ಟೀಂ ಇಂಡಿಯಾ ಮಾಜಿ ನಾಯಕ ಕಿಂಗ್ ಕೊಹ್ಲಿಗೆ (Virat Kohli) ಒಳ್ಳೆಯ ದಿನಗಳು ಆರಂಭವಾಗಿವೆ. ಕೆಲವು ದಿನಗಳ ಹಿಂದೆ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಕೊಹ್ಲಿ, ಏಷ್ಯಾಕಪ್ನಲ್ಲಿ ( Asia Cup 2022) ತಮ್ಮ ಹಳೆಯ ಛಾರ್ಮ್ಗೆ ಮರಳಿದ್ದಾರೆ. ಬರೋಬ್ಬರಿ 1021 ದಿನಗಳ ಬಳಿಕ ಅದರಲ್ಲೂ ಟಿ20 ಕ್ರಿಕೆಟ್ನಲ್ಲಿ ಮೊದಲ ಶತಕ ಸಿಡಿಸಿದ ಕೊಹ್ಲಿ ಟೀಕಕಾರರಿಗೆ ತನ್ನದೆ ಶೈಲಿಯಲ್ಲಿ ಉತ್ತರ ನೀಡಿದ್ದರು. ಈ ಮೂಲಕ ನಾನು ಟಿ20 ವಿಶ್ವಕಪ್ಗೆ ರೆಡಿ ಎಂಬ ಸಂದೇಶ ನೀಡಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ (social media ) ಸದಾ ಆಕ್ಟೀವ್ ಆಗಿರುವ ಕೊಹ್ಲಿ, ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ 200 ಮಿಲಿಯನ್ ಅನುಯಾಯಿಗಳನ್ನು ಗಳಿಸಿದ್ದ ದಾಖಲೆ ಮಾಡಿದ್ದರು. ಈಗ ಟ್ವಿಟರ್ನಲ್ಲೂ (Twitter) ತಮ್ಮ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿರುವ ವಿರಾಟ್, ಟ್ವಿಟರ್ನಲ್ಲಿ ಅನುಯಾಯಿಗಳ ಅರ್ಧಶತಕ ಬಾರಿಸಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
ಈಗಾಗಲೇ ಇನ್ಸ್ಟಾದಲ್ಲಿ 200 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಿಂಗ್, ಟ್ವಿಟರ್ನಲ್ಲಿ 50 ಮಿಲಿಯನ್ ಅಭಿಮಾನಿಗಳನ್ನು ಸಂಪಾಧಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 50 ಮಿಲಿಯನ್ ಅನುಯಾಯಿಗಳನ್ನು ಹೊಂದುವ ಮೂಲಕ ಅತ್ಯಧಿಕ ಅನುಯಾಯಿಗಳನ್ನು ಪಡೆದವರ ಪಟ್ಟಿಯಲ್ಲಿ ಕೊಹ್ಲಿ, ಫುಟ್ಬಾಲ್ ಲೆಜೆಂಡ್ ರೊನಾಲ್ಡೊ ಹಾಗೂ ಎನ್ಬಿಎ ಆಟಗಾರ ಲೆಬ್ರನ್ ಜೇಮ್ಸ್ ಕ್ಲಬ್ಗೆ ಸೇರಿಕೊಂಡಿದ್ದಾರೆ.
ಟ್ವಿಟರ್ನಲ್ಲಿ 50 ಮಿಲಿಯನ್ ಅಭಿಮಾನಿಗಳು
ಟ್ವಿಟರ್ನಲ್ಲಿ 50 ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸಿದ ಕೆಲವೇ ಕೆಲವು ಕ್ರೀಡಾಪಟುಗಳಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ಅತ್ಯಧಿಕ ಅನುಯಾಯಿಗಳನ್ನು ಹೊಂದಿರುವ ಪಟ್ಟಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪ್ರಮುಖ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಮುಂದಿದ್ದಾರೆ, ಇದುವರೆಗೆ ಟ್ವಿಟರ್ನಲ್ಲಿ ಈ ಫುಟ್ಬಾಲ್ ಲೆಜೆಂಡ್ 103 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇವರ ನಂತರ ಸ್ಟಾರ್ ಎನ್ಬಿಎ ಆಟಗಾರ ಜೇಮ್ಸ್ 52 ಮಿಲಿಯನ್ ಫಾಲೋವರ್ಸ್ ಹೊಂದಿದ್ದು 2ನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ ಬಳಿಕ ಈ ಪಟ್ಟಿಯಲ್ಲಿರುವ ಟೀಂ ಇಂಡಿಯಾ ಆಟಗಾರರು
ಸಚಿನ್ ತೆಂಡೂಲ್ಕರ್; ವಿಶ್ವ ಕ್ರಿಕೆಟ್ನ ಕ್ರಿಕೆಟ್ ದೇವರು ಸಚಿನ್ ತೆಂಡಲ್ಕೂರ್, ಕೊಹ್ಲಿ ಬಳಿಕ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಲೆಜೆಂಡ್ಸ್ ಲೀಗ್ನಲ್ಲಿ ಅಬ್ಬರಿಸುತ್ತಿರುವ ಸಚಿನ್, ಇನ್ಸ್ಟಾಗ್ರಾಂನಲ್ಲಿ 31.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ, ಟ್ವಿಟರ್ನಲ್ಲಿ 35.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಜೊತೆಗೆ ಫೇಸ್ಬುಕ್ನಲ್ಲಿ 37 ಮಿಲಿಯನ್ ಅನುಯಾಯಿಗಳನ್ನು ಸಚಿನ್ ಹೊಂದಿದ್ದು, ಅತಿ ಹೆಚ್ಚು ಅನುಯಾಯಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದು, ಇನ್ಸ್ಟಾದಲ್ಲಿ 20.4 ಮಿಲಿಯನ್ ಅನುಯಾಯಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ಟ್ವಿಟರ್ನಲ್ಲಿ 19.3 ಮಿಲಿಯನ್ ಅನುಯಾಯಿಗಳನ್ನು ರೋಹಿತ್ ಹೊಂದಿದ್ದರೆ, ಫೇಸ್ಬುಕ್ನಲ್ಲಿ 20 ಮಿಲಿಯನ್ ಫಾಲೋವರ್ಸ್ಗಳನ್ನು ಸಂಪಾಧಿಸಿದ್ದಾರೆ.
ಹಾರ್ದಿಕ್ ಪಾಂಡ್ಯ: ಟೀ ಇಂಡಿಯಾ ಪ್ರಮುಖ ಆಲ್ರೌಂಡರ್ ಹಾರ್ದಿಕ್ಗೆ ಈ ವರ್ಷ ಉತ್ತಮವಾಗಿದೆ. ಮೊದಲ ಬಾರಿ ಐಪಿಎಲ್ಗೆ ಕಾಲಿಟ್ಟ ಗುಜರಾತ್ ತಂಡವನ್ನು ಚಾಂಪಿಯನ್ ಮಾಡಿದ ಹಾರ್ದಿಕ್ ತಂಡಕ್ಕೆ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದರು. ಈಗ ವಿಶ್ವಕಪ್ಗೆ ಭರ್ಜರಿ ತಯಾರಿ ಮಾಡುತ್ತಿರುವ ಪಾಂಡ್ಯ,ಇನ್ಸ್ಟಾಗ್ರಾಂನಲ್ಲಿ 19.3 ಮಿಲಿಯನ್ ಹಾಗೂ ಟ್ವಿಟರ್ನಲ್ಲಿ 7 ಮಿಲಿಯನ್ ಮತ್ತು ಫೇಸ್ಬುಕ್ನಲ್ಲಿ 10 ಮಿಲಿಯನ್ ಅನುಯಾಯಿಗಳನ್ನು ಸಂಪಾಧಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಹಾರ್ದಿಕ್ 4ನೇ ಸ್ಥಾನದಲ್ಲಿದ್ದಾರೆ.
ಯುವರಾಜ್ ಸಿಂಗ್: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಈ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಟ್ವಿಟರ್ನಲ್ಲಿ 5.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಯುವಿ, ಫೇಸ್ಬುಕ್ನಲ್ಲಿ 10.8 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ಈ ಸಿಕ್ಸರ್ ಕಿಂಗ್ ಇನ್ಸ್ಟಾದಲ್ಲಿ 11.8 ಮಿಲಿಯನ್ ಫಾಲೋವರ್ಸ್ ಬಳಗವನ್ನು ಹೊಂದಿದ್ದಾರೆ.
Published On - 2:39 pm, Wed, 14 September 22