AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2024: ಮಹಿಳಾ ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ

Women’s T20 Asia Cup Schedule: 2004 ರಲ್ಲಿ ಶುರುವಾದ ವುಮೆನ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವೆಂದರೆ ಭಾರತ. ಟೀಮ್ ಇಂಡಿಯಾ ಒಟ್ಟು 7 ಬಾರಿ ಏಷ್ಯಾಕಪ್ ಎತ್ತಿ ಹಿಡಿದಿದೆ. ಇನ್ನು ಬಾಂಗ್ಲಾದೇಶ್ ತಂಡ ಒಮ್ಮೆ ಟ್ರೋಫಿ ಮುಡಿಗೇರಿಸಿಕೊಂಡಿದೆ. ಇದೀಗ ಭಾರತ ಮಹಿಳಾ ತಂಡವು ಹಾಲಿ ಚಾಂಪಿಯನ್ ಆಗಿ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.

Asia Cup 2024: ಮಹಿಳಾ ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ
Asia Cup 2024
ಝಾಹಿರ್ ಯೂಸುಫ್
|

Updated on:Jul 16, 2024 | 7:30 AM

Share

ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಜುಲೈ 19 ರಿಂದ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಎರಡು ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದೆ. ಇನ್ನು ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿದ್ದು, ಇದೇ ದಿನ ನಡೆಯಲಿರುವ ಎರಡನೇ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಅದು ಕೂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ.

ಏಷ್ಯಾಕಪ್​ ತಂಡಗಳ ಗ್ರೂಪ್:

  • ಗ್ರೂಪ್- A
  • ಭಾರತ
  • ಪಾಕಿಸ್ತಾನ್
  • ಯುಎಇ
  • ನೇಪಾಳ

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?

  • ಗ್ರೂಪ್- B
  • ಶ್ರೀಲಂಕಾ
  • ಬಾಂಗ್ಲಾದೇಶ್
  • ಥೈಲ್ಯಾಂಡ್
  • ಮಲೇಷ್ಯಾ

ಹೇಗಿರಲಿದೆ ಪಂದ್ಯಾವಳಿ?

ಮೊದಲ ಸುತ್ತಿನಲ್ಲಿ ಗ್ರೂಪ್​​ಗಳಲ್ಲಿರುವ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಅಂದರೆ ಎ ಗ್ರೂಪ್​ನಲ್ಲಿ ಭಾರತ ತಂಡವು ಪಾಕಿಸ್ತಾನ್, ನೇಪಾಳ ಮತ್ತು ಯುಎಇ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ. ಇಲ್ಲಿ ಆಯಾ ಗ್ರೂಪ್​ಗಳಿಗೆ ಪಾಯಿಂಟ್ಸ್ ಟೇಬಲ್ ಇರಲಿದ್ದು, ಇದರಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್​ಗೇರಲಿದೆ.

ಅದರಂತೆ ಜುಲೈ 26 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯವು ಜುಲೈ 28 ರಂದು ಜರುಗಲಿದೆ. ಅಲ್ಲದೆ ಈ ಎಲ್ಲಾ ಪಂದ್ಯಗಳಿಗೆ ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಮಹಿಳಾ T20 ಏಷ್ಯಾ ಕಪ್ ವೇಳಾಪಟ್ಟಿ:

ತಂಡಗಳು ದಿನಾಂಕ  ಸಮಯ (IST)
ಯುಎಇ vs ನೇಪಾಳ ಜುಲೈ 19, 2024 2:00 PM
ಭಾರತ vs ಪಾಕಿಸ್ತಾನ್ ಜುಲೈ 19, 2024 7:00 PM
ಮಲೇಷ್ಯಾ vs ಥೈಲ್ಯಾಂಡ್ ಜುಲೈ 20, 2024 2:00 PM
ಶ್ರೀಲಂಕಾ vs ಬಾಂಗ್ಲಾದೇಶ್ ಜುಲೈ 20, 2024 7:00 PM
ಭಾರತ vs ಯುಎಇ ಜುಲೈ 21, 2024 2:00 PM
ಪಾಕಿಸ್ತಾನ್ vs ನೇಪಾಳ ಜುಲೈ 21, 2024 7:00 PM
ಶ್ರೀಲಂಕಾ vs ಮಲೇಷ್ಯಾ ಜುಲೈ 22, 2024 2:00 PM
ಬಾಂಗ್ಲಾದೇಶ್ vs ಥೈಲ್ಯಾಂಡ್ ಜುಲೈ 22, 2024 7:00 PM
ಪಾಕಿಸ್ತಾನ್ vs ಯುಎಇ ಜುಲೈ 23, 2024 2:00 PM
ಭಾರತ vs ನೇಪಾಳ ಜುಲೈ 23, 2024 7:00 PM
ಬಾಂಗ್ಲಾದೇಶ್ vs ಮಲೇಷ್ಯಾ ಜುಲೈ 24, 2024 2:00 PM
ಶ್ರೀಲಂಕಾ vs ಥೈಲ್ಯಾಂಡ್ ಜುಲೈ 24, 2024 7:00 PM
ಮೊದಲ ಸೆಮಿಫೈನಲ್ ಜುಲೈ 26, 2024 2:00 PM
 ಎರಡನೇ ಸೆಮಿಫೈನಲ್ ಜುಲೈ 26, 2024 7:00 PM
ಫೈನಲ್ ಜುಲೈ 28, 2024 7:00 PM

Published On - 7:29 am, Tue, 16 July 24