AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hardik Pandya: ವಡೋದರಾಲ್ಲಿ ಪಾಂಡ್ಯಗೆ ‘ಹಾರ್ದಿಕ’ ಸ್ವಾಗತ; ವಿಶ್ವಕಪ್ ಹೀರೋ ನೋಡಲು ಜನಸಾಗರ! ವಿಡಿಯೋ ನೋಡಿ

Hardik Pandya: ಟಿ20 ವಿಶ್ವಕಪ್​ನ ಮೆರವಣಿಗೆ ನಡೆದ ಮುಂಬೈನ ಮರೈನ್ ಡ್ರೈವ್​ನಲ್ಲಿ ಎಷ್ಟು ಅಭಿಮಾನಿಗಳು ಸೇರಿದ್ದರೋ, ಅಂತೆಯೇ ಹಾರ್ದಿಕ್ ಪಾಂಡ್ಯ ಸ್ವಾಗತಕ್ಕೂ ಇಡೀ ರಸ್ತೆ ಅಭಿಮಾನಿಗಳಿಂದ ತುಂಬಿತ್ತು. ತೆರೆದ ಬಸ್‌ನಲ್ಲಿ ಕುಳಿತಿದ್ದ ಹಾರ್ದಿಕ್ ಪಾಂಡ್​ಗೆ ಅಭಿಮಾನಿಗಳು ಶುಭಾಶಯ ಕೋರಿದ್ದು, ಇತ್ತ ಪಾಂಡ್ಯ ಕೂಡ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

Hardik Pandya: ವಡೋದರಾಲ್ಲಿ ಪಾಂಡ್ಯಗೆ ‘ಹಾರ್ದಿಕ’ ಸ್ವಾಗತ; ವಿಶ್ವಕಪ್ ಹೀರೋ ನೋಡಲು ಜನಸಾಗರ! ವಿಡಿಯೋ ನೋಡಿ
ಹಾರ್ದಿಕ್ ಪಾಂಡ್ಯ
Follow us
ಪೃಥ್ವಿಶಂಕರ
|

Updated on: Jul 15, 2024 | 10:07 PM

ಟಿ20 ವಿಶ್ವಕಪ್ ಮುಗಿದು 15 ದಿನಗಳು ಮುಗಿದಿವೆ. ಆದರೂ ಭಾರತದಲ್ಲಿ ಟಿ20 ವಿಶ್ವಕಪ್ ಜ್ವರ ಕೊಂಚವೂ ಇಳಿದಿಲ್ಲ. ಈ ನಡುವೆ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ ಆಟಗಾರರು ತಮ್ಮ ತಮ್ಮ ತವರಿಗೆ ಮರಳುತಿದ್ದು, ಅವರನ್ನು ಬರಮಾಡಿಕೊಳ್ಳಲು ಜನಸಾಗರವೇ ನೆರೆಯುತ್ತಿದೆ. ಅದರಂತೆ ಟಿ20 ವಿಶ್ವಕಪ್​ನಲ್ಲಿ ಉಪನಾಯಕತ್ವವಹಿಸಿಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಕೂಡ ಬಹಳ ದಿನಗಳ ನಂತರ ತಮ್ಮ ತವರು ನೆಲ ವಡೋದರಾಕ್ಕೆ ಕಾಲಿಟ್ಟಿದ್ದಾರೆ. ಭಾರತವನ್ನು ಚಾಂಪಿಯನ್ ಮಾಡಿ ತವರಿಗೆ ಮರಳಿದ ಹಾರ್ದಿಕ್ ಪಾಂಡ್ಯರನ್ನು ಸ್ವಾಗತಿಸಲು ವಡೋದರಾದಲ್ಲಿ ಜನ ಜಸಾಗರವೇ ಸೇರಿತ್ತು.

ಹಾರ್ದಿಕ್ ನೋಡಲು ಜನಸಾಗರ

ಟಿ20 ವಿಶ್ವಕಪ್​ನ ಮೆರವಣಿಗೆ ನಡೆದ ಮುಂಬೈನ ಮರೈನ್ ಡ್ರೈವ್​ನಲ್ಲಿ ಎಷ್ಟು ಅಭಿಮಾನಿಗಳು ಸೇರಿದ್ದರೋ, ಅಂತೆಯೇ ಹಾರ್ದಿಕ್ ಪಾಂಡ್ಯ ಸ್ವಾಗತಕ್ಕೂ ಇಡೀ ರಸ್ತೆ ಅಭಿಮಾನಿಗಳಿಂದ ತುಂಬಿತ್ತು. ತೆರೆದ ಬಸ್‌ನಲ್ಲಿ ಕುಳಿತಿದ್ದ ಹಾರ್ದಿಕ್ ಪಾಂಡ್​ಗೆ ಅಭಿಮಾನಿಗಳು ಶುಭಾಶಯ ಕೋರಿದ್ದು, ಇತ್ತ ಪಾಂಡ್ಯ ಕೂಡ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಮುಂಬೈನಲ್ಲಿ ಹಲವು ಕಾರ್ಯಕ್ರಮ

ಜುಲೈ 4 ರಂದು ಭಾರತ ತಂಡ ದೆಹಲಿ ತಲುಪಿತ್ತು. ಇದಾದ ಬಳಿಕ ಅದೇ ದಿನ ಸಂಜೆ ಮುಂಬೈನಲ್ಲಿ ಟೀಂ ಇಂಡಿಯಾದ ಮುಕ್ತ ಬಸ್ ಪರೇಡ್ ನಡೆಸಿತು. ಇದಕ್ಕೂ ಮುನ್ನ ಎಲ್ಲ ಆಟಗಾರರು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಉಪಹಾರ ಸೇವಿಸಿದ್ದರು. ಇದೇ ವೇಳೆ ಬಿಸಿಸಿಐ ರಾತ್ರಿ ವಾಂಖೆಡೆ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದರ ನಂತರ, ಉಳಿದ ಆಟಗಾರರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು. ಆದರೆ ಮುಂಬೈನಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ನಿಮಿತ್ತ ಹಾರ್ದಿಕ್ ಪಾಂಡ್ಯ ಮುಂಬೈನಲ್ಲಿಯೇ ಉಳಿದಿದ್ದರು.

ಇದಲ್ಲದೇ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ಕಾರಣ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಮದುವೆಯಲ್ಲೂ ಪಾಲ್ಗೊಳ್ಳಬೇಕಿತ್ತು. ಈ ಕಾರಣಕ್ಕಾಗಿ, ಅವರು ಇಲ್ಲಿಯವರೆಗೆ ಮುಂಬೈನಲ್ಲಿದ್ದರು. ಇದೀಗ ವಡೋದರಾ ತಲುಪಿದ ಪಾಂಡ್ಯಗೆ ಭವ್ಯವಾದ ಸ್ವಾಗತ ಸಿಕ್ಕಿತು. ಸ್ವತಃ ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇತರರಿಗೂ ಭವ್ಯ ಸ್ವಾಗತ

ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್ ಸೇರಿದಂತೆ ಅನೇಕ ಇತರ ಕ್ರಿಕೆಟಿಗರನ್ನು ಅವರ ನಗರಗಳಲ್ಲಿ ಸ್ವಾಗತಿಸಲಾಗಿದೆ ಮತ್ತು ಗೌರವಿಸಲಾಗಿದೆ. ಆದರೆ, ನಾವು ಹಾರ್ದಿಕ್ ಪಾಂಡ್ಯ ಬಗ್ಗೆ ಮಾತನಾಡುವುದಾದರೆ, ಅವರು 2024 ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಓವರ್ ಬೌಲ್ ಮಾಡಿ, ಅದರಲ್ಲಿ ಅವರು ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿ ಟೀಂ ಇಂಡಿಯಾವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ