ಬಹುತೇಕ ಎಲ್ಲಾ ತಂಡಗಳು ಟಿ20 ವಿಶ್ವಕಪ್‌ಗೆ ತಮ್ಮ ತಯಾರಿಯನ್ನು ತೀವ್ರಗೊಳಿಸಿವೆ. ಕೆಲವು ತಂಡಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಅಷ್ಟೇ ಅಲ್ಲ, ತಂಡಗಳು ತಮ್ಮ ಕೋಚಿಂಗ್ ಸಿಬ್ಬಂದಿಯನ್ನು ಮತ್ತಷ್ಟು ಬಲಪಡಿಸುತ್ತಿವೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಇದೇ ರೀತಿಯ ಕೆಲಸವನ್ನು ಮಾಡಿದ್ದು ಇದಕ್ಕಾಗಿ ಇಬ್ಬರು ಆಸ್ಟ್ರೇಲಿಯಾದ ದಿಗ್ಗಜರ ಸಹಾಯವನ್ನು ತೆಗೆದುಕೊಂಡಿದೆ.
ಇಂಗ್ಲೆಂಡ್‌ನ ODI ಮತ್ತು T20 ಕೋಚ್ ಮ್ಯಾಥ್ಯೂ ಮೋಟ್ ಅವರು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮೈಕೆಲ್ ಹಸ್ಸಿ ಮತ್ತು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಡೇವಿಡ್ ಸೆಕರ್ ಅವರನ್ನು ವಿಶ್ವಕಪ್ ತಯಾರಿಗಾಗಿ ಕೋಚಿಂಗ್ ಸ್ಟಾಫ್‌ನಲ್ಲಿ ಸಲಹೆಗಾರರಾಗಿ ಸೇರಿಸಿಕೊಂಡಿದ್ದಾರೆ.
ಟಿ20 ವಿಶ್ವಕಪ್ ವೇಳೆ ಹಸ್ಸಿ ಆಸ್ಟ್ರೇಲಿಯದಲ್ಲಿ ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್ ಮಂಡಳಿ ತಿಳಿಸಿದೆ. ಅದೇ ಸಮಯದಲ್ಲಿ, ಇಂಗ್ಲೆಂಡ್‌ನ ಮಾಜಿ ಬೌಲಿಂಗ್ ಕೋಚ್ ಆಗಿದ್ದ ಸೇಕರ್ ಈ ತಿಂಗಳ ಪಾಕಿಸ್ತಾನ ಪ್ರವಾಸದಿಂದ ತಂಡದೊಂದಿಗೆ ತಮ್ಮ ಕೆಲಸವನ್ನು ಪ್ರಾರಂಭಿಸಲಿದ್ದಾರೆ.
ಅಂದಹಾಗೆ, ಇಂಗ್ಲೆಂಡ್‌ಗಿಂತ ಮೊದಲು, ಪಾಕಿಸ್ತಾನವು ತನ್ನ ಕೋಚಿಂಗ್ ಸ್ಟಾಫ್‌ನಲ್ಲಿ ಆಸ್ಟ್ರೇಲಿಯಾದ ದಂತಕಥೆಯನ್ನೂ ಸೇರಿಸಿಕೊಂಡಿತು. ಕಳೆದ ವರ್ಷದ ಟಿ 20 ವಿಶ್ವಕಪ್‌ನಂತೆ, ಪಿಸಿಬಿ ಮತ್ತೊಮ್ಮೆ ಅನುಭವಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್‌ರನ್ನು ವಿಶ್ವಕಪ್‌ಗೆ ಬ್ಯಾಟಿಂಗ್ ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.
ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಂಡ - ಜೋಸ್ ಬಟ್ಲರ್ (ನಾಯಕ), ಅಲೆಕ್ಸ್ ಹೇಲ್ಸ್, ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್.
Published On - 7:22 pm, Wed, 14 September 22