Virat Kohli Century: ಶುಭ್​ಮನ್ ಗಿಲ್ ಸೆಂಚುರಿ ಸ್ಟೈಲ್ ಕಾಪಿ ಮಾಡಿದ ವಿರಾಟ್ ಕೊಹ್ಲಿ: ಇಲ್ಲಿದೆ ನೋಡಿ ವಿಡಿಯೋ

India vs West Indies 2nd Test: ಕೊಹ್ಲಿ ಶತಕ ಸಿಡಿಸಿದಾಗ ಮಾಡಿದ ಸೆಲೆಬ್ರೇಷನ್ ಕೂಡ ವಿಶೇಷವಾಗಿತ್ತು. ಸುಮರು ಐದು ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಶತಕ ಸಿಡಿಸಿದಾಗ ಕೊಹ್ಲಿ ಅವರು ಥೇಟ್ ಶುಭ್​ಮನ್ ಗಿಲ್ ಅವರ ರೀತಿ ಸಂಭ್ರಮಿಸಿದರು.

Virat Kohli Century: ಶುಭ್​ಮನ್ ಗಿಲ್ ಸೆಂಚುರಿ ಸ್ಟೈಲ್ ಕಾಪಿ ಮಾಡಿದ ವಿರಾಟ್ ಕೊಹ್ಲಿ: ಇಲ್ಲಿದೆ ನೋಡಿ ವಿಡಿಯೋ
Virat Kohli and Shubman Gill

Updated on: Jul 22, 2023 | 8:32 AM

ಪೋರ್ಟ್ ಆಫ್ ಸ್ಪೇನ್​ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ (India vs West Indies) ಉತ್ತಮ ಸ್ಥಿತಿಯಲ್ಲಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ (Team India) 438 ರನ್ ಕಲೆಹಾಕಿ ಆಲೌಟ್ ಆಯಿತು. ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿರುವ ಕೆರಿಬಿಯನ್ ಪಡೆ ದ್ವಿತೀಯ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ. ಇನ್ನೂ 352 ರನ್​ಗಳ ಹಿನ್ನಡೆಯಲ್ಲಿದೆ. ಭಾರತ ಪರ ವಿಂಡೀಸ್ ಬೌಲರ್​ಗಳ ಬೆಂಡೆತ್ತಿದ ವಿರಾಟ್ ಕೊಹ್ಲಿ (Virat Kohli) ಆಕರ್ಷಕ ಶತಕ ಸಿಡಿಸಿ ಮಿಂಚಿದರು.

ಮೊದಲ ಟೆಸ್ಟ್​ನಲ್ಲಿ 76 ರನ್ ಸಿಡಿಸಿದ್ದ ಕೊಹ್ಲಿ ದ್ವಿತೀಯ ಟೆಸ್ಟ್​ನಲ್ಲಿ ಕೂಡ ಪರಾಕ್ರಮ ಮೆರೆದರು. ಮೊದಲ ದಿನ 87 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಿರಾಟ್ 29ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಒಟ್ಟಾರೆಯಾಗಿ ಇದು ಕೊಹ್ಲಿಯ 76ನೇ ಸೆಂಚುರಿ ಆಗಿದೆ. 91ನೇ ಓವರ್​ನಲ್ಲಿ ಫೋರ್ ಬಾರಿಸುವ ಮೂಲಕ ಕೊಹ್ಲಿ ಮೂರಂಕಿ ಗಡಿ ತಲುಪಿದರು. ವಿಶೇಷ ಎಂದರೆ ತನ್ನ 500ನೇ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು. ಕೊಹ್ಲಿ ಶತಕ ಸಿಡಿಸಿದಾಗ ಮಾಡಿದ ಸೆಲೆಬ್ರೇಷನ್ ಕೂಡ ವಿಶೇಷವಾಗಿತ್ತು.

ಇದನ್ನೂ ಓದಿ
IND vs BAN: ಇಂದು ಭಾರತ- ಬಾಂಗ್ಲಾ ನಡುವೆ ಸರಣಿ ನಿರ್ಧಾರಕ ಪಂದ್ಯ
World Cup 2023: ಭಾರತ- ಪಾಕ್ ವಿಶ್ವಕಪ್ ಫೈಟ್; ಹೋಟೆಲ್​ಗಳು ಭರ್ತಿ, ಆಸ್ಪತ್ರೆಗಳತ್ತ ಮುಖ ಮಾಡಿದ ಫ್ಯಾನ್ಸ್!
Virat Kohli Century: ಐತಿಹಾಸಿಕ ಟೆಸ್ಟ್​ನಲ್ಲಿ ಶತಕ ಸಿಡಿಸಿ ಮೂವರು ಕ್ರಿಕೆಟ್ ದಿಗ್ಗಜರ ದಾಖಲೆ ಮುರಿದ ವಿರಾಟ್..!
IND vs WI: ಕೊಹ್ಲಿ ಶತಕ, 438 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ವಿಂಡೀಸ್ ದಿಟ್ಟ ಉತ್ತರ

Virat Kohli Century: ಸಚಿನ್ ದಾಖಲೆ ಉಡೀಸ್; 500ನೇ ಪಂದ್ಯದಲ್ಲಿ 76ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ..!

ಸುಮರು ಐದು ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಶತಕ ಸಿಡಿಸಿದಾಗ ಕೊಹ್ಲಿ ಅವರು ಥೇಟ್ ಶುಭ್​ಮನ್ ಗಿಲ್ ಅವರ ರೀತಿ ಸಂಭ್ರಮಿಸಿದರು. ಹೆಲ್ಮೆಟ್ ಹಿಡಿದ ಕೈಯನ್ನು ಹಿಂದಕ್ಕೆ ಮಾಡಿದರೆ ಮತ್ತೊಂದು ಕೈಯಲ್ಲಿದ್ದ ಬ್ಯಾಟ್ ಅನ್ನು ಮುಂದಕ್ಕೆ ಮಾಡಿ ನಮಸ್ಕರಿಸುವಂತೆ ವಿಶೇಷವಾಗಿ ಸೆಲೆಬ್ರೇಷನ್ ಮಾಡಿದರು. ಈ ಹಿಂದೆ ಐಪಿಎಲ್, ಏಕದಿನ ಮತ್ತು ಟೆಸ್ಟ್​ನಲ್ಲಿ ಗಿಲ್ ಶತಕ ಸಿಡಿಸಿದಾಗ ಇದೇರೀತಿ ಸಂಭ್ರಮಿಸಿದ್ದರು. ಅನೇಕರು ಕೊಹ್ಲಿ, ಗಿಲ್ ಅವರ ಸ್ಟೈಲ್ ಕಾಪಿ ಮಾಡಿದರು ಎಂದು ಹೇಳುತ್ತಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.

 

ಕ್ರಿಕೆಟ್ ದಿಗ್ಗಜರ ದಾಖಲೆ ಉಡೀಸ್ ಮಾಡಿದ ಕೊಹ್ಲಿ:

500ನೇ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಕೊಹ್ಲಿ, 29ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿ ಕೆಲ ದಾಖಲೆ ಮುರಿದಿದ್ದಾರೆ. ಒಟ್ಟಾರೆಯಾಗಿ 76ನೇ ಟೆಸ್ಟ್ ಶತಕ ಸಿಡಿಸಿದ ವಿರಾಟ್, 500 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 75 ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಶತಕಗಳ ವಿಚಾರದಲ್ಲಿ ಹಿಂದಿಕ್ಕಿದ್ದಾರೆ. ಅಂತೆಯೆ ವಿಂಡೀಸ್ ವಿರುದ್ಧ 12ನೇ ಶತಕ ಸಿಡಿಸಿದ ಕೊಹ್ಲಿ, ಕೆರಿಬಿಯನ್ನರ ವಿರುದ್ಧ ಅತಿ ಹೆಚ್ಚು ಆತಕ ಸಿಡಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಅಂದರೆ 13 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿರುವ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದು ಶತಕದ ಅವಶ್ಯಕತೆ ಇದೆ. ಇನ್ನು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದವರ ಪಟ್ಟಿಯಲ್ಲಿ ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರನ್ನೂ ಹಿಂದಿಕ್ಕಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us