ವಿರಾಟ್ ಕೊಹ್ಲಿ (Virat Kohli) ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಹಾಗೂ ಅತ್ಯುತ್ತಮ ಬ್ಯಾಟ್ಸ್ಮನ್. ಕೊಹ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದರೆ ಎದುರಾಳಿಗರಲ್ಲಿ ಆತಂಕ ಶುರುವಾಗುತ್ತಿತ್ತು. ಕ್ರೀಸ್ ಕಚ್ಚಿ ನಿಂತರೆ ಇವರನ್ನು ಔಟ್ ಮಾಡಲು ಅಸಾಧ್ಯ ಎಂದು ಸಾಭೀತಾಗಿರುವುದು ಕಣ್ಣಾರೆ ಕಂಡಿದ್ದೇವೆ. ಆದರೆ, ಕೊಹ್ಲಿಯಲ್ಲಿನ ಆ ಚಾರ್ಮ್ ಈಗ ಕಾಣಿಸುತ್ತಿಲ್ಲ. ಸೆಂಚುರಿ ಬಾರಿಸಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದ ಕಿಂಗ್ ಕೊಹ್ಲಿ ಈಗ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಕೊಹ್ಲಿ ಬ್ಯಾಟ್ನಿಂದ ಶತಕ ಬಂದು ಎರಡು ವರ್ಷಗಳ ಹತ್ತಿರವಾಯಿತು.
ವಿರಾಟ್ ಕೊಹ್ಲಿ ಕೊನೆಯದಾಗಿ ನವೆಂಬರ್ 22, 2019 ರಲ್ಲಿ ಸೆಂಚುರಿ ಬಾರಿಸಿದ್ದರು. ಅದಾದ ಮೇಲೆ ಒಂದೇ ಒಂದು ಶತಕ ರನ್ ಮೆಶಿನ್ ಬ್ಯಾಟ್ನಿಂದ ಸಿಡಿದಿಲ್ಲ. ಇದೇ ವಿಚಾರಕ್ಕೆ ಇವರು ಅದೆಷ್ಟೊ ಬಾರಿ ಟ್ರೋಲ್ ಆಗಿರುವುದು ಉಂಟು. ಕೊಹ್ಲಿಯ ಒಂದು ಶತಕಕ್ಕೆ ಕೋಟ್ಯಾಂತರ ಅಭಿಮಾನಿಗಳು ಕಾದುಕುಳಿತಿದ್ದಾರೆ.
ಸದ್ಯ ಸಾಗುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವಿರಾಟ್ ಬ್ಯಾಟ್ ಅಷ್ಟೊಂದು ಸದ್ದು ಮಾಡುತ್ತಿಲ್ಲ. ಇದೇ ಕಾರಣವನ್ನು ಹಿಡಿದು ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಕೊಹ್ಲಿಯನ್ನು ತಮಾಷೆಗೆ ಟ್ರೋಲ್ ಮಾಡಿದ್ದಾರೆ.
ಸೆಹ್ವಾಗ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ನ್ಯೂಸ್ ಪೇಪರ್ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಶೇ. 99 .9 ಮತ್ತು ಶೇ. 99.7 ಅಂಕಗಳನ್ನು ಗಳಿಸಿರುತ್ತಾರೆ. ಆದರೆ, ಈ ಇಬ್ಬರು ವಿದ್ಯಾರ್ಥಿಗಳಿಗೆ ಈ ಅಂಕ ತೃಪ್ತಿಸಿಗದ ಕಾರಣ ಇನ್ನಷ್ಟು ಅಂಕಗಳಿಗಾಗಿ ರೀ ವ್ಯಾಲ್ಯುವೇಶನ್ ಹಾಕುತ್ತಾರೆ ಮತ್ತು ಅದರಲ್ಲಿ ಶೇ. 100 ರಷ್ಟು ಅಂಕ ಸಂಪಾದಿಸುತ್ತಾರೆ. ಈ ಸುದ್ದಿಯನ್ನು ಸೆಹ್ವಾಗ್ ಅವರು, 99% ಗಳಿಸಿದ ಇಬ್ಬರು ತಮ್ಮ ಅಂಕದಲ್ಲಿ ತೃಪ್ತಿ ಇಲ್ಲ ಎಂದು ಮತ್ತೊಮ್ಮೆ ವ್ಯಾಲ್ಯುವೇಶನ್ ಮಾಡಿದ್ದಾರೆ, ಕೊಹ್ಲಿಗೆ ಕೂಡ ನೂರರ ಮೇಲೆ ಈ ರೀತಿಯಾಗಿ ವ್ಯಾಮೋಹ ಇಲ್ಲವೇನೋ ಎಂದು ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.
Itni badly 100 toh shayad Kohli ne bhi nahi chahaya hoga. pic.twitter.com/30YPfsnds2
— Virender Sehwag (@virendersehwag) August 13, 2021
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲೂ ವಿರಾಟ್ ಕೊಹ್ಲಿ ಸಂಪೂರ್ಣ ವೈಫಲ್ಯ ಅನುಭವಿದ್ದರು. ಜೇಮ್ಸ್ ಆಂಡರ್ಸನ್ನ ಮೊದಲ ಎಸೆತದಲ್ಲೇ ಕೊಹ್ಲಿ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡಿದ್ದರು. ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 103 ಎಸೆತಗಳಲ್ಲಿ 42 ರನ್ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
IPL 2021: ದುಬೈನಲ್ಲಿ ಮುಂಬೈ ಪ್ಲೇಯರ್ಸ್ ತಂಗಿರುವ ಹೋಟೆಲ್ನ ಒಂದು ದಿನದ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ!
Mohammed Siraj: ಮೊಹಮ್ಮದ್ ಸಿರಾಜ್ ಎಸೆದ ಬೆಂಕಿಯ ಚೆಂಡಿಗೆ ಹಸೀಬ್ ಕ್ಲೀನ್ ಬೌಲ್ಡ್: ಇಲ್ಲಿದೆ ವಿಡಿಯೋ
(Virat Kohli Virender Sehwag hilarious comment on Trolled Two Students Citing Virat Kohlis Example)