‘ಮೆಗಾ ಬ್ಲಾಕ್‌ಬಸ್ಟರ್’; ಕನ್ನಡತಿ ರಶ್ಮಿಕಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ರೋಹಿತ್- ಗಂಗೂಲಿ..! ಪೋಸ್ಟರ್ ನೋಡಿ

Mega Blockbuster: ರೋಹಿತ್, ಗಂಗೂಲಿ ಮಾತ್ರವಲ್ಲ, ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇಂತಹ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ.

‘ಮೆಗಾ ಬ್ಲಾಕ್‌ಬಸ್ಟರ್’; ಕನ್ನಡತಿ ರಶ್ಮಿಕಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ರೋಹಿತ್- ಗಂಗೂಲಿ..! ಪೋಸ್ಟರ್ ನೋಡಿ
Follow us
TV9 Web
| Updated By: ಪೃಥ್ವಿಶಂಕರ

Updated on:Sep 02, 2022 | 2:44 PM

ಭಾರತ ತಂಡ ಪ್ರಸ್ತುತ ಏಷ್ಯಾ ಕಪ್-2022 (Asia Cup-2022) ರಲ್ಲಿ ಭಾಗವಹಿಸುತ್ತಿದೆ. ತಂಡ ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದು, ಸೂಪರ್-4ಗೆ ಲಗ್ಗೆ ಇಟ್ಟಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ನಂತರ ಹಾಂಕಾಂಗ್ ತಂಡವನ್ನು 40 ರನ್​ಗಳಿಂದ ಸೋಲಿಸಿತು. ಈ ವೇಳೆ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಕೆಲವು ಮೈಲುಗಲ್ಲುಗಳನ್ನು ಸಾಧಿಸಿದರು. ನಾಯಕನಾಗಿ 37 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 31 ಪಂದ್ಯಗಳನ್ನು ಗೆಲ್ಲುವಲ್ಲಿ ರೋಹಿತ್ ಯಶಸ್ವಿಯಾಗಿದ್ದಾರೆ. ಆದರೆ ಈ ಮಧ್ಯೆ ರೋಹಿತ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅಭಿಮಾನಿಗಳು ಅಚ್ಚರಿಪಡುವ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಭಾರತ ತಂಡ ಏಷ್ಯಾಕಪ್-2022 ರಲ್ಲಿ ತನ್ನ ಸೂಪರ್-4 ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ಅಲ್ಲಿ ಭಾರತ, ಪಾಕಿಸ್ತಾನ ಅಥವಾ ಹಾಂಕಾಂಗ್ ತಂಡವನ್ನು ಎದುರಿಸಬಹುದು. ಆದರೆ ಈ ನಡುವೆ ರೋಹಿತ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು ಆ ಫೋಟೋ ಯಾವುದೋ ಚಲನಚಿತ್ರದ ಪೋಸ್ಟರ್​ನಂತಿದೆ. ಈ ಫೋಟೋದಲ್ಲಿ ರೋಹಿತ್ ಒಬ್ಬರೇ ಇದ್ದು ಫೋಟೋ ಮೇಲೆ ‘ಮೆಗಾ ಬ್ಲಾಕ್ ಬಸ್ಟರ್’ ಎಂದು ಬರೆದು ಅದರ ಜತೆಗೆ ‘ಟ್ರೇಲರ್ 4ರಂದು ಬಿಡುಗಡೆಯಾಗಲಿದೆ’ ಎಂದು ಬರೆಯಲಾಗಿದೆ. ಫೋಟೋ ಹಂಚಿಕೊಂಡಿರುವ ರೋಹಿತ್ ಶೀರ್ಷಿಕೆಯಲ್ಲಿ, “ನಾನು ಸ್ವಲ್ಪ ನರ್ವಸ್ ಆಗಿದ್ದೇನೆ. ಇದು ಒಂದು ರೀತಿಯ ಚೊಚ್ಚಲ ಪ್ರಯತ್ನವಾಗಿದೆ ಎಂದು ಬರೆದುಕೊಂಡಿದ್ದಾರೆ.

ಗಂಗೂಲಿಯದ್ದು ಅದೇ ಕಥೆ

ರೋಹಿತ್ ಮಾತ್ರವಲ್ಲ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಕೂಡ ರೋಹಿತ್ ಮಾಡಿದಂತೆಯೇ ಮಾಡಿದ್ದಾರೆ. ಗಂಗೂಲಿ ಅವರು ಸ್ವತಃ ಇನ್ಸ್ಟಾಗ್ರಾಮ್ನಲ್ಲಿ ಚಿತ್ರದ ಪೋಸ್ಟರ್ನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟರ್​ಗೂ ರೋಹಿತ್ ಪೋಸ್ಟರ್​ಗೂ ಸಾಕಷ್ಟು ಸಾಮ್ಯತೆ ಇದೆ. ಗಂಗೂಲಿ ಈ ಪೋಸ್ಟ್‌ನೊಂದಿಗೆ ಶೀರ್ಷಿಕೆಯಲ್ಲಿ, ಚಿತ್ರೀಕರಣವನ್ನು ತುಂಬಾ ಆನಂದಿಸಿದೆ, ಹೊಸ ಮೆಗಾ ಬ್ಲಾಕ್‌ಬಸ್ಟರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

ರೋಹಿತ್, ಗಂಗೂಲಿ ಮಾತ್ರವಲ್ಲ, ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇಂತಹ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ.

ಏನಿದು ರಹಸ್ಯ?

ರೋಹಿತ್ ಮತ್ತು ಗಂಗೂಲಿ ಇಬ್ಬರೂ ತಮ್ಮ ಪೋಸ್ಟ್‌ಗಳಲ್ಲಿ ಏನನ್ನು ಬಿಡುಗಡೆ ಮಾಡಲು ಕಾಯುತ್ತಿದ್ದಾರೆ ಎಂಬುದರ ಕುರಿತು ಸುಳಿವು ನೀಡಿಲ್ಲ. ಇದೀಗ ಇವರಿಬ್ಬರು ಏನು ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ. ಪೋಸ್ಟ್ ನೋಡಿದರೆ ಇಬ್ಬರೂ ಯಾವುದೋ ಚಿತ್ರದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೋಹಿತ್ ರಶ್ಮಿಕಾ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡಲಾರಂಭಿಸಿವೆ.

ಪಾಕಿಸ್ತಾನದೊಂದಿಗೆ ಮತ್ತೆ ಪೈಪೋಟಿ!

ಸೆಪ್ಟೆಂಬರ್ 4 ರಂದು ಏನಾದರೂ ಆಗಬಹುದು. ಆದರೆ ಅದಕ್ಕೂ ಮೊದಲು ಟೀಂ ಇಂಡಿಯಾ ಮತ್ತು ಅದರ ಅಭಿಮಾನಿಗಳ ಕಣ್ಣುಗಳು ಶುಕ್ರವಾರ ಹಾಂಕಾಂಗ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಫಲಿತಾಂಶದ ಮೇಲೆ ನೆಟ್ಟಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆಲ್ಲುವ ತಂಡ ಭಾರತದ ವಿರುದ್ಧ ಪಂದ್ಯವನ್ನು ಆಡಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಟೀಂ ಇಂಡಿಯಾ ಕಣ್ಣಿಟ್ಟಿದೆ. ಅಂದಹಾಗೆ, ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಕಣಕ್ಕಿಳಿಯುವುದನ್ನು ನೋಡುವ ಸಲುವಾಗಿ, ಈ ಪಂದ್ಯವನ್ನು ಪಾಕಿಸ್ತಾನ ಗೆಲ್ಲಬೇಕೆಂದು ಭಾರತದ ಅಭಿಮಾನಿಗಳು ಬಯಸುತ್ತಿದ್ದಾರೆ.

Published On - 2:44 pm, Fri, 2 September 22