್ನು ನೆಟ್ಟಿಗರ ಮುಂದಿಟ್ಟಿದ್ದ ಟಿವಿ9 ಅದಕ್ಕೆ 3 ಆಟಗಾರರನ್ನು ಆಯ್ಕೆಗಳಾಗಿ ನೀಡಿತ್ತು. ಟಿವಿ9 ಆಯ್ಕೆಗಳಾಗಿ ನೀಡಿದ ಆಟಗಾರರೆಂದರೆ, ಟೀಂ ಇಂಡಿಯಾದ ಮಾಜಿ ಆಟಗಾರ ದಿನೇಶ್ ಕಾರ್ತಿಕ್, ಆಸ್ಟ್ರೇಲಿಯಾದ ಆಟಗಾರ ಗ್ಲೇನ್ ಮ್ಯಾಕ್ಸ್​ವೆಲ್ ಹಾಗೂ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್. ಈ ಮೂವರು ಆಟಗಾರರನ್ನು ಆಯ್ಕೆಗಳಾಗಿ ನೀಡಿ, ಸೋಶಿಯಲ್ ಮೀಡಿಯಾ ಫ್ಲಾಟ್​ ಫಾರ್ಮ್​ಗಳಾದ ಫೇಸ್​ಬುಕ್, ಟ್ವಿಟರ್ ಹಾಗೂ ಯು ಟ್ಯೂಬ್​ನಲ್ಲಿ ಈ ಸರ್ವೆ ನಡೆಸಿತ್ತು.

ಸರ್ವೆಯಲ್ಲಿ ಬಂದ ಉತ್ತರ ಹೀಗಿತ್ತು..

ಟಿವಿ9 ಕನ್ನಡ ನಡೆಸಿದ ಸರ್ವೆಯಲ್ಲಿ ಅಚ್ಚರಿಯ ಪಲಿತಾಂಶ ಹೊರಬಿದ್ದಿದೆ. ಈ ಸರ್ವೆಯಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದು, ತಮ್ಮ ಆಯ್ಕೆಯನ್ನು ತಿಳಿಸಿದ್ದಾರೆ. ಆದರೆ ಈ ಸರ್ವೆಯಲ್ಲಿ ನೀಡಿದ 3 ಆಟಗಾರರ ಆಯ್ಕೆಯನ್ನು ಹೊರತುಪಡಿಸಿ, ಅಭಿಮಾನಿಗಳು ಆರ್​ಸಿಬಿ ತಂಡದ ಮಾಜಿ ನಾಯಕ ಕೊಹ್ಲಿ ಮೇಲೆ ಹೆಚ್ಚಿನ ಒಲವು ತೋರಿದ್ದಾರೆ. ಈ ಸರ್ವೆಯಲ್ಲಿ ಭಾಗಿಯಾದವರಲ್ಲಿ 50 ಪ್ರತಿಶತಕ್ಕೂ ಹೆಚ್ಚಿನ ಜನರು ಪುನಃ ಕೊಹ್ಲಿಯನ್ನೇ ಆರ್​ಸಿಬಿ ನಾಯಕನಾಗಿ ಮಾಡಬೇಕೆಂದಿದ್ದಾರೆ. ಉಳಿದಂತೆ 23 ಪ್ರತಿಶತ ಜನರು ಆಫ್ರಿಕಾದ ಅನುಭವಿ ಆರಂಭಿಕ ಆಟಗಾರ ಡು ಪ್ಲೆಸಿಸ್ ಮೇಲೆ ಒಲವು ತೋರಿದ್ದರೆ, 17 ಪ್ರತಿಶತ ಜನರು ಕಾಂಗರೂ ತಂಡದ ಮ್ಯಾಕ್ಸ್​ವೆಲ್ ಪರ ಮತ ಹಾಕಿದ್ದಾರೆ. ಉಳಿದಂತೆ ಭಾರತದ ಮಾಜಿ ವಿಕೆಟ್ ಕೀಪರ್​ ದಿನೇಶ್ ಕಾರ್ತಿಕ್ ಪರ 10 ಪ್ರತಿಶತ ಜನರು ಒಲವು ತೋರಿದ್ದಾರೆ.

ದಿನೇಶ್ ಕಾರ್ತಿಕ್ ಐಪಿಎಲ್ ವೃತ್ತಿಜೀವನ 2008 ರಲ್ಲಿ IPL ಆರಂಭವಾದಾಗ ಕಾರ್ತಿಕ್ ಡೆಲ್ಲಿ ಡೇರ್‌ಡೆವಿಲ್ಸ್‌ನ ಭಾಗವಾಗಿದ್ದರು. ಇಲ್ಲಿ ಅವರು 2010 ರವರೆಗೆ ತಂಡದಲ್ಲಿ ಇದ್ದರು. ಒಟ್ಟು ಮೂರು ಆವೃತ್ತಿಗಳಲ್ಲಿ ಕ್ರಮವಾಗಿ 145, 288 ಮತ್ತು 278 ರನ್ ಗಳಿಸಿದರು. ನಂತರ2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿ 14 ಪಂದ್ಯಗಳಲ್ಲಿ 282 ರನ್ ಗಳಿಸಿದ್ದರು. 2012 ಮತ್ತು 2013 ರಲ್ಲಿ ಮುಂಬೈ ಇಂಡಿಯನ್ಸ್ ಕಾರ್ತಿಕ್​ ಅವರನ್ನು ಖರೀದಿಸಿತ್ತು. 2012ರಲ್ಲಿ 238 ಹಾಗೂ 2013ರಲ್ಲಿ 510 ರನ್ ಗಳಿಸಿದ್ದರು. ನಂತರ 2014 ರಲ್ಲಿ ಅವರು ಮತ್ತೊಮ್ಮೆ ದೆಹಲಿಗೆ ಮರಳಿದರು ಆದರೆ ಮರುವರ್ಷ ದೆಹಲಿ ಅವರನ್ನು ತಂಡದಿಂದ ಕೈಬಿಟ್ಟಿತ್ತು. 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ಧರಿಸಿದ್ದರು. 2016 ಮತ್ತು 2017 ರಲ್ಲಿ ಅವರು ಗುಜರಾತ್ ಲಯನ್ಸ್ ಪರ ಆಡಿದ್ದರು. ಗುಜರಾತ್‌ ಪರ ಆಡಿದ ಕಾರ್ತಿಕ್ 335 ಮತ್ತು 361 ರನ್ ಗಳಿಸಿದರು. 2018 ರಲ್ಲಿ ಗೌತಮ್ ಗಂಭೀರ್ ಕೋಲ್ಕತ್ತಾ ತಂಡ ತೊರೆದಾಗ, ಕೋಲ್ಕತ್ತಾ ಕಾರ್ತಿಕ್ ಅವರನ್ನು ಖರೀದಿಸಿತ್ತು. ಈಗ ಕೋಲ್ಕತ್ತಾದಿಂದ ಹೊರಬಂದ ಕಾರ್ತಿಕ್ ಮತ್ತೊಮ್ಮೆ ಆರ್​ಸಿಬಿ ಸೇರಿದ್ದಾರೆ. ಜೊತೆಗೆ ನಾಯಕತ್ವದ ರೇಸ್​ನಲ್ಲೂ ಇದ್ದಾರೆ.

ಆರ್​ಸಿಬಿ ಪರ ಮ್ಯಾಕ್ಸ್​ವೆಲ್ ಪ್ರದರ್ಶನ

ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ ಗ್ಲೆನ್ ಮ್ಯಾಕ್ಸ್​ವೆಲ್ ಅದ್ಭುತ ಪ್ರದರ್ಶನ ನೀಡಿದ್ದರು. 15 ಪಂದ್ಯಗಳಲ್ಲಿ 513 ರನ್​ ಕಲೆಹಾಕುವ ಮೂಲಕ ಆರ್​ಸಿಬಿ ಪರ ಅತ್ಯಧಿಕ ರನ್​ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ 21 ಸಿಕ್ಸ್​ಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಹೀಗಾಗಿಯೇ ಈ ಬಾರಿ ಆರ್​ಸಿಬಿ ತಂಡವು ಮ್ಯಾಕ್ಸ್​ವೆಲ್ ಅವರನ್ನು ರಿಟೈನ್ ಮಾಡಿಕೊಂಡಿತು.

ಡು ಪ್ಲೆಸಿಸ್ ಸಾಮಥ್ರ್ಯ

ಮೆಗಾ ಹರಾಜಿಗೂ ಮುನ್ನವೇ ಆರ್​ಸಿಬಿ ಫ್ರಾಂಚೈಸಿ ನಾಯಕತ್ವದ ಗುಣಗಳಿರುವ ಆಟಗಾರನ ಖರೀದಿಗೆ ಪ್ಲ್ಯಾನ್ ರೂಪಿಸಿತ್ತು. ಅದರಂತೆ ಆರ್​ಸಿಬಿ ಹಿಟ್​ ಲೀಸ್ಟ್​ನಲ್ಲಿ ಮುಂಚೂಣಿಯಲ್ಲಿದ್ದ ಹೆಸರು ಫಾಫ್ ಡುಪ್ಲೆಸಿಸ್. ಇದೀಗ ಡುಪ್ಲೆಸಿಸ್​ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ನಾಯಕನ ಪಟ್ಟ ಸಿಗುವುದು ಖಚಿತ ಎನ್ನಲಾಗುತ್ತಿದೆ. ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ಇದಕ್ಕಾಗಿ ದೊಡ್ಡ ಮೊತ್ತವೊಂದನ್ನು ಫಾಫ್ ಡುಪ್ಲೆಸಿಸ್​ಗಾಗಿ ತೆಗೆದಿಡಬೇಕಾಯಿತು. ಅದರಂತೆ ಮೆಗಾ ಹರಾಜು ಮೂಲಕ ಫಾಫ್ ಡುಪ್ಲೆಸಿಸ್​ ಅವರನ್ನು ಆರ್​ಸಿಬಿ ಬರೋಬ್ಬರಿ 7 ಕೋಟಿ ರೂ. ನೀಡಿ ಖರೀದಿಸಿದೆ.

ಇನ್ನು ವಿರಾಟ್ ಕೊಹ್ಲಿ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕತ್ವದ ಅನುಭವ ಹೊಂದಿರುವ ಏಕೈಕ ಆಯ್ಕೆ ಫಾಫ್ ಡುಪ್ಲೆಸಿಸ್ ಮಾತ್ರ. ಇನ್-ಫಾರ್ಮ್ ಓಪನರ್ ಕೂಡ ಆಗಿರುವ ಫಾಫ್ ಡು ಪ್ಲೆಸಿಸ್ ಆರ್​ಸಿಬಿ ಮುಂದಿರುವ ಅತ್ಯುತ್ತಮ ಆಯ್ಕೆ. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಡುಪ್ಲೆಸಿಸ್ ಐಪಿಎಲ್ 2022 ರ ಸಂಪೂರ್ಣ ಅವಧಿಗೆ ಲಭ್ಯವಿರುತ್ತಾರೆ. ನಾಯಕತ್ವದ ಗುಣಗಳಿರುವ ಡುಪ್ಲೆಸಿಸ್ ಅವರನ್ನು ಮೊದಲ ಪ್ಲ್ಯಾನ್ ರೂಪಿಸಿ ಖರೀದಿಸಿರುವ ಆರ್​ಸಿಬಿ ಅವರಿಗೇನೇ ಕ್ಯಾಪ್ಟನ್ ಪಟ್ಟ ನೀಡುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ತಂಡದ ನಾಯಕರಾಗಿ ಫಾಫ್ ಡುಪ್ಲೆಸಿಸ್ ಕಾಣಿಸಿಕೊಳ್ಳುವುದು ಖಚಿತವಾಗಿದೆ.

RCB ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹ್ಯಾಝಲ್​ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ಚಾಮ ಮಿಲಿಂದ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ಮಹಿಪಾಲ್ ಲೊಮ್ರೊರ್, ಶೆರ್ಫೇನ್‌ ರುದರ್‌ಫೋರ್ಡ್‌, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್, ವನಿಂದು ಹಸರಂಗ

ಇದನ್ನೂ ಓದಿ:IPL 2022: ಐಪಿಎಲ್ ಡೇಟ್ ಫಿಕ್ಸ್ ಬೆನ್ನಲ್ಲೇ RCB ತಂಡಕ್ಕೆ ಬಿಗ್ ಶಾಕ್

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ