Virat Kohli: ವಿರಾಟ್ ಕೊಹ್ಲಿಗೆ ಸ್ಪೆಷಲ್ ಟ್ರೈನಿಂಗ್ ನೀಡುತ್ತಿರುವ ಕೋಚ್ ರಾಹುಲ್ ದ್ರಾವಿಡ್: ನೆಟ್​ನಲ್ಲಿ ಏನು ಮಾಡ್ತಿದ್ದಾರೆ ನೋಡಿ

| Updated By: Vinay Bhat

Updated on: Oct 11, 2022 | 9:14 AM

India vs Western Australia XI: ಅತ್ತ ಭಾರತ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ನಡುವೆ ವಾರ್ಮ್-ಅಪ್ ಮ್ಯಾಚ್ ನಡೆಯುತ್ತಿದ್ದರೆ ಇತ್ತ ಕೊಹ್ಲಿ ನೆಟ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ.

Virat Kohli: ವಿರಾಟ್ ಕೊಹ್ಲಿಗೆ ಸ್ಪೆಷಲ್ ಟ್ರೈನಿಂಗ್ ನೀಡುತ್ತಿರುವ ಕೋಚ್ ರಾಹುಲ್ ದ್ರಾವಿಡ್: ನೆಟ್​ನಲ್ಲಿ ಏನು ಮಾಡ್ತಿದ್ದಾರೆ ನೋಡಿ
Virat Kohli and Rahul Dravid
Follow us on

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ಗಾಗಿ (T20I World Cup) ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಬೀಡುಬಿಟ್ಟಿದ್ದು ಅಭ್ಯಾಸವನ್ನು ಕೂಡ ಶುರುಮಾಡಿದೆ. ಪರ್ತ್​ನಲ್ಲಿ ವೆಸ್ಟರ್ನ್​ ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಿ 13 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಟೂರ್ನಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ (Team India) ಬಲಿಷ್ಠವಾಗಿ ಹೊರಹೊಮ್ಮಿದೆ. ಆದರೆ, ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಕಣಕ್ಕಿಳಿದಿರಲಿಲ್ಲ. ಬದಲಾಗಿ ನೆಟ್​​ನಲ್ಲಿ ಒಬ್ಬರೆ ಸತತವಾಗಿ ಬೆವರು ಹರಿಸುತ್ತಿದ್ದರು. ಇವರಿಗೆ ಕೋಚ್ ರಾಹುಲ್ ದ್ರಾವಿಡ್ ವಿಶೇಷ ತರಬೇತಿ ನೀಡುತ್ತಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಅತ್ತ ಭಾರತ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ನಡುವೆ ವಾರ್ಮ್-ಅಪ್ ಮ್ಯಾಚ್ ನಡೆಯುತ್ತಿದ್ದರೆ ಇತ್ತ ಕೊಹ್ಲಿ ನೆಟ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ. ಕೋಚ್ ರಾಹುಲ್ ದ್ರಾವಿಡ್ ಅವರು ಕೊಹ್ಲಿಗೆ ಬೌಲ್ ಎಸೆದು ಬ್ಯಾಟಿಂಗ್ ಟಿಪ್ಸ್ ನೀಡುತ್ತಿದ್ದರು. ಪಂದ್ಯ ಮುಗಿದ ಬಳಿಕ ಕೆಎಲ್ ರಾಹುಲ್ ಕೂಡ ಡಬ್ಯೂ ಎಸಿಎ ಗ್ರೌಂಡ್​ನಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂತು. ಇಲ್ಲಿದೆ ವೈರಲ್ ವಿಡಿಯೋಗಳು.

ಇದನ್ನೂ ಓದಿ
IND vs SA: ಇಂದು ಭಾರತ- ದ. ಆಫ್ರಿಕಾ ಮೂರನೇ ಏಕದಿನ: ನಿರ್ಣಾಯಕ ಪಂದ್ಯಕ್ಕೆ ಉಭಯ ತಂಡಗಳು ಸಜ್ಜು
Shreyas Iyer: ಏಕದಿನ ಕ್ರಿಕೆಟ್​ನ ಚೇಸ್ ಮಾಸ್ಟರ್ ಶ್ರೇಯಸ್ ಅಯ್ಯರ್..! ಅಂಕಿಅಂಶಗಳು ಅದನ್ನೇ ಹೇಳುತ್ತಿವೆ
India vs South Africa 3rd ODI Live Streaming: ಸರಣಿ ನಿರ್ಧಾರಕ ಪಂದ್ಯದಲ್ಲಿ ಗೆಲುವು ಯಾರಿಗೆ? ಪಂದ್ಯ ಆರಂಭ ಯಾವಾಗ?
IND vs SA: ಶ್ರೇಯಸ್ ಔಟ್..? ಅಂತಿಮ ಪಂದ್ಯಕ್ಕೆ ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ಹೀಗಿದೆ

 

ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್‌ ಮಾಡಿತು. ಆದರೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ (3) ಮತ್ತು ರಿಷಬ್‌ ಪಂತ್‌ (9) ಬೇಗನೆ ಪವೆಲಿಯನ್‌ ಸೇರಿಕೊಂಡರು. ದೀಪಕ್‌ ಹೂಡ 22 ರನ್‌, ಹಾರ್ದಿಕ್‌ ಪಾಂಡ್ಯ 27 ಮತ್ತು ದಿನೇಶ್‌ ಕಾರ್ತಿಕ್‌ ಅಜೇಯ 19 ರನ್‌ಗಳಿಸಿದರು. ಆದರೆ ಸೂರ್ಯಕುಮಾರ್ ಯಾದವ್ ತಮ್ಮ ಅಮೋಘ ಫಾರ್ಮ್ ಅನ್ನು ಇಲ್ಲೂ ಮುಂದುವರೆಸಿದರು. 3 ಫೋರ್‌, 3 ಸಿಕ್ಸರ್‌ ಸಿಡಿಸಿದ ಸೂರ್ಯ 35 ಎಸೆತಗಳಲ್ಲಿ 52 ರನ್‌ ಸಿಡಿಸಿದರು. 20 ಓವರುಗಳಲ್ಲಿ ಭಾರತದ 6 ವಿಕೆಟ್‌ ನಷ್ಟಕ್ಕೆ 158 ರನ್‌ ಕಲೆಹಾಕಿತು.

ವೆಸ್ಟರ್ನ್‌ ಆಸ್ಟ್ರೇಲಿಯಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಭುವನೇಶ್ವರ್, ಅರ್ಶ್​ದೀಪ್ ಹಾಗೂ ಚಹಲ್ ಬಿಟ್ಟರೆ ಉಳಿದ ಬೌಲರ್​ಗಳು ದುಬಾರಿಯಾದರು. ಮುಖ್ಯವಾಗಿ ಟೀಮ್ ಇಂಡಿಯಾಕ್ಕೆ ಸ್ಯಾಮ್‌ ಫ್ಯಾನಿಂಗ್‌ ಸವಾಲಾಗಿ ನಿಂತರು. 59 ರನ್‌ಗಳಿಸಿ ಗೆಲುವಿಗೆ ಹೋರಾಟ ನಡೆಸದರು. ಅಂತಿಮವಾಗಿ ಪಶ್ಚಿಮ ಆಸ್ಟ್ರೇಲಿಯಾ 20 ಓವರುಗಳಲ್ಲಿ 8 ವಿಕೆಟ್‌ ಕಳೆದುಕೊಂಡು 145 ರನ್‌ ಮಾತ್ರ ಗಳಿಸಿ ಸೋತಿತು. ಭಾರತ ಪರ ಭುವನೇಶ್ವರ್‌ 26 ರನ್‌ಗಳಿಗೆ 2 ವಿಕೆಟ್‌ ಪಡೆದರೆ, ಅರ್ಶದೀಪ್‌ 6 ರನ್‌ಗೆ 3 ವಿಕೆಟ್‌, ಚಹಲ್‌ 15 ರನ್‌ಗೆ 2 ವಿಕೆಟ್‌ ಕಿತ್ತರು.

ಅಕ್ಟೋಬರ್ 13 ರಂದು ಇದೇ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಭಾರತ ತಂಡ ಎರಡನೇ ಅಭ್ಯಾಸ ಪಂದ್ಯ ಆಡಲಿದೆ. ಅಕ್ಟೋಬರ್‌ 16 ರಿಂದ ಆರಂಭವಾಗುವ ಈ ಮಹತ್ವದ ಟೂರ್ನಿಯು ನವೆಂಬರ್‌ 13 ರಂದು ಫೈನಲ್‌ ಪಂದ್ಯದ ಮೂಲಕ ಅಂತ್ಯವಾಗಲಿದೆ. ಅಕ್ಟೋಬರ್‌ 23 ರಂದು ಮೆಲ್ಬೋರ್ನ್‌ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸುವ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯನ್ನು ಆರಂಭಿಸಲಿದೆ.

Published On - 9:14 am, Tue, 11 October 22