16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಫೈನಲ್ ಪಂದ್ಯ ನಡೆಯಬೇಕಿತ್ತು. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯವನ್ನು ಆಯೋಜಿಸಲಾಗಿತ್ತು. ಆದರೆ, ಎಡೆಬಿಡದೆ ಸುರಿದ ಮಳೆಗೆ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ. ಇಂದು ಸಿಎಸ್ಕೆ- ಜಿಟಿ (CSK vs GT) ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಭಾನುವಾರ ಈ ರೋಚಕ ಕಾದಾಟ ವೀಕ್ಷಿಸಲು 1,32,000 ಪ್ರೇಕ್ಷಕರು ಬಂದಿದ್ದರು. ಆದರೆ, ಎಲ್ಲರೂ ನಿರಾಸೆ ಅನುಭವಿಸಿದರು. ಇದರ ನಡುವೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಗೆ ಥಳಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಐಪಿಎಲ್ 2023 ರ ಫೈನಲ್ ಆರಂಭ ಆಗಬಹುದು ಎಂದು ಕಾಯುತ್ತಿರುವಾಗ, ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಪುರುಷ ಪೊಲೀಸ್ ಅಧಿಕಾರಿಯನ್ನು ಮಹಿಳಾ ಅಭಿಮಾನಿಯೊಬ್ಬರು ಅವಮಾನಿಸಿದ್ದಾರೆ. ಮಹಿಳೆ ಎಲ್ಲಾ ಪ್ರೇಕ್ಷಕರ ಎದುರೇ ಹಲವಾರು ಬಾರಿ ಅಧಿಕಾರಿಗೆ ಥಳಿಸಿ ಕೆಳಕ್ಕೆ ತಳ್ಳಿ ಬೀಳಿಸಿದ್ದಾರೆ. ಆದರೆ ಅಧಿಕಾರಿ ಅಲ್ಲಿಂದ ಹೆಚ್ಚೇನೂ ಮಾತನಾಡದೇ ತೆರಳಿದ್ದು ಜನರೂ ಸುಮ್ಮನೇ ನೋಡುತ್ತಾ ನಿಂತಿದ್ದರು.
— Out Of Context Cricket (@GemsOfCricket) May 28, 2023
ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಕಮೆಂಟ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿ ಮದ್ಯ ಸೇವನೆ ಮಾಡಿರಬಹುದು. ಈ ಕಾರಣಕ್ಕೆ ಮಹಿಳೆ ಥಳಿಸಿದ್ದಾರೆ ಎಂದು ಕೆಲವು ಹೇಳಿದ್ದಾರೆ. ಅಲ್ಲದೇ ಘಟನೆ ಸಂಬಂಧ ಹೆಚ್ಚಿನ ತನಿಖೆಯಾಗಬೇಕೆಂದು ಅನೇಕರು ಒತ್ತಾಯಿಸುತ್ತಿದ್ದಾರೆ.
IPL 2023 Final: ಐಪಿಎಲ್ ಫೈನಲ್ ಫಿಕ್ಸ್? CSK ರನ್ನರ್ ಅಪ್..?
ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್ 2023 ಫೈನಲ್ ಪಂದ್ಯ ಮಳೆಗೆ ಕೊಚ್ಚಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸುರಿದ ರಣಭೀಕರ ಮಳೆಗೆ ಟಾಸ್ ಪ್ರಕ್ರಿಯೆ ಕೂಡ ನಡೆಸಲಾಗಿಲ್ಲ. ಹೀಗಾಗಿ ಮೀಸಲು ದಿನವಾದ ಇಂದು ಅಂತಿಮ ಕಾದಾಟ ನಡೆಯಲಿದೆ. ವಿಶೇಷ ಎಂದರೆ 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಫೈನಲ್ ಪಂದ್ಯ ಮೀಸಲು ದಿನದಂದು ನಡೆಯುತ್ತಿರುವುದು ಇದೇ ಪ್ರಥಮ ಬಾರಿ.
ಇದರ ನಡುವೆ ಬೇಸರದ ಸಂಗತಿ ಎಂದರೆ ಮೀಸಲು ದಿನವಾದ ಇಂದುಕೂಡ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಮವಾರ ಸಂಜೆ ವೇಳೆಗೆ ಮಳೆ ಸುರಿಯಲಿದೆಯಂತೆ. ದಿನಪೂರ್ತಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ವರದಿ ಹೇಳಿದೆ. ದೇಶದ ಪ್ರಸ್ತುತ ಹವಾಮಾನ ವರದಿ ಗಮನಿಸಿದರೆ, ಯಾವುದೇ ಸಮಯದಲ್ಲಿ ಮಳೆಯಾಗಬಹುದು. ಒಂದು ವೇಳೆ ಇಂದಿನ ಪಂದ್ಯ ಕೂಡ ಮಳೆಯಿಂದ ಕೊಚ್ಚಿ ಹೋದರೆ ಲೀಗ್ ಹಂತದ ಪಾಯಿಂಟ್ಸ್ ಟೇಬಲ್ ಮೂಲಕ ಚಾಂಪಿಯನ್ ತಂಡವನ್ನು ನಿರ್ಧರಿಸಲಾಗುತ್ತದೆ. ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿರುವ ಗುಜರಾತ್ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ