Breaking News: ಬಿಸಿಸಿಐನಲ್ಲಿ ಗಂಗೂಲಿ- ಜೈ ಶಾ ಅಧಿಕಾರಾವಧಿ ವಿಸ್ತರಣೆ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

BCCI: ಮಂಡಳಿಯ ಅಧಿಕಾರಿಗಳ ಅಧಿಕಾರಾವಧಿ ಮತ್ತು ಕೂಲಿಂಗ್-ಆಫ್ ಅವಧಿಗೆ ಸಂಬಂಧಿಸಿದ ಹಳೆಯ ನಿಯಮಗಳನ್ನು ಸಡಿಲಿಸಿ, ಬಿಸಿಸಿಐ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

Breaking News: ಬಿಸಿಸಿಐನಲ್ಲಿ ಗಂಗೂಲಿ- ಜೈ ಶಾ ಅಧಿಕಾರಾವಧಿ ವಿಸ್ತರಣೆ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
Sourav Ganguly and Jay Shah
Follow us
TV9 Web
| Updated By: ಪೃಥ್ವಿಶಂಕರ

Updated on:Sep 14, 2022 | 5:39 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಮತ್ತು ಕಾರ್ಯದರ್ಶಿ ಜಯ್ ಶಾ (Jay Shah) ಅವರ ಆಶಯಗಳು ಅಂದುಕೊಂಡಂತೆಯೆ ಈಡೇರಿವೆ. ಇಬ್ಬರೂ ಮುಂದಿನ ಮೂರು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿ ಉಳಿಯುವುದಕ್ಕೆ ದಾರಿ ಸುಗಮವಾಗಿದೆ. ಬಿಸಿಸಿಐನ ಸಂವಿಧಾನ ಬದಲಾವಣೆಗೆ ಸಂಬಂಧಿಸಿದಂತೆ ಮೂರು ವರ್ಷಗಳ ಹಿಂದೆ ಸಲ್ಲಿಸಲಾಗಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ (Supreme Court) ಮಹತ್ವದ ತೀರ್ಪು ಅಂತಿಮವಾಗಿ ಹೊರಬಿದ್ದಿದೆ. ಮಂಡಳಿಯ ಅಧಿಕಾರಿಗಳ ಅಧಿಕಾರಾವಧಿ ಮತ್ತು ಕೂಲಿಂಗ್-ಆಫ್ ಅವಧಿಗೆ ಸಂಬಂಧಿಸಿದ ಹಳೆಯ ನಿಯಮಗಳನ್ನು ಸಡಿಲಿಸಿ, ಬಿಸಿಸಿಐ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಸುಮಾರು ಮೂರು ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಈ ತಿದ್ದುಪಡಿ ಮೇಲ್ಮನವಿ ವಿಚಾರಣೆಯಲ್ಲಿತ್ತು. ಸೆಪ್ಟೆಂಬರ್ 14 ಬುಧವಾರದಂದು ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಅಂತಿಮ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ ನ್ಯಾಯಾಲಯವು ಬಿಸಿಸಿಐನ ಮನವಿಯನ್ನು ಸ್ವೀಕರಿಸಿದ್ದು, ಅಧಿಕಾರಾವಧಿಗೆ ಸಂಬಂಧಿಸಿದಂತೆ ಮಂಡಳಿಯು ಪ್ರಸ್ತಾಪಿಸಿದ ತಿದ್ದುಪಡಿಗಳಿಗೆ ಅನುಮತಿ ನೀಡಿದೆ. ಈ ಕಾರಣದಿಂದ ಗಂಗೂಲಿ ಮತ್ತು ಶಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಹುದ್ದೆಗಳಲ್ಲಿ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ.

What was the tenure-cooling off rule? After the corruption cases in BCCI, the Supreme Court-appointed Lodha committee prepared a new constitution of the board. The Supreme Court accepted this constitution in 2019 with some changes. Under this, no office bearer can hold any post or different posts for more than 6 consecutive years (two terms of 3-3 years). This included 6 years in the state association or BCCI or 6 years in combination. After this it was mandatory to go on a cooling off period of 3 years.

ಅಧಿಕಾರಾವಧಿ-ಕೂಲಿಂಗ್ ಆಫ್ ನಿಯಮ ಹೇಳುವುದೇನು?

ಬಿಸಿಸಿಐನಲ್ಲಿನ ಭ್ರಷ್ಟಾಚಾರದ ಪ್ರಕರಣಗಳು ಒಂದೊಂದಾಗಿ ಹೊರಬರಲು ಆರಂಭಿಸಿದ್ದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್, ಇದರ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಲೋಧಾರವರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತ್ತು. ಪೂರ್ಣ ತನಿಖೆ ನಡೆಸಿದ್ದ ಲೋಧಾ ಸಮಿತಿಯು ಬಿಸಿಸಿಐಗೆ ಸಂಬಂಧಿಸಿದಂತೆ ಹೊಸ ಸಂವಿಧಾನವನ್ನು ಸಿದ್ಧಪಡಿಸಿತು. ಸುಪ್ರೀಂ ಕೋರ್ಟ್ 2019 ರಲ್ಲಿ ಕೆಲವು ಬದಲಾವಣೆಗಳೊಂದಿಗೆ ಈ ಸಂವಿಧಾನವನ್ನು ಅಂಗೀಕರಿಸಿತು. ಇದರ ಅಡಿಯಲ್ಲಿ, ಯಾವುದೇ ಪದಾಧಿಕಾರಿಗಳು ಸತತ 6 ವರ್ಷಗಳಿಗಿಂತ ಹೆಚ್ಚು (3-3 ವರ್ಷಗಳ ಎರಡು ಅವಧಿ) ಯಾವುದೇ ಹುದ್ದೆಯನ್ನು ಬಿಸಿಸಿಐ ಹಾಗೂ ಇದರ ಅಡಿಯಲ್ಲಿ ಬರುವ ರಾಜ್ಯ ಮಂಡಳಿಗಳಲ್ಲಿ ಹೊಂದುವಂತಿರಿಲ್ಲ. ಅಲ್ಲದೆ ಹೊಸ ಸಂವಿಧಾನದ ಪ್ರಕಾರ 6 ವರ್ಷಗಳ ಅಧಿಕಾರ ನಡೆಸಿದ ಬಳಿಕ ಆ ಅಧಿಕಾರ 3 ವರ್ಷಗಳ ಕೂಲಿಂಗ್ ಆಫ್ ಅವಧಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿತ್ತು

ಬಿಸಿಸಿಐ ಮೇಲ್ಮನವಿ, ಸುಪ್ರೀಂ ಕೋರ್ಟ್ ತೀರ್ಪು

ಅಕ್ಟೋಬರ್ 2019 ರಲ್ಲಿ, ಗಂಗೂಲಿ ಮತ್ತು ಶಾ ಚುನಾವಣೆಯಲ್ಲಿ ಗೆದ್ದ ನಂತರ ಮಂಡಳಿಯಲ್ಲಿ ತಮ್ಮ ಅಧಿಕಾರವನ್ನು ವಹಿಸಿಕೊಂಡಿದ್ದರು. ಆ ಬಳಿಕ ಡಿಸೆಂಬರ್‌ನಲ್ಲಿ ಬಿಸಿಸಿಐ, ಇತರ ಕೆಲವು ನಿಯಮಗಳನ್ನು ಒಳಗೊಂಡಂತೆ ಈ ನಿಬಂಧನೆಯನ್ನು ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತು. ರಾಜ್ಯ ಅಸೋಸಿಯೇಷನ್ ​​ಮತ್ತು ಬಿಸಿಸಿಐನ ಷರತ್ತುಗಳನ್ನು ಒಟ್ಟಿಗೆ ಬೆರೆಸುವುದು ಸರಿಯಲ್ಲ ಎಂದು ಮಂಡಳಿ ತನ್ನ ಮೇಲ್ಮನವಿಯಲ್ಲಿ ಉಲ್ಲೇಖ ಮಾಡಿತ್ತು. ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಸತತ ಆರು ವರ್ಷ ಅಥವಾ ಬಿಸಿಸಿಐನಲ್ಲಿ ಏಕಕಾಲಕ್ಕೆ ಸತತ ಆರು ವರ್ಷ ಅಧಿಕಾರ ನಡೆಸಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್​ ಬಳಿ ಮನವಿ ಮಾಡಿತ್ತು.

ಸುಪ್ರೀಂ ಕೋರ್ಟ್ ಬಿಸಿಸಿಐ ಮನವಿಯನ್ನು ಅನುಮೋದಿಸಿದ್ದು, ರಾಜ್ಯ ಅಥವಾ ಬಿಸಿಸಿಐನಲ್ಲಿನ ಪದಾಧಿಕಾರಿಗಳು ಸತತ ಎರಡು ಅವಧಿಗೆ ಯಾವುದೇ ಒಂದು ಹುದ್ದೆಯಲ್ಲಿ ಮುಂದುವರಿಯಲು ಸಮರ್ಥರಾಗಿರಲಿದ್ದಾರೆ. ಆದರೆ ಆ ಬಳಿಕ ಆ ಅಧಿಕಾರಿ ಖಡ್ಡಾಯವಾಗಿ ಮುಂದಿನ 3 ವರ್ಷಗಳವರೆಗೆ ಕೂಲಿಂಗ್ ಆಫ್ ಅವಧಿಯನ್ನು ಪೂರ್ಣಗೊಳಿಸಬೇಕೆಂದು ಸುಪ್ರೀಂ ಆದೇಶ ಹೊರಡಿಸಿದೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:03 pm, Wed, 14 September 22

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ