ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಸವಾಲಿನ ಟಾರ್ಗೆಟ್ ಅನ್ನು ಟೀಮ್ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಗೆದ್ದು ಬೀಗಿತು. ನಾಯಕ ರೋಹಿತ್ ಶರ್ಮಾ (Rohit Sharma) ದಾಖಲೆಯ ಸೆಂಚುರಿ ಸಿಡಿಸಿದರು. ಕೇವಲ 84 ಎಸೆತಗಳಲ್ಲಿ 16 ಫೋರ್, 5 ಸಿಕ್ಸರ್ನೊಂದಿಗೆ 131 ರನ್ ಚಚ್ಚಿದರು. ಕೇವಲ 63 ಎಸೆತಗಳಲ್ಲಿ ಶತಕ ಪೂರೈಸಿದರು. ರೋಹಿತ್ ಸೆಂಚುರಿಯನ್ನು ಇಡೀ ಭಾರತವೇ ಸಂಭ್ರಮಿಸಿತು. ಅದರಲ್ಲೂ ವಿರಾಟ್ ಕೊಹ್ಲಿ ಏನು ಮಾಡಿದರು ನೋಡಿ.
ವಿಶೇಷ ಎಂದರೆ ರೋಹಿತ್ ಶರ್ಮಾ ಶತಕದ ಶಾಟ್ ಹೊಡೆಯುವ ಮುನ್ನವೇ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಸೆಲೆಬ್ರೇಟ್ ಮಾಡಲು ಎದ್ದು ನಿಂತಿದ್ದರು. ಶತಕ ಬಾರಿಸುತ್ತಿದ್ದಂತೆ ಕುಣಿದು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಂತರ ಇತರ ಆಟಗಾರರು ಕೂಡ ಎದ್ದು ನಿಂತು ಹಿಟ್ಮ್ಯಾನ್ಗೆ ಹುರಿದುಂಬಿಸಿದರು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ರೋಹಿತ್‌ಗೆ ಚಪ್ಪಾಳೆ ತಟ್ಟುವ ಮೂಲಕ ಪ್ರೇರೇಪಿಸಿದರು. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
— No-No-Crix (@Hanji_CricDekho) October 11, 2023
ಈ ಪಂದ್ಯ ವೀಕ್ಷಿಸಲು ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ಜೆ ಕೂಡ ಮೈದಾನದಲ್ಲಿ ಹಾಜರಿದ್ದರು. ರೋಹಿತ್ ಶರ್ಮಾ ಸಿಡಿಸುತ್ತಿದ್ದಂತೆ ಇವರು ಕೂಡ ಎದ್ದು ನಿಂತು, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಈ ಸ್ಫೋಟಕ ಶತಕದೊಂದಿಗೆ ರೋಹಿತ್ ಅನೇಕ ದಾಖಲೆ ಕೂಡ ನಿರ್ಮಿಸಿದ್ದಾರೆ.
ಪಂದ್ಯದ ಬಳಿಕ ತನ್ನ ಶತಕದ ಬಗ್ಗೆ ಏನೂ ಹೇಳದ ರೋಹಿತ್ ಶರ್ಮಾ: ಆಡಿದ ಮಾತುಗಳೇನು ನೋಡಿ
ಏಕದಿನ ವಿಶ್ವಕಪ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಜೊತೆಗೆ ಏಕದಿನ ವಿಶ್ವಕಪ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶ್ವ ದಾಖಲೆ ರೋಹಿತ್ ಪಾಲಾಗಿದೆ. ಏಕದಿನ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅತ್ಯಧಿಕ ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ರೋಹಿತ್ ಆಗಿದ್ದಾರೆ.
ಇನ್ನು ಏಕದಿನ ಕ್ರಿಕೆಟ್ನಲ್ಲಿ ವೇಗದ ಶತಕ ಸಿಡಿಸಿದ ಐದನೇ ಭಾರತೀಯ ಎಂಬ ಹಿರಿಮೆಗೂ ಹಿಟ್ಮ್ಯಾನ್ ಪಾತ್ರರಾಗಿದ್ದಾರೆ. 50 ಓವರ್ಗಳ ಪಂದ್ಯದಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ರೋಹಿತ್ ಶರ್ಮಾ 3ನೇ ಸ್ಥಾನಕ್ಕೇರಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ 5 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ