
ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎಂಬ ಮಾತಿದೆ. ಆದರೆ, ಆ ದಾಖಲೆಯನ್ನು ಬರೆದವರು ಸಾಕ್ಷಾತ್ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಆಗಿದ್ದರೆ, ಅದನ್ನು ಮುರಿಯುವ ಸಾಮರ್ಥ್ಯ ಮತ್ಯಾರಿಗಿದೆ? ಈ ಪ್ರಶ್ನೆಗೆ ಸದ್ಯಕ್ಕೆ ಜಗತ್ತಿನ ಮುಂದಿರುವ ಏಕೈಕ ಉತ್ತರ ವಿರಾಟ್ ಕೊಹ್ಲಿ! ಈಗಾಗಲೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ಹಲವು ಐತಿಹಾಸಿಕ ದಾಖಲೆಗಳನ್ನು ಧೂಳೀಪಟ ಮಾಡಿರುವ ಕೊಹ್ಲಿ, ಇದೀಗ ಕ್ರಿಕೆಟ್ ಲೋಕದ ಮತ್ತೊಂದು ಮಹಾನ್ ವರ್ಲ್ಡ್ ರೆಕಾರ್ಡ್ ಮುರಿಯುವ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ.
ಹೌದು, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಕೇವಲ 59 ರನ್ಗಳಿಸಿದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಅದು ಕೂಡ ಏಕದಿನ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳ ಮೂಲಕ 15 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆಯೊಂದಿಗೆ ಎಂಬುದು ವಿಶೇಷ.
ಇದೀಗ ಈ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ ಕೇವಲ 59 ರನ್ಗಳ ಅವಶ್ಯಕತೆಯಿದೆ. ಇತ್ತ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬ್ಯಾಟ್ನಿಂದ 59 ರನ್‌ಗಳು ಮೂಡಿಬಂದರೆ ವಿಶ್ವ ದಾಖಲೆ ಕೊಹ್ಲಿ ಪಾಲಾಗಲಿದೆ.
ಅಂದರೆ ತಿರುವನಂತಪುರದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 59 ರನ್ಗಳಿಸಿದರೆ, ಸಚಿನ್‌ಗಿಂತ ಸುಮಾರು 74 ಇನಿಂಗ್ಸ್ ಮುಂಚಿತವಾಗಿಯೇ ಈ ಐತಿಹಾಸಿಕ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಸ್ವದೇಶದಲ್ಲಿ ಅತಿ ಹೆಚ್ಚು ರನ್: ಭಾರತದ ನೆಲದಲ್ಲಿ ಸಚಿನ್ ತೆಂಡೂಲ್ಕರ್ 164 ಏಕದಿನ ಪಂದ್ಯಗಳಿಂದ 6,976 ರನ್ ಗಳಿಸಿದ್ದಾರೆ. ಪ್ರಸ್ತುತ ಕೊಹ್ಲಿ 130 ಪಂದ್ಯಗಳಿಂದ 6,867 ರನ್ ಗಳಿಸಿದ್ದು, ಸಚಿನ್ ದಾಖಲೆ ಮುರಿಯಲು ಇನ್ನು ಕೇವಲ 110 ರನ್ಗಳ ಅಗತ್ಯವಿದೆ.
7 ಸಾವಿರ ರನ್ಗಳ ದಾಖಲೆ: ಸ್ವದೇಶಿ ಮೈದಾನದಲ್ಲಿ ಒಟ್ಟಾರೆ 7,000 ಏಕದಿನ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲು ವಿರಾಟ್‌ಗೆ ಇನ್ನು 133 ರನ್‌ಗಳು ಬೇಕಾಗಿವೆ.
ಸ್ವದೇಶಿ ಶತಕಗಳ ದಾಖಲೆ: ಭಾರತದಲ್ಲಿ ಸಚಿನ್ ಒಟ್ಟು 42 ಅಂತರರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಸದ್ಯ 41 ಶತಕಗಳೊಂದಿಗೆ ಕೇವಲ ಒಂದು ಹೆಜ್ಜೆ ಹಿಂದಿದ್ದಾರೆ. ಅಂದರೆ ವಿಂಡೀಸ್ ವಿರುದ್ಧ ಸೆಂಚುರಿ ಸಿಡಿಸಿದರೆ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಬಹುದು.
ಇದನ್ನೂ ಓದಿ: ವಿಂಡೀಸ್ ವಿರುದ್ಧ ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್ ಜಗತ್ತಿನ ಮುಕುಟಪ್ರಾಯರಾಗಿದ್ದ ಸಚಿನ್ ತೆಂಡೂಲ್ಕರ್ ಅವರ ಈ ಭರ್ಜರಿ ದಾಖಲೆಗಳನ್ನು ವಿರಾಟ್ ಕೊಹ್ಲಿ ಮುರಿಯುವುದು ಬಹುತೇಕ ಖಚಿತ! ಆದರೆ, ಈ ಐತಿಹಾಸಿಕ ಮೈಲಿಗಲ್ಲು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೇ ಸಾಧ್ಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Published On - 7:36 am, Sun, 27 September 26