
ವಿಶ್ವದ ಅತಿದೊಡ್ಡ ಮಹಿಳಾ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಮಹಿಳಾ ಪ್ರೀಮಿಯರ್ ಲೀಗ್ 2026 ರ (Women’s Premier League 2026) ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಮೆಗಾ ಹರಾಜಿಗೆ ಸ್ವಲ್ಪ ಮೊದಲು ಬಿಸಿಸಿಐ (BCCI) ನಾಲ್ಕನೇ ಆವೃತ್ತಿಯ ಈ ಲೀಗ್‌ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿಯ ಪಂದ್ಯಾವಳಿಯನ್ನು ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಘೋಷಿಸಿದೆ. ವೇಳಾಪಟ್ಟಿಯ ಪ್ರಕಾರ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 9 ರಂದು ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಫೆಬ್ರವರಿ 5 ರಂದು ನಡೆಯಲಿದೆ. ಮೊದಲ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದರೆ, ಪ್ರಶಸ್ತಿ ಪಂದ್ಯ ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತದ ವಿಶ್ವಕಪ್ ಗೆಲುವಿನ ನಂತರ, ಮಹಿಳಾ ಪ್ರೀಮಿಯರ್ ಲೀಗ್ ಇನ್ನಷ್ಟು ಜನಪ್ರಿಯವಾಗುವ ನಿರೀಕ್ಷೆಯಿದೆ. ಕಳೆದ ಮೂರು ಸೀಸನ್ಗಳಲ್ಲಿ ಈ ಪಂದ್ಯಾವಳಿಯ ಜನಪ್ರಿಯತೆ ಸ್ಥಿರವಾಗಿ ಬೆಳೆಯುತ್ತಿದೆ. 2023 ರ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್ ಅನ್ನು ಮುಂಬೈ ಇಂಡಿಯನ್ಸ್ ಗೆದ್ದುಕೊಂಡರೆ, ಆ ಬಳಿಕ ಅಂದರೆ 2024 ರಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿತ್ತು. ಹಾಗೆಯೇ 2025 ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತೆ ಚಾಂಪಿಯನ್ ಆಯಿತು. ಈ ಬಾರಿ ಯಾವ ತಂಡ ಗೆಲ್ಲುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.
🚨 NEWS 🚨
The #TATAWPL 2026 will be held from 9th January to 5th February in Navi Mumbai and Vadodara 🙌
The DY Patil Stadium in Navi Mumbai will host the opener.
The BCA Stadium in Vadodara will host the final. 🏟️#TATAWPLAuction pic.twitter.com/11L5ioLQxN— Women’s Premier League (WPL) (@wplt20) November 27, 2025
ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಘೋಷಣೆಯಾದ ನಂತರ, ಮೆಗಾ ಹರಾಜು ಪ್ರಾರಂಭವಾಗಿದ್ದು, ಭಾರತದ ವಿಶ್ವಕಪ್ ವಿಜೇತ ಆಲ್‌ರೌಂಡರ್ ದೀಪ್ತಿ ಶರ್ಮಾಗೆ ಭಾರಿ ಬಿಡ್ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ 3.2 ಕೋಟಿಗೆ ಖರೀದಿಸಲು ಪ್ರಯತ್ನಿಸಿತು, ಆದರೆ ಯುಪಿ ವಾರಿಯರ್ಸ್ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಮತ್ತೊಮ್ಮೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಕುತೂಹಲಕಾರಿಯಾಗಿ ದೀಪ್ತಿ ಶರ್ಮಾ ಕಳೆದ ಸೀಸನ್ನಲ್ಲಿ 2.6 ಕೋಟಿಗೆ ಇದೇ ತಂಡದಲ್ಲಿ ಆಡುತ್ತಿದ್ದರು. ಆದರೆ ಯುಪಿ ವಾರಿಯರ್ಸ್ ಅವರನ್ನು ಹರಾಜಿಗೂ ಮುನ್ನವೇ ಬಿಡುಗಡೆ ಮಾಡಿ ಈಗ ಹೆಚ್ಚುವರಿಯಾಗಿ 60 ಲಕ್ಷ ರೂ. ಪಾವತಿಸಿ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ತಂಡವು ಸೋಫಿ ಡಿವೈನ್ ಅವರನ್ನು 2 ಕೋಟಿ ರೂ.ಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
Published On - 4:34 pm, Thu, 27 November 25