T20 World Cup: ಟಿ20 ವಿಶ್ವಕಪ್​ಗೆ 15 ಸದಸ್ಯರ ತಂಡ ಪ್ರಕಟಿಸಿದ ಬಾಂಗ್ಲಾ; ತಂಡದ ಮಾಜಿ ನಾಯಕನಿಗೆ ಕೋಕ್..!

T20 World Cup: ಕ್ರಿಕೆಟ್ ಬಾಂಗ್ಲಾ 15 ಸದಸ್ಯರನೊಳಗೊಂಡ ತಂಡವನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದೆ. ತಂಡದ ನಾಯಕತ್ವ ಎಂದಿನಂತೆ ಶಕಿಬ್ ಹಲ್ ಹಸನ್ ಕೈಯಲ್ಲಿದ್ದು, ಬಹಳ ದಿನಗಳ ನಂತರ ತಂಡದ ಸ್ಟಾರ್ ಓಪನರ್ ಲಿಟ್ಟನ್ ದಾಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

T20 World Cup: ಟಿ20 ವಿಶ್ವಕಪ್​ಗೆ 15 ಸದಸ್ಯರ ತಂಡ ಪ್ರಕಟಿಸಿದ ಬಾಂಗ್ಲಾ; ತಂಡದ ಮಾಜಿ ನಾಯಕನಿಗೆ ಕೋಕ್..!
Bangladesh cricket team
Follow us
TV9 Web
| Updated By: ಪೃಥ್ವಿಶಂಕರ

Updated on:Sep 14, 2022 | 3:51 PM

ಆಸ್ಟ್ರೇಲಿಯಾದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್​ಗೆ (T20 World Cup) ಪ್ರತಿಯೊಂದು ಕ್ರಿಕೆಟ್ ಆಡುವ ದೇಶಗಳು ತಮ್ಮ ತಂಡಗಳನ್ನು ಈಗಾಗಲೇ ಪ್ರಕಟಿಸಲು ಆರಂಭಿಸಿದ್ದು, ಟೀಂ ಇಂಡಿಯಾ ಕೂಡ ಕೆಲವು ದಿನಗಳ ಹಿಂದೆ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿತ್ತು. ಈಗ ಅದರ ಪಟ್ಟಿಗೆ ಬಾಂಗ್ಲಾದೇಶ ಕೂಡ ಸೇರುತ್ತಿದ್ದು, ಕ್ರಿಕೆಟ್ ಬಾಂಗ್ಲಾ 15 ಸದಸ್ಯರನೊಳಗೊಂಡ ತಂಡವನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದೆ. ತಂಡದ ನಾಯಕತ್ವ ಎಂದಿನಂತೆ ಶಕಿಬ್ ಹಲ್ ಹಸನ್ ಕೈಯಲ್ಲಿದ್ದು, ಬಹಳ ದಿನಗಳ ನಂತರ ತಂಡದ ಸ್ಟಾರ್ ಓಪನರ್ ಲಿಟ್ಟನ್ ದಾಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಅಚ್ಚರಿ ಎಂಬಂತೆ ತಂಡದ ಮಾಜಿ ನಾಯಕ ಮಹಮ್ಮದುಲ್ಲಾ ರಿಯಾದ್​ಗೆ ತಂಡದಿಂದ ಕೋಕ್ ನೀಡಲಾಗಿದೆ.

ಜೊತೆಗೆ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿರುವ ಈ ತಂಡ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದೊಂದಿಗಿನ ತ್ರಿಕೋನ ಸರಣಿಯಲ್ಲೂ ಭಾಗವಹಿಸಲಿದೆ. ಈ ತ್ರಿಕೋನ ಸರಣಿಯು ನ್ಯೂಜಿಲೆಂಡ್‌ನಲ್ಲಿ ಅಕ್ಟೋಬರ್ 7 ರಿಂದ 14 ರವರೆಗೆ ನಡೆಯಲಿದೆ.

ಮಾಜಿ ನಾಯಕನಿಗಿಲ್ಲ ಅವಕಾಶ

ಕಳೆದ ಟಿ20 ವಿಶ್ವಕಪ್​ನಲ್ಲಿ ಆಡಿದ 11 ಪಂದ್ಯದಗಳಲ್ಲಿ 17ರ ಸರಾಸರಿಯಲ್ಲಿ 182 ರನ್​ಗಳಿಸಿದ್ದ ಮಹಮ್ಮದುಲ್ಲಾ, ಈ ವೇಳೆ 103ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿದ್ದರು. ಆದರೆ ಏಷ್ಯಾಕಪ್​ನಲ್ಲಿ ಅಷ್ಟೇನೂ ಛಾಪೂ ಮೂಡಿಸದ ಟಿ20 ತಂಡದ ಮಾಜಿ ನಾಯಕ, 106.12 ರ ಸ್ಟ್ರೈಕ್​ ರೇಟ್​ನಲ್ಲಿ ಕೇವಲ 52 ರನ್ ಗಳಿಸಿದ್ದರು. ಇದುವರೆಗೆ ಬಾಂಗ್ಲಾ ಟಿ20 ತಂಡದ ಪ್ರಮುಖ ಭಾಗವಾಗಿದ್ದ ಮಹಮ್ಮದುಲ್ಲಾಗೆ ಕ್ರಿಕೆಟ್ ಬಾಂಗ್ಲಾ ಈಗ ತಂಡದಿಂದ ಕೋಕ್ ನೀಡಿದೆ. ಬಾಂಗ್ಲಾ ತಮಡದ ಪರ ಅತ್ಯಧಿಕ ಪಂದ್ಯಗಳನ್ನಾಡಿರುವ ಮಹಮ್ಮದುಲ್ಲಾ ಮುಂದಿನ ದಿನಗಳಲ್ಲಿ ಹೇಗೆ ಪುಟಿದೇಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಮಹಮ್ಮದುಲ್ಲಾ ಆಯ್ಕೆಯಾಗದಿರುವ ಬಗ್ಗೆ ಮೌನ ಮುರಿದ ಬಾಂಗ್ಲಾ ತಂಡದ ನಿರ್ಧೇಶಕ ಖಲೀದ್ ಸುಜೋನ್, ಕಳೆದ ಕೆಲವು ತಿಂಗಳಿಂದ ಆಡಿದ ಸರಣಿಗಳಲ್ಲಿ ಮಹಮ್ಮದುಲ್ಲಾ ನಮ್ಮ ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ತಂಡದಿಂದ ಕೈಬೀಡಲಾಗಿದೆ ಎಂದಿದ್ದಾರೆ. ಅಲ್ಲದೆ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಅವರನ್ನು ಈ ವರ್ಷದ ಆರಂಭದಲ್ಲಿ ತಂಡದ ನಾಯಕತ್ವದಿಂದ ಕಿತ್ತುಹಾಕಲಾಗಿತ್ತು.

3 ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ

ಕೆಲವೊಂದು ಅಚ್ಚರಿಯ ಆಯ್ಕೆಗಳನ್ನು ಮಾಡಿರುವ ಬಾಂಗ್ಲಾ ತಂಡ ಏಷ್ಯಾಕಪ್​ನಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನಾಡಿ ಉತ್ತಮ ಪ್ರದರ್ಶನ ನೀಡಿದ್ದ ಶಬೀರ್ ರೆಹಮಾನ್ 3 ವರ್ಷಗಳ ಬಳಿಕ ತಂಡದಲ್ಲಿ ತಮ್ಮ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ಇಂಜುರಿಯಿಂದ ಚೇತರಿಸಿಕೊಂಡಿದ್ದ ತಂಡದ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಹಾಗೂ ನೂರುಲ್ ಹಸನ್ ಸೋಹನ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಮ್ಮದುಲ್ಲಾ ಜೊತೆಗೆ ತಂಡದ ಮತ್ತೊಬ್ಬ ಆಟಗಾರ ಮಹೇದಿ ಹಸನ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಹಸನ್​ಗೆ ಸ್ಟಾಂಡ್​ ಬೈ ಆಟಗಾರರ ಲಿಸ್ಟ್​ನಲ್ಲಿ ಸ್ಥಾನ ನೀಡಲಾಗಿದೆ. ಇವರೊಂದಿಗೆ ಸೌಮ್ಯ ಸರ್ಕಾರ್, ಲೆಗ್ ಸ್ಪಿನ್ನರ್ ರಿಷಾದ್ ಹೊಸೈನ್ ಮತ್ತು ಎಡಗೈ ಆಟಗಾರ ಶೋರಿಫುಲ್ ಇಸ್ಲಾಂ ಕೂಡ ಸ್ಟಾಂಡ್​ ಬೈ ಆಟಗಾರರಾಗಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಆಕ್ಟೋಬರ್ 24 ರಂದು ತನ್ನ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ಆಡಲಿದೆ.

ಟಿ20 ವಿಶ್ವಕಪ್​ಗೆ ಬಾಂಗ್ಲಾ ತಂಡ: ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಯಾಸಿರ್ ಅಲಿ, ನೂರುಲ್ ಹಸನ್, ಸಬ್ಬೀರ್, ನಜ್ಮುಲ್ ಹೊಸೈನ್, ಶಾಂತೋ, ಮೊಸದ್ದೆಕ್, ಮೆಹದಿ ಹಸನ್, ಸೈಫುದ್ದೀನ್, ಮುಸ್ತಾಫಿಜುರ್, ಹಸನ್ ಮಹಮೂದ್, ತಸ್ಕಿನ್, ಎಬ್ಡೋತ್, ನಸುಮ್ ಅಹ್ಮದ್

ಸ್ಟ್ಯಾಂಡ್ ಬೈ ಆಟಗಾರರು

ಶೋರಿಫುಲ್ ಇಸ್ಲಾಂ, ರಿಶಾದ್ ಹೊಸೈನ್, ಮಹೇದಿ ಹಸನ್, ಸೌಮ್ಯ ಸರ್ಕಾರ್

Published On - 3:22 pm, Wed, 14 September 22

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್