Duleep Trophy 2024: ಏನಿದು ದುಲೀಪ್ ಟ್ರೋಫಿ?

| Updated By: ಝಾಹಿರ್ ಯೂಸುಫ್

Updated on: Aug 13, 2024 | 10:51 AM

Duleep Trophy 2024: ದುಲೀಪ್ ಟ್ರೋಫಿ 2024 ಸೆಪ್ಟೆಂಬರ್ 5 ರಿಂದ ಶುರುವಾಗಲಿದೆ. ಈ ಬಾರಿಯ ಟೂರ್ನಿಯು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ವಿಶೇಷ ಎಂದರೆ ಈ ಬಾರಿ ಕಣಕ್ಕಿಳಿಯಲಿರುವ 6 ತಂಡಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ 2024ರ ದುಲೀಪ್ ಟ್ರೋಫಿಯಲ್ಲಿ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

Duleep Trophy 2024: ಏನಿದು ದುಲೀಪ್ ಟ್ರೋಫಿ?
Team India
Follow us on

ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ದುಲೀಪ್ ಟ್ರೋಫಿ ಆಡುವಂತೆ ಸೂಚಿಸಿದೆ. ಈ ಸೂಚನೆ ಪ್ರಕಾರ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ ಮತ್ತು ಅಶ್ವಿನ್ ಅವರನ್ನು ಹೊರತುಪಡಿಸಿ ಭಾರತ ಟೆಸ್ಟ್ ತಂಡದಲ್ಲಿರುವ ಆಟಗಾರರು ದುಲೀಪ್ ಟ್ರೋಫಿ ಆಡುವುದು ಕಡ್ಡಾಯ. ಈ ಮೂಲಕ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಭಾರತೀಯ ಕ್ರಿಕೆಟ್ ಮಂಡಳಿಯ ಈ ಸೂಚನೆ ಬೆನ್ನಲ್ಲೇ ದುಲೀಪ್ ಟ್ರೋಫಿ ಟೂರ್ನಿಯು ದೇಶದಲ್ಲಿ ಚರ್ಚಾ ವಿಷಯವಾಗಿದೆ.  ಅಷ್ಟಕ್ಕೂ ಏನಿದು ದುಲೀಪ್ ಟ್ರೋಫಿ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

ಏನಿದು ದುಲೀಪ್ ಟ್ರೋಫಿ?

ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ.

ದುಲೀಪ್ ಟ್ರೋಫಿ ಯಾವಾಗ ಶುರುವಾಯಿತು?

ದುಲೀಪ್ ಟ್ರೋಫಿಯನ್ನು 1961-62 ರಲ್ಲಿ ಮೊದಲ ಬಾರಿಗೆ ಆಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.

ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?

ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

  • ಕೇಂದ್ರ ವಲಯ
  • ದಕ್ಷಿಣ ವಲಯ
  • ಪೂರ್ವ ವಲಯ
  • ಪಶ್ಚಿಮ ವಲಯ
  • ಉತ್ತರ ವಲಯ
  • ಈಶಾನ್ಯ ವಲಯ

ದುಲೀಪ್ ಟ್ರೋಫಿಯ ವಲಯ ರಾಜ್ಯಗಳಾವುವು?

  • ಉತ್ತರ ವಲಯ : ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಸರ್ವೀಸಸ್ ತಂಡಗಳು.
  • ದಕ್ಷಿಣ ವಲಯ : ಆಂಧ್ರಪ್ರದೇಶ, ಗೋವಾ, ಹೈದರಾಬಾದ್ ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.
  • ಕೇಂದ್ರ ವಲಯ : ಛತ್ತೀಸ್‌ಗಢ, ಮಧ್ಯಪ್ರದೇಶ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ವಿದರ್ಭ.
  • ಪೂರ್ವ ವಲಯ : ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ತ್ರಿಪುರಾ.
  • ಈಶಾನ್ಯ ವಲಯ : ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
  • ಪಶ್ಚಿಮ ವಲಯ : ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು ಸೌರಾಷ್ಟ್ರ.

ಈ ರಾಜ್ಯಗಳ ಆಟಗಾರರು ಆಯಾ ವಲಯಗಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆ ಈ ವಲಯಗಳ ತಂಡಗಳನ್ನು ಎಲೈಟ್​​ ಹಾಗೂ ಇಂಡಿಯಾ ರೆಡ್, ಬ್ಲೂ, ಗ್ರೀನ್… ಹೆಸರಿನಲ್ಲಿ ಕಣಕ್ಕಿಳಿಸಲಾಗಿತ್ತು. ಹಾಗೆಯೇ ಈ ಬಾರಿ ಈ ವಲಯಗಳಿಗೆ A,B,C,D,E,F  ಎಂದು ಹೆಸರಿಸಡಲಾಗುತ್ತದೆ. ಅದರಂತೆ ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಸಿ, ಇಂಡಿಯಾ ಡಿ, ಇಂಡಿಯಾ ಇ ಮತ್ತು ಇಂಡಿಯಾ ಎಫ್ ತಂಡಗಳು ಕಣಕ್ಕಿಳಿಯಲಿವೆ.

ದುಲೀಪ್ ಟ್ರೋಫಿಯ ಹಿಂದಿನ ವಿಜೇತರು ಯಾರು?

  • 1961–62 – ಪಶ್ಚಿಮ ವಲಯ
  • 1962–63 – ಪಶ್ಚಿಮ ವಲಯ
  • 1963–64 – ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ (ಜಂಟಿ ವಿಜೇತರು)
  • 1964–65 – ಪಶ್ಚಿಮ ವಲಯ
  • 1965–66 – ದಕ್ಷಿಣ ವಲಯ
  • 1966–67 – ದಕ್ಷಿಣ ವಲಯ
  • 1967–68 – ದಕ್ಷಿಣ ವಲಯ
  • 1968–69 – ಪಶ್ಚಿಮ ವಲಯ
  • 1969–70 – ಪಶ್ಚಿಮ ವಲಯ
  • 1970–71 – ದಕ್ಷಿಣ ವಲಯ
  • 1971–72 – ಕೇಂದ್ರ ವಲಯ
  • 1972–73 – ಪಶ್ಚಿಮ ವಲಯ
  • 1973–74 – ಕೇಂದ್ರ ವಲಯ
  • 1974–75 – ದಕ್ಷಿಣ ವಲಯ
  • 1975–76 – ದಕ್ಷಿಣ ವಲಯ
  • 1976–77 – ಪಶ್ಚಿಮ ವಲಯ
  • 1977–78 – ಪಶ್ಚಿಮ ವಲಯ
  • 1978–79 – ಉತ್ತರ ವಲಯ
  • 1979–80 – ಉತ್ತರ ವಲಯ
  • 1980–81 – ಪಶ್ಚಿಮ ವಲಯ
  • 1981–82 – ಪಶ್ಚಿಮ ವಲಯ
  • 1982–83 – ಉತ್ತರ ವಲಯ
  • 1983–84 – ಉತ್ತರ ವಲಯ
  • 1984–85 – ದಕ್ಷಿಣ ವಲಯ
  • 1985–86 – ಪಶ್ಚಿಮ ವಲಯ
  • 1986–87 – ದಕ್ಷಿಣ ವಲಯ
  • 1987–88 – ಉತ್ತರ ವಲಯ
  • 1988–89 – ಉತ್ತರ ವಲಯ ಮತ್ತು ಪಶ್ಚಿಮ ವಲಯ (ಜಂಟಿ ವಿಜೇತರು)
  • 1989–90 – ದಕ್ಷಿಣ ವಲಯ
  • 1990–91 – ಉತ್ತರ ವಲಯ
  • 1991–92 – ಉತ್ತರ ವಲಯ
  • 1992–93 – ಉತ್ತರ ವಲಯ
  • 1993–94 – ಉತ್ತರ ವಲಯ
  • 1994–95 – ಉತ್ತರ ವಲಯ
  • 1995–96 – ದಕ್ಷಿಣ ವಲಯ
  • 1996–97 – ಕೇಂದ್ರ ವಲಯ
  • 1997–98 – ಕೇಂದ್ರ ವಲಯ ಮತ್ತು ಪಶ್ಚಿಮ ವಲಯ (ಜಂಟಿ ವಿಜೇತರು)
  • 1998–99 – ಕೇಂದ್ರ ವಲಯ
  • 1999–2000 – ಉತ್ತರ ವಲಯ
  • 2000–01 – ಉತ್ತರ ವಲಯ
  • 2001–02 – ಪಶ್ಚಿಮ ವಲಯ
  • 2002–03 – ಎಲೈಟ್ ಸಿ
  • 2003–04 – ಉತ್ತರ ವಲಯ
  • 2004–05 – ಕೇಂದ್ರ ವಲಯ
  • 2005–06 – ಪಶ್ಚಿಮ ವಲಯ
  • 2006–07 – ಉತ್ತರ ವಲಯ
  • 2007–08 – ಉತ್ತರ ವಲಯ
  • 2008–09 – ಪಶ್ಚಿಮ ವಲಯ
  • 2009–10 – ಪಶ್ಚಿಮ ವಲಯ
  • 2010–11 – ದಕ್ಷಿಣ ವಲಯ
  • 2011–12 – ಪೂರ್ವ ವಲಯ
  • 2012–13 – ಪೂರ್ವ ವಲಯ
  • 2013–14 – ಉತ್ತರ ವಲಯ ಮತ್ತು ದಕ್ಷಿಣ ವಲಯ (ಜಂಟಿ ವಿಜೇತರು)
  • 2014–15 – ಕೇಂದ್ರ ವಲಯ
  • 2016–17 – ಇಂಡಿಯಾ ಬ್ಲೂ
  • 2017–18 – ಇಂಡಿಯಾ ರೆಡ್
  • 2018–19 – ಇಂಡಿಯಾ ಬ್ಲೂ
  • 2019–20 – ಇಂಡಿಯಾ ರೆಡ್
  • 2022–23 – ಪಶ್ಚಿಮ ವಲಯ
  • 2023 – ದಕ್ಷಿಣ ವಲಯ

 

Published On - 10:49 am, Tue, 13 August 24