AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಟ್ವಿಟರ್​ನಲ್ಲಿ ಅರ್ಧಶತಕ ಭಾರಿಸಿದ ಕೊಹ್ಲಿ; ಸೋಶಿಯಲ್ ಮೀಡಿಯಾದಲ್ಲಿ ಈ ದಾಖಲೆ ಬರೆದ ಮೊದಲ ಕ್ರಿಕೆಟರ್..!

Virat Kohli: ಟ್ವಿಟರ್​ನಲ್ಲೂ ತಮ್ಮ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿರುವ ವಿರಾಟ್, ಟ್ವಿಟರ್​ನಲ್ಲಿ ಅನುಯಾಯಿಗಳ ಅರ್ಧಶತಕ ಬಾರಿಸಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

Virat Kohli: ಟ್ವಿಟರ್​ನಲ್ಲಿ ಅರ್ಧಶತಕ ಭಾರಿಸಿದ ಕೊಹ್ಲಿ; ಸೋಶಿಯಲ್ ಮೀಡಿಯಾದಲ್ಲಿ ಈ ದಾಖಲೆ ಬರೆದ ಮೊದಲ ಕ್ರಿಕೆಟರ್..!
ಈ ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕಿಂಗ್ ಪಾತ್ರರಾಗಲಿದ್ದಾರೆ. ಇದುವರೆಗೆ ಭಾರತದ ಯಾವುದೇ ಬ್ಯಾಟ್ಸ್‌ಮನ್ ಟಿ20 ಮಾದರಿಯಲ್ಲಿ ಇಷ್ಟು ರನ್ ಗಳಿಸಿಲ್ಲ.
TV9 Web
| Edited By: |

Updated on:Sep 14, 2022 | 2:54 PM

Share

ಟೀಂ ಇಂಡಿಯಾ ಮಾಜಿ ನಾಯಕ ಕಿಂಗ್ ಕೊಹ್ಲಿಗೆ (Virat Kohli) ಒಳ್ಳೆಯ ದಿನಗಳು ಆರಂಭವಾಗಿವೆ. ಕೆಲವು ದಿನಗಳ ಹಿಂದೆ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಕೊಹ್ಲಿ, ಏಷ್ಯಾಕಪ್​ನಲ್ಲಿ ( Asia Cup 2022) ತಮ್ಮ ಹಳೆಯ ಛಾರ್ಮ್​ಗೆ ಮರಳಿದ್ದಾರೆ. ಬರೋಬ್ಬರಿ 1021 ದಿನಗಳ ಬಳಿಕ ಅದರಲ್ಲೂ ಟಿ20 ಕ್ರಿಕೆಟ್​ನಲ್ಲಿ ಮೊದಲ ಶತಕ ಸಿಡಿಸಿದ ಕೊಹ್ಲಿ ಟೀಕಕಾರರಿಗೆ ತನ್ನದೆ ಶೈಲಿಯಲ್ಲಿ ಉತ್ತರ ನೀಡಿದ್ದರು. ಈ ಮೂಲಕ ನಾನು ಟಿ20 ವಿಶ್ವಕಪ್​ಗೆ ರೆಡಿ ಎಂಬ ಸಂದೇಶ ನೀಡಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ (social media ) ಸದಾ ಆಕ್ಟೀವ್ ಆಗಿರುವ ಕೊಹ್ಲಿ, ಈ ಹಿಂದೆ ಇನ್ಸ್​ಟಾಗ್ರಾಂನಲ್ಲಿ 200 ಮಿಲಿಯನ್ ಅನುಯಾಯಿಗಳನ್ನು ಗಳಿಸಿದ್ದ ದಾಖಲೆ ಮಾಡಿದ್ದರು. ಈಗ ಟ್ವಿಟರ್​ನಲ್ಲೂ (Twitter) ತಮ್ಮ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿರುವ ವಿರಾಟ್, ಟ್ವಿಟರ್​ನಲ್ಲಿ ಅನುಯಾಯಿಗಳ ಅರ್ಧಶತಕ ಬಾರಿಸಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಈಗಾಗಲೇ ಇನ್ಸ್​ಟಾದಲ್ಲಿ 200 ಮಿಲಿಯನ್ ಫಾಲೋವರ್ಸ್​ ಹೊಂದಿರುವ ಕಿಂಗ್, ಟ್ವಿಟರ್​ನಲ್ಲಿ 50 ಮಿಲಿಯನ್ ಅಭಿಮಾನಿಗಳನ್ನು ಸಂಪಾಧಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 50 ಮಿಲಿಯನ್ ಅನುಯಾಯಿಗಳನ್ನು ಹೊಂದುವ ಮೂಲಕ ಅತ್ಯಧಿಕ ಅನುಯಾಯಿಗಳನ್ನು ಪಡೆದವರ ಪಟ್ಟಿಯಲ್ಲಿ ಕೊಹ್ಲಿ, ಫುಟ್ಬಾಲ್ ಲೆಜೆಂಡ್ ರೊನಾಲ್ಡೊ ಹಾಗೂ ಎನ್​ಬಿಎ ಆಟಗಾರ ಲೆಬ್ರನ್ ಜೇಮ್ಸ್ ಕ್ಲಬ್​ಗೆ ಸೇರಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ 50 ಮಿಲಿಯನ್ ಅಭಿಮಾನಿಗಳು

ಟ್ವಿಟರ್​ನಲ್ಲಿ 50 ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸಿದ ಕೆಲವೇ ಕೆಲವು ಕ್ರೀಡಾಪಟುಗಳಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ಅತ್ಯಧಿಕ ಅನುಯಾಯಿಗಳನ್ನು ಹೊಂದಿರುವ ಪಟ್ಟಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪ್ರಮುಖ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಮುಂದಿದ್ದಾರೆ, ಇದುವರೆಗೆ ಟ್ವಿಟರ್​ನಲ್ಲಿ ಈ ಫುಟ್ಬಾಲ್ ಲೆಜೆಂಡ್ 103 ಮಿಲಿಯನ್ ಫಾಲೋವರ್ಸ್​ ಹೊಂದಿದ್ದಾರೆ. ಇವರ ನಂತರ ಸ್ಟಾರ್ ಎನ್​ಬಿಎ ಆಟಗಾರ ಜೇಮ್ಸ್ 52 ಮಿಲಿಯನ್ ಫಾಲೋವರ್ಸ್​ ಹೊಂದಿದ್ದು 2ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಬಳಿಕ ಈ ಪಟ್ಟಿಯಲ್ಲಿರುವ ಟೀಂ ಇಂಡಿಯಾ ಆಟಗಾರರು

ಸಚಿನ್ ತೆಂಡೂಲ್ಕರ್; ವಿಶ್ವ ಕ್ರಿಕೆಟ್​ನ ಕ್ರಿಕೆಟ್ ದೇವರು ಸಚಿನ್ ತೆಂಡಲ್ಕೂರ್, ಕೊಹ್ಲಿ ಬಳಿಕ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಲೆಜೆಂಡ್ಸ್ ಲೀಗ್​ನಲ್ಲಿ ಅಬ್ಬರಿಸುತ್ತಿರುವ ಸಚಿನ್, ಇನ್ಸ್​ಟಾಗ್ರಾಂನಲ್ಲಿ 31.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ, ಟ್ವಿಟರ್​ನಲ್ಲಿ 35.9 ಮಿಲಿಯನ್ ಫಾಲೋವರ್ಸ್​ ಹೊಂದಿದ್ದಾರೆ. ಜೊತೆಗೆ ಫೇಸ್​ಬುಕ್​ನಲ್ಲಿ 37 ಮಿಲಿಯನ್ ಅನುಯಾಯಿಗಳನ್ನು ಸಚಿನ್ ಹೊಂದಿದ್ದು, ಅತಿ ಹೆಚ್ಚು ಅನುಯಾಯಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದು, ಇನ್ಸ್​ಟಾದಲ್ಲಿ 20.4 ಮಿಲಿಯನ್ ಅನುಯಾಯಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ಟ್ವಿಟರ್​ನಲ್ಲಿ 19.3 ಮಿಲಿಯನ್ ಅನುಯಾಯಿಗಳನ್ನು ರೋಹಿತ್ ಹೊಂದಿದ್ದರೆ, ಫೇಸ್​ಬುಕ್​ನಲ್ಲಿ 20 ಮಿಲಿಯನ್ ಫಾಲೋವರ್ಸ್​ಗಳನ್ನು ಸಂಪಾಧಿಸಿದ್ದಾರೆ.

ಹಾರ್ದಿಕ್ ಪಾಂಡ್ಯ: ಟೀ ಇಂಡಿಯಾ ಪ್ರಮುಖ ಆಲ್​ರೌಂಡರ್ ಹಾರ್ದಿಕ್​ಗೆ ಈ ವರ್ಷ ಉತ್ತಮವಾಗಿದೆ. ಮೊದಲ ಬಾರಿ ಐಪಿಎಲ್​ಗೆ ಕಾಲಿಟ್ಟ ಗುಜರಾತ್ ತಂಡವನ್ನು ಚಾಂಪಿಯನ್ ಮಾಡಿದ ಹಾರ್ದಿಕ್ ತಂಡಕ್ಕೆ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದರು. ಈಗ ವಿಶ್ವಕಪ್​ಗೆ ಭರ್ಜರಿ ತಯಾರಿ ಮಾಡುತ್ತಿರುವ ಪಾಂಡ್ಯ,ಇನ್ಸ್​ಟಾಗ್ರಾಂನಲ್ಲಿ 19.3 ಮಿಲಿಯನ್ ಹಾಗೂ ಟ್ವಿಟರ್​ನಲ್ಲಿ 7 ಮಿಲಿಯನ್ ಮತ್ತು ಫೇಸ್​ಬುಕ್​ನಲ್ಲಿ 10 ಮಿಲಿಯನ್ ಅನುಯಾಯಿಗಳನ್ನು ಸಂಪಾಧಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಹಾರ್ದಿಕ್ 4ನೇ ಸ್ಥಾನದಲ್ಲಿದ್ದಾರೆ.

ಯುವರಾಜ್ ಸಿಂಗ್: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಈ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಟ್ವಿಟರ್​ನಲ್ಲಿ 5.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಯುವಿ, ಫೇಸ್​ಬುಕ್​ನಲ್ಲಿ 10.8 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ಈ ಸಿಕ್ಸರ್ ಕಿಂಗ್ ಇನ್ಸ್​ಟಾದಲ್ಲಿ 11.8 ಮಿಲಿಯನ್ ಫಾಲೋವರ್ಸ್ ಬಳಗವನ್ನು ಹೊಂದಿದ್ದಾರೆ.

Published On - 2:39 pm, Wed, 14 September 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ