ನೆದರ್ಲೆಂಡ್ಸ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನೂ ವೆಸ್ಟ್ ಇಂಡೀಸ್ ಗೆದ್ದಿದೆ. ಎರಡನೇ ಏಕದಿನ ಪಂದ್ಯದಲ್ಲಿ ಕೆರಿಬಿಯನ್ ತಂಡ 5 ವಿಕೆಟ್ ಗಳ ಜಯ ಸಾಧಿಸಿತ್ತು. ವಿಂಡೀಸ್ ಈ ಪಂದ್ಯವನ್ನು ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ಗೆದ್ದುಕೊಂಡಿತು. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡ 3 ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ. ನೂತನ ನಾಯಕ ನಿಕೋಲಸ್ ಪೂರನ್ (Nicholas Pooran) ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಇದು ಮೊದಲ ಏಕದಿನ ಸರಣಿ ಜಯವಾಗಿದೆ. ನೆದರ್ಲೆಂಡ್ಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 7 ವಿಕೆಟ್ ಗಳ ಜಯ ಸಾಧಿಸಿತ್ತು. ಸರಣಿಯ ಮೊದಲೆರಡು ಏಕದಿನ ಪಂದ್ಯಗಳನ್ನು ಗೆದ್ದುಕೊಂಡಿರುವ ಕೆರಿಬಿಯನ್ ತಂಡದ ಕಣ್ಣು ಈಗ ಕ್ಲೀನ್ ಸ್ವೀಪ್ ಮೇಲಿದೆ.
ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ನೆದರ್ಲೆಂಡ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಇಡೀ ತಂಡವು 50 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಕೇವಲ 48.3 ಓವರ್‌ಗಳಲ್ಲಿ 214 ರನ್ ಗಳಿಸಿ ಆಲೌಟ್ ಆಯಿತು. ಉತ್ತರವಾಗಿ 215 ರನ್‌ಗಳ ಗುರಿಯನ್ನು ಕೆರಿಬಿಯನ್ ತಂಡ 45.3 ಓವರ್‌ಗಳಲ್ಲಿ ಸಾಧಿಸಿತು.
ಇದನ್ನೂ ಓದಿ:ENG vs NZ: 7 ರನ್ಗಳಿಗೆ ಆರಂಭಿಕ 4 ವಿಕೆಟ್ ಪತನ! ವಿಶ್ವ ಚಾಂಪಿಯನ್ ಕಿವೀಸ್ಗೆ ಆಂಗ್ಲರೆದುರು ಭಾರೀ ಮುಖಭಂಗ
ಬ್ರೆಂಡನ್ ಕಿಂಗ್ ಅಬ್ಬರ
ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಬ್ರೆಂಡನ್ ಕಿಂಗ್ ಹೀರೋ ಆದರು. ಅವರು ಅಜೇಯ 91 ರನ್ ಗಳಿಸುವ ಮೂಲಕ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ರೆಂಡನ್ ತಮ್ಮ ಶತಕವನ್ನು 9 ರನ್‌ಗಳಿಂದ ತಪ್ಪಿಸಿಕೊಂಡರು. ಕಿಂಗ್ ಈ ಶತಕ ಗಳಿಸಿದ್ದರೆ ಇದು ಅವರ ಮೊದಲ ODI ಮಾತ್ರವಲ್ಲದೆ ಅಂತರರಾಷ್ಟ್ರೀಯ ಶತಕವಾಗುತ್ತಿತ್ತು. ಆದರೆ, ಒಂದು ಶತಕಕ್ಕಿಂತ ಅವರ ಇನ್ನಿಂಗ್ಸ್ ತಂಡದ ಗೆಲುವಿಗೆ ಉಪಯುಕ್ತವಾಯಿತು.
Bringing up his highest ODI score and the win.?? #NEDvWI #MenInMaroon pic.twitter.com/qYv4Zs1IjU
— Windies Cricket (@windiescricket) June 2, 2022
Carty hits a big one to bring it home!
WI win by 5 wickets!? #NEDvWI #MenInMaroon pic.twitter.com/cprX9pQd89— Windies Cricket (@windiescricket) June 2, 2022
ನೆದರ್ಲೆಂಡ್ಸ್ ಬ್ಯಾಟಿಂಗ್ ಹೀಗಿತ್ತು
ಇದಕ್ಕೂ ಮುನ್ನ ನೆದರ್ಲೆಂಡ್ಸ್ ಪರ ವಿಕೆಟ್ ಕೀಪರ್ ಸ್ಕಾಟ್ ಎಡ್ವರ್ಡ್ಸ್ 68 ರನ್, ಆರಂಭಿಕ ಮ್ಯಾಕ್ಸ್ ಒ’ಡೌಡ್ 51 ರನ್ ಹಾಗೂ ಮತ್ತೋರ್ವ ಆರಂಭಿಕ ವಿಕ್ರಮಜಿತ್ ಸಿಂಗ್ 46 ರನ್ ಗಳಿಸಿದರು. ಈ ಮೂವರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ, ನೆದರ್ಲೆಂಡ್ಸ್ ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಪರಿಣಾಮ ತಂಡಕ್ಕೆ 50 ಓವರ್‌ಗಳ ವಿಕೆಟ್‌ನಲ್ಲಿ ಉಳಿಯುವುದು ಕಷ್ಟವಾಯಿತು.
ವೆಸ್ಟ್ ಇಂಡೀಸ್ ಬೌಲಿಂಗ್
ವೆಸ್ಟ್ ಇಂಡೀಸ್ ಪರ ಅಕಿಲಾ ಹೊಸೈನ್ 10 ಓವರ್ ಗಳಲ್ಲಿ 39 ರನ್ ನೀಡಿ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಇವರಲ್ಲದೆ ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರು. ವಾಲ್ಷ್ ಮತ್ತು ಬೋನರ್ ತಲಾ 1 ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಈಗ ಜೂನ್ 4 ರಂದು ನಡೆಯಲಿದೆ.
Published On - 7:00 am, Fri, 3 June 22