ಗಿಲ್ಕ್ರಿಸ್ಟ್ ಜೊತೆ ರಿಷಭ್ ಪಂತ್ ಕಣ್ಣಾ ಮುಚ್ಚಾಲೆ
India vs Australia: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 180 ರನ್ಗಳಿಸಿದರೆ, ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ನಲ್ಲಿ 337 ರನ್ ಕಲೆಹಾಕಿತು. ಇದಾದ ಬಳಿಕ 157 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ 175 ರನ್ಗಳಿಗೆ ಆಲೌಟ್ ಆಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಪಂದ್ಯವು ಹಲವು ಘಟನೆಗಳಿಗೆ ಸಾಕ್ಷಿಯಾಗಿತ್ತು. ಒಂದೆಡೆ ಆಟಗಾರರು ಮೈದಾನದಲ್ಲೇ ಕಿತ್ತಾಡಿಕೊಂಡರೆ, ಮತ್ತೊಂದೆಡೆ ವಿಕೆಟ್ ಕೀಪರ್ಗಳಿಬ್ಬರ ಫ್ರೆಂಡ್ಸ್ಶಿಪ್ ಎಲ್ಲರ ಗಮನ ಸೆಳೆದಿದೆ.
ಹೌದು, ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್ ಅವರ ನೆಚ್ಚಿನ ವಿಕೆಟ್ ಕೀಪರ್ಗಳಲ್ಲಿ ಆ್ಯಡಂ ಗಿಲ್ಕ್ರಿಸ್ಟ್ ಕೂಡ ಒಬ್ಬರು. ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ನೊಂದಿಗೆ ಪಂತ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದು ಅಡಿಲೇಡ್ ಟೆಸ್ಟ್ ಪಂದ್ಯದ ವೇಳೆಯೂ ಕಂಡು ಬಂದಿದೆ.
ಓವಲ್ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ 3ನೇ ದಿನದಾಟದ ಆರಂಭಕ್ಕೂ ಮುನ್ನ ರಿಷಭ್ ಪಂತ್ ಆ್ಯಡಂ ಗಿಲ್ಕ್ರಿಸ್ಟ್ ಅವರನ್ನು ಭೇಟಿಯಾಗಿದ್ದಾರೆ. ಅದು ಸಹ ಕಣ್ಣಾ ಮುಚ್ಚಾಲೆಯೊಂದಿಗೆ ಸರ್ಪ್ರೈಸ್ ನೀಡುವ ಮೂಲಕ ಎಂಬುದು ವಿಶೇಷ.
ಈ ಪಂದ್ಯದ ವೇಳೆ ಗಿಲ್ಕ್ರಿಸ್ಟ್ ಪಾಕ್ಸ್ ಕ್ರಿಕೆಟ್ ಚಾನೆಲ್ನ ಕಾಮೆಂಟೇಟರ್ ಆಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಹಿಂಬದಿಯಿಂದ ಬಂದ ಪಂತ್ ಗಿಲ್ಲಿಯ ಕಣ್ಣು ಮುಚ್ಚಿದ್ದಾರೆ. ಅಲ್ಲದೆ ಕೆಲ ಕ್ಷಣಗಳವರೆಗೆ ಗಿಲ್ಕ್ರಿಸ್ಟ್ ಅವರನ್ನು ಆಟ ಆಡಿಸಿದ ರಿಷಭ್ ಪಂತ್ ಆ ಬಳಿಕ ತಬ್ಬಿಕೊಂಡರು.
ಇದೀಗ ಶ್ರೇಷ್ಠ ವಿಕೆಟ್ ಕೀಪರ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ಆ್ಯಡಂ ಗಿಲ್ಕ್ರಿಸ್ಟ್ ಅವರೊಂದಿಗಿನ ರಿಷಭ್ ಪಂತ್ ಅವರ ಫ್ರೆಂಡ್ಶಿಪ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 180 ರನ್ಗಳಿಸಿದರೆ, ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ನಲ್ಲಿ 337 ರನ್ ಕಲೆಹಾಕಿತು. ಇದಾದ ಬಳಿಕ 157 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ 175 ರನ್ಗಳಿಗೆ ಆಲೌಟ್ ಆಗಿದೆ. ಅದರಂತೆ ದ್ವಿತೀಯ ಇನಿಂಗ್ಸ್ನಲ್ಲಿ 19 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡವು 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.