WPL Auction 2025: ಬೆಂಗಳೂರಿನಲ್ಲಿ ನಾಳೆ ಡಬ್ಲ್ಯುಪಿಎಲ್ ಮಿನಿ ಹರಾಜು; ನೇರ ಪ್ರಸಾರದ ವಿವರ ಇಲ್ಲಿದೆ

|

Updated on: Dec 14, 2024 | 9:04 PM

WPL Auction 2025: ಡಿಸೆಂಬರ್ 15, ಭಾನುವಾರ ಬೆಂಗಳೂರಿನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ 2025ರ ಮಿನಿ ಹರಾಜು ನಡೆಯಲಿದೆ. 120 ಆಟಗಾರ್ತಿಯರ ಭವಿಷ್ಯ ನಿರ್ಧಾರವಾಗಲಿದೆ. ಐದು ಫ್ರಾಂಚೈಸಿಗಳು ಒಟ್ಟು 19 ಸ್ಲಾಟ್‌ಗಳನ್ನು ಭರ್ತಿ ಮಾಡಲು ಹರಾಜಿನಲ್ಲಿ ಭಾಗವಹಿಸಲಿವೆ. ಹರಾಜಿನಲ್ಲಿ ಭಾರತೀಯ ಮತ್ತು ವಿದೇಶಿ ಆಟಗಾರ್ತಿಯರು ಭಾಗವಹಿಸಲಿದ್ದಾರೆ.

WPL Auction 2025: ಬೆಂಗಳೂರಿನಲ್ಲಿ ನಾಳೆ ಡಬ್ಲ್ಯುಪಿಎಲ್ ಮಿನಿ ಹರಾಜು; ನೇರ ಪ್ರಸಾರದ ವಿವರ ಇಲ್ಲಿದೆ
ಡಬ್ಲ್ಯುಪಿಎಲ್ ಮಿನಿ ಹರಾಜು
Follow us on

ಮಹಿಳೆಯರ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಮಿನಿ ಹರಾಜು ಡಿಸೆಂಬರ್ 15 ರ ಭಾನುವಾರದಂದು ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ 120 ಆಟಗಾರ್ತಿಯರ ಭವಿಷ್ಯ ನಿರ್ಧಾರವಾಗಲಿದೆ. ಐದು ಫ್ರಾಂಚೈಸಿಗಳಲ್ಲಿ ಒಟ್ಟು 19 ಸ್ಲಾಟ್‌ಗಳು ಖಾಲಿ ಇದ್ದು, ಇವುಗಳ ಭರ್ತಿಯ ಸಲುವಾಗಿ ಎಲ್ಲಾ ಫ್ರಾಂಚೈಸಿಗಳು ಹರಾಜಿಗಿಳಿಯಲ್ಲಿವೆ. ಈ 19 ಖಾಲಿ ಸ್ಲಾಟ್‌ಗಲ್ಲಿ ಭಾರತೀಯ ಆಟಗಾರ್ತಿಯರ 14 ಸ್ಲಾಟ್‌ಗಳು ಮತ್ತು ವಿದೇಶಿ ಆಟಗಾರ್ತಿಯರ ಐದು ಸ್ಲಾಟ್‌ಗಳು ಸೇರಿವೆ.

ಮಹಿಳಾ ಪ್ರೀಮಿಯರ್ ಲೀಗ್ ನೀಡಿರುವ ಮಾಹಿತಿ ಪ್ರಕಾರ ಒಟ್ಟು 120 ಆಟಗಾರ್ತಿಯರಿಗೆ ಬಿಡ್ಡಿಂಗ್ ನಡೆಯಲಿದೆ . ಇವರಲ್ಲಿ 91 ಭಾರತೀಯ ಮತ್ತು 29 ವಿದೇಶಿ ಆಟಗಾರರು ಸೇರಿದ್ದಾರೆ. ಇವರಲ್ಲಿ ಮಿತ್ರ ರಾಷ್ಟ್ರಗಳ ಮೂವರು ಆಟಗಾರರು ಸೇರಿದ್ದಾರೆ. ಇದರಲ್ಲಿ 30 ಕ್ಯಾಪ್ಡ್ ಆಟಗಾರ್ತಿಯರಿದ್ದರೆ (ಒಂಬತ್ತು ಭಾರತೀಯರು, 21 ಸಾಗರೋತ್ತರ), 82 ಭಾರತೀಯ ಅನ್‌ಕ್ಯಾಪ್ಡ್ ಆಟಗಾರ್ತಿಯರು ಮತ್ತು ಎಂಟು ಅನ್‌ಕ್ಯಾಪ್ಡ್ ವಿದೇಶಿ ಆಟಗಾರ್ತಿಯರು ಸೇರಿದ್ದಾರೆ.

ಹರಾಜಿನಲ್ಲಿ ಸ್ಟಾರ್ ಪ್ಲೇಯರ್ಸ್​

ಮಾರ್ಕ್ಯೂ ಆಟಗಾರ್ತಿಯರ ಪಟ್ಟಿಯಲ್ಲಿ ತೇಜಲ್ ಹಸ್ಬಾನಿಸ್, ಸ್ನೇಹ ರಾಣಾ, ಡಿಯಾಂಡ್ರಾ ಡಾಟಿನ್ (ವೆಸ್ಟ್ ಇಂಡೀಸ್), ಹೀದರ್ ನೈಟ್ (ಇಂಗ್ಲೆಂಡ್), ಓರ್ಲಾ ಪ್ರೆಂಡರ್‌ಗಾಸ್ಟ್ (ಐರ್ಲೆಂಡ್), ಲಾರೆನ್ ಬೆಲ್ (ಇಂಗ್ಲೆಂಡ್), ಕಿಮ್ ಗಾರ್ತ್ (ಆಸ್ಟ್ರೇಲಿಯಾ) ಮತ್ತು ಡೇನಿಯಲ್ ಗಿಬ್ಸನ್ ಕೂಡ ಸೇರಿದ್ದಾರೆ.

ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ?

  1. ದೆಹಲಿ ಕ್ಯಾಪಿಟಲ್ಸ್- 2.5 ಕೋಟಿ
  2. ಗುಜರಾತ್ ಜೈಂಟ್ಸ್- 4.4 ಕೋಟಿ
  3. ಮುಂಬೈ ಇಂಡಿಯನ್ಸ್- 2.65 ಕೋಟಿ
  4. ಯುಪಿ ವಾರಿಯರ್ಸ್- 3.9 ಕೋಟಿ
  5. ರಾಯಲ್ ಚಾಲೆಂಜರ್ಸ್ ಬೆಂಗಳೂರು- 3.25 ಕೋಟಿ

ಮಹಿಳಾ ಪ್ರೀಮಿಯರ್ ಲೀಗ್ 2025 ರ ಮಿನಿ ಹರಾಜು ಯಾವಾಗ ನಡೆಯುತ್ತದೆ?

ಮಹಿಳೆಯರ ಪ್ರೀಮಿಯರ್ ಲೀಗ್ 2025 ಭಾನುವಾರ ಅಂದರೆ ಡಿಸೆಂಬರ್ 15 ರಂದು ನಡೆಯಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2025 ರ ಮಿನಿ ಹರಾಜು ಎಲ್ಲಿ ನಡೆಯುತ್ತದೆ?

ಮಹಿಳೆಯರ ಪ್ರೀಮಿಯರ್ ಲೀಗ್ 2025ರ ಮಿನಿ ಹರಾಜು ಬೆಂಗಳೂರಿನಲ್ಲಿ ನಡೆಯಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2025 ರ ಮಿನಿ ಹರಾಜು ಎಷ್ಟು ಗಂಟೆಗೆ ಆರಂಭವಾಗಲಿದೆ?

ಮಹಿಳೆಯರ ಪ್ರೀಮಿಯರ್ ಲೀಗ್ ಮಿನಿ ಹರಾಜು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2025 ಹರಾಜನ್ನು ನೀವು ಯಾವ ಟಿವಿ ಚಾನೆಲ್‌ನಲ್ಲಿ ವೀಕ್ಷಿಸಬಹುದು?

ಮಹಿಳೆಯರ ಪ್ರೀಮಿಯರ್ ಲೀಗ್ 2025 ರ ಹರಾಜಿನ ಪ್ರಸಾರ ಹಕ್ಕುಗಳನ್ನು Sports18 – 1 (SD & HD) ಹೊಂದಿದೆ.

ಮಹಿಳೆಯರ ಪ್ರೀಮಿಯರ್ ಲೀಗ್ 2025 ಹರಾಜಿನ ಲೈವ್ ಸ್ಟ್ರೀಮಿಂಗ್ ಎಲ್ಲಿ ಲಭ್ಯವಿರುತ್ತದೆ?

ಮಹಿಳಾ ಪ್ರೀಮಿಯರ್ ಲೀಗ್ 2025 ಹರಾಜನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ