IND vs WI: 15 ದಾಖಲೆಗಳ ಮೇಲೆ ಉಭಯ ತಂಡಗಳ ಆಟಗಾರರ ಕಣ್ಣು..!
West Indies vs India, 1st Test: ಭಾರತ-ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7.30 ರಿಂದ ಶುರುವಾಗಲಿದೆ.
IND vs WI
Follow us on
West Indies vs India, 1st Test: ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯವು ಇಂದಿನಿಂದ (ಜುಲೈ 12) ಶುರುವಾಗಲಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಒಟ್ಟು 15 ದಾಖಲೆಗಳು ನಿರ್ಮಾಣವಾಗಬಹುದು. ಅಂದರೆ ಕೆಲ ಆಟಗಾರರು ದಾಖಲೆಯ ಸನಿಹದಲ್ಲಿದ್ದು, ಹೀಗಾಗಿ ಮೊದಲ ಪಂದ್ಯದಲ್ಲೇ ವಿಶೇಷ ರೆಕಾರ್ಡ್ಗಳನ್ನು ಎದುರು ನೋಡಬಹುದು. ಈ ದಾಖಲೆಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5ನೇ ಬ್ಯಾಟರ್ ಎನಿಸಿಕೊಳ್ಳಲು ವಿರಾಟ್ ಕೊಹ್ಲಿಗೆ ಇನ್ನು ಕೇವಲ 150 ರನ್ ಅಗತ್ಯವಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ 5ನೇ ಆಟಗಾರ ಎನಿಸಿಕೊಳ್ಳಲು ಕಿಂಗ್ ಕೊಹ್ಲಿ 25 ರನ್‌ಗಳಿಸಬೇಕಿದೆ.
ವೆಸ್ಟ್ ಇಂಡೀಸ್ನ ಜೋಶುವಾ ಡಾ ಸಿಲ್ವಾ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್ ಪೂರ್ಣಗೊಳಿಸಲು 143 ರನ್ ಅಗತ್ಯವಿದೆ .
ವಿದೇಶಿ ಟೆಸ್ಟ್‌ನಲ್ಲಿ 500 ಬೌಂಡರಿಗಳನ್ನು ಪೂರೈಸಲು ವಿರಾಟ್ ಕೊಹ್ಲಿಗೆ 13 ಬೌಂಡರಿಗಳ ಅಗತ್ಯವಿದೆ.
ರೋಹಿತ್ ಶರ್ಮಾ (3437) ಟೆಸ್ಟ್ ಕ್ರಿಕೆಟ್‌ನಲ್ಲಿ 3500 ರನ್ ಪೂರ್ಣಗೊಳಿಸಲು 63 ರನ್ ಅಗತ್ಯವಿದೆ.
ವಿರಾಟ್ ಕೊಹ್ಲಿ ( 8479) 8500 ಟೆಸ್ಟ್ ಕ್ರಿಕೆಟ್ ರನ್ ಪೂರ್ಣಗೊಳಿಸಲು 21 ರನ್ ಅಗತ್ಯವಿದೆ.
ಜೋಶುವಾ ಡಾ ಸಿಲ್ವಾ (94) ಟೆಸ್ಟ್ ಕ್ರಿಕೆಟ್‌ನಲ್ಲಿ 100 ಬೌಂಡರಿಗಳನ್ನು ಪೂರೈಸಲು ಆರು ಬೌಂಡರಿಗಳ ಅವಶ್ಯಕತೆಯಿದೆ.
ಶುಭಮನ್ ಗಿಲ್ (921) ಟೆಸ್ಟ್‌ನಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಲು 79 ರನ್‌ಗಳಿಸಬೇಕಿದೆ.
ರವಿಚಂದ್ರನ್ ಅಶ್ವಿನ್ (697) ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಮೂರು ವಿಕೆಟ್ಗಳ ಅವಶ್ಯಕತೆಯಿದೆ.
ಕೆಮರ್ ರೋಚ್ (396) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಪೂರ್ಣಗೊಳಿಸಲು ನಾಲ್ಕು ವಿಕೆಟ್‌ಗಳನ್ನು ಪಡೆಯಬೇಕಿದೆ.
ತೇಜ್ನರೈನ್ ಚಂದ್ರಪಾಲ್ (42) ಟೆಸ್ಟ್‌ನಲ್ಲಿ 50 ಬೌಂಡರಿಗಳನ್ನು ತಲುಪಲು ಎಂಟು ಬೌಂಡರಿಗಳ ಅಗತ್ಯವಿದೆ.
ಈ ಪಂದ್ಯದೊಂದಿಗೆ ಅಜಿಂಕ್ಯ ರಹಾನೆ (49) ವಿದೇಶದಲ್ಲಿ 50 ಟೆಸ್ಟ್ ಪಂದ್ಯಗಳನ್ನಾಡಿದ ಭಾರತೀಯ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
ರೋಹಿತ್ ಶರ್ಮಾ (195) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಕ್ಯಾಚ್‌ಗಳ ಸಾಧನೆ ಮಾಡಲು ಕೇವಲ 5 ಕ್ಯಾಚ್‌ಗಳ ಅವಶ್ಯಕತೆಯಿದೆ.
ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎನಿಸಿಕೊಳ್ಳಲು ಅಶ್ವಿನ್ ಬೇಕಿರುವುದು ಕೇವಲ 4 ವಿಕೆಟ್ ಮಾತ್ರ. ಹೀಗಾಗಿ ಮೊದಲ ಟೆಸ್ಟ್ನಲ್ಲೇ ಅಶ್ವಿನ್ ಕಡೆಯಿಂದ ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು.