ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಜುಲೈ 19 ರಿಂದ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಎರಡು ಗ್ರೂಪ್ಗಳಲ್ಲಿ ವಿಂಗಡಿಸಲಾಗಿದೆ. ಇನ್ನು ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿದ್ದು, ಇದೇ ದಿನ ನಡೆಯಲಿರುವ ಎರಡನೇ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಅದು ಕೂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಮೊದಲ ಸುತ್ತಿನಲ್ಲಿ ಗ್ರೂಪ್ಗಳಲ್ಲಿರುವ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಅಂದರೆ ಎ ಗ್ರೂಪ್ನಲ್ಲಿ ಭಾರತ ತಂಡವು ಪಾಕಿಸ್ತಾನ್, ನೇಪಾಳ ಮತ್ತು ಯುಎಇ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ. ಇಲ್ಲಿ ಆಯಾ ಗ್ರೂಪ್ಗಳಿಗೆ ಪಾಯಿಂಟ್ಸ್ ಟೇಬಲ್ ಇರಲಿದ್ದು, ಇದರಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್ಗೇರಲಿದೆ.
ಅದರಂತೆ ಜುಲೈ 26 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯವು ಜುಲೈ 28 ರಂದು ಜರುಗಲಿದೆ. ಅಲ್ಲದೆ ಈ ಎಲ್ಲಾ ಪಂದ್ಯಗಳಿಗೆ ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ತಂಡಗಳು | ದಿನಾಂಕ | ಸಮಯ (IST) |
ಯುಎಇ vs ನೇಪಾಳ | ಜುಲೈ 19, 2024 | 2:00 PM |
ಭಾರತ vs ಪಾಕಿಸ್ತಾನ್ | ಜುಲೈ 19, 2024 | 7:00 PM |
ಮಲೇಷ್ಯಾ vs ಥೈಲ್ಯಾಂಡ್ | ಜುಲೈ 20, 2024 | 2:00 PM |
ಶ್ರೀಲಂಕಾ vs ಬಾಂಗ್ಲಾದೇಶ್ | ಜುಲೈ 20, 2024 | 7:00 PM |
ಭಾರತ vs ಯುಎಇ | ಜುಲೈ 21, 2024 | 2:00 PM |
ಪಾಕಿಸ್ತಾನ್ vs ನೇಪಾಳ | ಜುಲೈ 21, 2024 | 7:00 PM |
ಶ್ರೀಲಂಕಾ vs ಮಲೇಷ್ಯಾ | ಜುಲೈ 22, 2024 | 2:00 PM |
ಬಾಂಗ್ಲಾದೇಶ್ vs ಥೈಲ್ಯಾಂಡ್ | ಜುಲೈ 22, 2024 | 7:00 PM |
ಪಾಕಿಸ್ತಾನ್ vs ಯುಎಇ | ಜುಲೈ 23, 2024 | 2:00 PM |
ಭಾರತ vs ನೇಪಾಳ | ಜುಲೈ 23, 2024 | 7:00 PM |
ಬಾಂಗ್ಲಾದೇಶ್ vs ಮಲೇಷ್ಯಾ | ಜುಲೈ 24, 2024 | 2:00 PM |
ಶ್ರೀಲಂಕಾ vs ಥೈಲ್ಯಾಂಡ್ | ಜುಲೈ 24, 2024 | 7:00 PM |
ಮೊದಲ ಸೆಮಿಫೈನಲ್ | ಜುಲೈ 26, 2024 | 2:00 PM |
ಎರಡನೇ ಸೆಮಿಫೈನಲ್ | ಜುಲೈ 26, 2024 | 7:00 PM |
ಫೈನಲ್ | ಜುಲೈ 28, 2024 | 7:00 PM |
Published On - 7:29 am, Tue, 16 July 24