AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಪಂದ್ಯ ಗೆದ್ದು, 5 ಪಂದ್ಯ ಸೋತರೂ ಟೀಮ್ ಇಂಡಿಯಾ ಫೈನಲ್​ಗೆ

WTC 2025: ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯವು ಜೂನ್ ತಿಂಗಳಲ್ಲಿ ನಡೆಯಲಿದೆ. ಅಲ್ಲದೆ ಈ ಪಂದ್ಯಕ್ಕೆ ಇಂಗ್ಲೆಂಡ್​ನ ಲಾರ್ಡ್ಸ್​ ಮೈದಾನ ಆತಿಥ್ಯವಹಿಸುವ ಸಾಧ್ಯತೆಯಿದೆ. ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಭಾರತ ತಂಡ ಫೈನಲ್​ಗೆ ಪ್ರವೇಶಿಸಿದರೂ, ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಮೂರನೇ ಬಾರಿಗೆ ಅಂತಿಮ ಸುತ್ತಿಗೆ ಪ್ರವೇಶಿಸುವ ಹಾದಿಯಲ್ಲಿದೆ.

5 ಪಂದ್ಯ ಗೆದ್ದು, 5 ಪಂದ್ಯ ಸೋತರೂ ಟೀಮ್ ಇಂಡಿಯಾ ಫೈನಲ್​ಗೆ
Team India
ಝಾಹಿರ್ ಯೂಸುಫ್
|

Updated on: Aug 11, 2024 | 10:07 AM

Share

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಲು ಟೀಮ್ ಇಂಡಿಯಾ ಮುಂದೆ ಒಟ್ಟು 10 ಪಂದ್ಯಗಳಿವೆ. ಈ ಹತ್ತು ಟೆಸ್ಟ್ ಪಂದ್ಯಗಳಲ್ಲಿ ಐದು ಮ್ಯಾಚ್​ಗಳು ತವರಿನಲ್ಲಿ ನಡೆದರೆ, ಮತ್ತೈದು ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಜರುಗಲಿದೆ. ಇಲ್ಲಿ ಮೊದಲ 5 ಮ್ಯಾಚ್​ಗಳು ತವರಿನಲ್ಲಿ ನಡೆಯುತ್ತಿರುವುದರಿಂದ ಭಾರತ ತಂಡಕ್ಕೆ  WTC ಫೈನಲ್​ಗೇರಲು ಉತ್ತಮ ಅವಕಾಶವಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್​ ಆಡಲಿವೆ. ಪ್ರಸ್ತುತ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದೆ. ಒಟ್ಟು 68.51 ಗೆಲುವಿನ ಶೇಕಡಾವಾರು ಹೊಂದಿರುವ ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶಿಸಬೇಕಿದ್ದರೆ ಮುಂದಿನ 5 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸಾಕು.

ಅಂದರೆ ಬಾಂಗ್ಲಾದೇಶ್ ವಿರುದ್ಧದ 2 ಟೆಸ್ಟ್ ಪಂದ್ಯಗಳಲ್ಲಿ ಮತ್ತು ನ್ಯೂಝಿಲೆಂಡ್ ವಿರುದ್ಧದ ಮೂರು ಟೆಸ್ಟ್​ನಲ್ಲಿ ಭಾರತ ತಂಡವು ಜಯಭೇರಿ ಬಾರಿಸಿದರೆ ಒಟ್ಟು ಗೆಲುವಿನ ಶೇಕಡಾವಾರು 79.76% ಆಗಲಿದೆ. ಇದರೊಂದಿಗೆ ಫೈನಲ್ ಆಡುವುದು ಸಹ ಖಚಿತವಾಗಲಿದೆ.

ಒಂದು ವೇಳೆ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡರೆ, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಐದು ಟೆಸ್ಟ್ ಪಂದ್ಯಗಳ ಫಲಿತಾಂಶ ಲೆಕ್ಕಕ್ಕೆ ಬರುವುದಿಲ್ಲ. ಏಕೆಂದರೆ ಅದಕ್ಕೂ ಮುನ್ನವೇ ಟೀಮ್ ಇಂಡಿಯಾ ಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

ಹೀಗಾಗಿ ಬಾಂಗ್ಲಾದೇಶ್ ಹಾಗೂ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಅದರಲ್ಲೂ ಈ ಸರಣಿಗಳು ಭಾರತದಲ್ಲೇ ನಡೆಯುತ್ತಿರುವುದರಿಂದ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಲಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುವುದನ್ನು ಎದುರು ನೋಡಬಹುದು.

ಒಂದು ವೇಳೆ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಐದು ಪಂದ್ಯಗಳಲ್ಲೂ ಸೋತರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಬದಲಾಗಿ ಮೊದಲ ಅಥವಾ ಎರಡನೇ ಸ್ಥಾನದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡಲು ಅವಕಾಶ ಪಡೆಯಲಿದೆ.

ಹೀಗಾಗಿಯೇ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳು ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಕನಸಿಗೆ ನಿರ್ಣಾಯಕ. ಒಂದು ವೇಳೆ ಈ ಸರಣಿಯಲ್ಲಿ ಕೆಲ ಪಂದ್ಯಗಳಲ್ಲಿ ಸೋತರೂ, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಬೇಕಾಗುತ್ತದೆ. ಅದರಲ್ಲೂ ಸರಣಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಬಹುದು.

ಇದಕ್ಕೂ ಮುನ್ನವೇ ತವರಿನಲ್ಲಿ ಬಾಂಗ್ಲಾ-ಕಿವೀಸ್ ಪಡೆಯನ್ನು ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಅರ್ಹತೆ ಪಡೆಯಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ. ಅದರಂತೆ ಟೀಮ್ ಇಂಡಿಯಾ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡಲಿದೆಯಾ ಕಾದು ನೋಡಬೇಕಿದೆ.

ಭಾರತ ತಂಡದ ಮುಂಬರುವ ಟೆಸ್ಟ್ ಸರಣಿಗಳ ವೇಳಾಪಟ್ಟಿ:

ಭಾರತ vs ಬಾಂಗ್ಲಾದೇಶ್ ಸರಣಿ:

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಗುರುವಾರ, 19 ಸೆಪ್ಟೆಂಬರ್ 2024 9:30 AM ಚೆನ್ನೈ
2ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಶುಕ್ರವಾರ, 27 ಸೆಪ್ಟೆಂಬರ್ 2024 9:30 AM ಕಾನ್ಪುರ
1ನೇ ಟಿ20, ಭಾರತ vs ಬಾಂಗ್ಲಾದೇಶ ಭಾನುವಾರ, 6 ಅಕ್ಟೋಬರ್ 2024 7 PM ಧರ್ಮಶಾಲಾ
2ನೇ ಟಿ20, ಭಾರತ vs ಬಾಂಗ್ಲಾದೇಶ ಬುಧವಾರ, 9 ಅಕ್ಟೋಬರ್ 2024 7 PM ದೆಹಲಿ
3ನೇ ಟಿ20, ಭಾರತ vs ಬಾಂಗ್ಲಾದೇಶ ಶನಿವಾರ, 12 ಅಕ್ಟೋಬರ್ 2024 7 PM ಹೈದರಾಬಾದ್
ಭಾರತ vs ನ್ಯೂಝಿಲೆಂಡ್ ಸರಣಿ:
ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಬುಧವಾರ, 16 ಅಕ್ಟೋಬರ್ 2024 9:30 AM ಚೆನ್ನೈ
2ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಗುರುವಾರ, 24 ಅಕ್ಟೋಬರ್ 2024 9:30 AM ಕಾನ್ಪುರ
3ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಶುಕ್ರವಾರ, 1 ನವೆಂಬರ್ 2024 9:30 AM ಹೈದರಾಬಾದ್

ಭಾರತ vs ಆಸ್ಟ್ರೇಲಿಯಾ ಸರಣಿ:

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 22 ನವೆಂಬರ್ 2024 7:50 AM ಪರ್ತ್
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) ಶುಕ್ರವಾರ, 6 ಡಿಸೆಂಬರ್ 2024 9:30 AM ಅಡಿಲೇಡ್
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶನಿವಾರ, 14 ಡಿಸೆಂಬರ್ 2024 5:50 AM ಬ್ರಿಸ್ಬೇನ್
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಗುರುವಾರ, 26 ಡಿಸೆಂಬರ್ 2024 5 AM ಮೆಲ್ಬೋರ್ನ್
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 3 ಜನವರಿ 2025 5 AM ಸಿಡ್ನಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ