
2025 ರ ಮಹಿಳಾ ಏಕದಿನ ವಿಶ್ವಕಪ್ (Women’s World Cup 2025) ಇದೇ ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗಲಿದ್ದು, ಈ ಐಸಿಸಿ (ICC) ಟೂರ್ನಿಗೆ ಭಾರತ ಆತಿಥ್ಯವಹಿಸುತ್ತಿದೆ. ಆದಾಗ್ಯೂ ಪಾಕಿಸ್ತಾನ ತಂಡ ಭಾರತಕ್ಕೆ ಬರದಿರುವ ಕಾರಣ ಆ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗುತ್ತಿದೆ. ಈ ನಡುವೆ ಈ ಪಂದ್ಯಾವಳಿಯ ಬಹುಮಾನ ಮೊತ್ತವನ್ನು ಶೇಕಡಾ 297 ರಷ್ಟು ಹೆಚ್ಚಳ ಮಾಡಿರುವುದಾಗಿ ಐಸಿಸಿ ಮಾಹಿತಿ ಹಂಚಿಕೊಂಡಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ಮಹಿಳಾ ವಿಶ್ವಕಪ್‌ನ ಬಹುಮಾನದ ಹಣವನ್ನು $ 13.88 ಮಿಲಿಯನ್ ಅಂದರೆ ಸರಿಸುಮಾರು 122 ಕೋಟಿ ರೂಗಳಿಗೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದಾರೆ.
ವಾಸ್ತವವಾಗಿ ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾದ ಬಳಿಕ ಮಹಿಳಾ ಕ್ರಿಕೆಟ್ ಅನ್ನು ಸಹ ಪುರುಷರ ಕ್ರಿಕೆಟ್ನಂತೆ ಬೇರೆ ಹಂತಕ್ಕೆ ಕೊಂಡೊಯ್ಯಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅದರಂತೆ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ತಂಡದ ಜೊತೆಗೆ ಈ ಬಾರಿ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ಸಾಕಷ್ಟು ಹಣ ಸಿಗಲಿದೆ.
Breakdown of a grand prize money pool for #CWC25 🏆
More ➡️ https://t.co/oDGTG3zyx6 pic.twitter.com/OMzeveP3YA
— ICC (@ICC) September 1, 2025
ಮಹಿಳಾ ವಿಶ್ವಕಪ್ ಗೆದ್ದ ತಂಡಕ್ಕೆ ಐಸಿಸಿ 4.48 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿದೆ. ಅಂದರೆ ಈ ಮೊತ್ತವು ಭಾರತೀಯ ಕರೆನ್ಸಿಯಲ್ಲಿ ಸುಮಾರು 39 ಕೋಟಿ ರೂ. ಆಗಿದೆ. ಹಾಗೆಯೇ ಫೈನಲ್‌ನಲ್ಲಿ ಸೋತ ತಂಡಕ್ಕೆ ಅಂದರೆ ರನ್ನರ್ ಅಪ್ ತಂಡಕ್ಕೆ 2.24 ಮಿಲಿಯನ್ ಡಾಲರ್ ಅಂದರೆ ಸುಮಾರು 19 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಸೆಮಿಫೈನಲ್ ತಲುಪುವ ತಂಡಕ್ಕೆ ಸುಮಾರು 9 ಕೋಟಿ ರೂಪಾಯಿ ಸಿಗಲಿದೆ. ಗುಂಪು ಹಂತದಲ್ಲಿ ಪಂದ್ಯ ಗೆದ್ದ ತಂಡಕ್ಕೆ 34 ಸಾವಿರ ಡಾಲರ್ ಸಿಗಲಿದೆ. ಐದು ಮತ್ತು ಆರನೇ ಸ್ಥಾನ ಪಡೆದ ತಂಡಕ್ಕೆ 6 ಕೋಟಿ ರೂಪಾಯಿ, ಏಳು ಮತ್ತು ಎಂಟನೇ ಸ್ಥಾನ ಪಡೆದ ತಂಡಕ್ಕೆ 2.5 ಕೋಟಿ ರೂಪಾಯಿ ಸಿಗಲಿದೆ. ಯಾವುದೇ ತಂಡ ಪಂದ್ಯ ಗೆದ್ದರೂ ಅಥವಾ ಗೆಲ್ಲದಿದ್ದರೂ, ಪ್ರತಿ ತಂಡಕ್ಕೂ ಕನಿಷ್ಠ 2.5 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Mon, 1 September 25