ಏಷ್ಯಾಕಪ್, ವಿಶ್ವಕಪ್ನಿಂದ ಔಟ್: ಇದೀಗ ನಾಯಕನಾಗಿ ಎಂಟ್ರಿ..!
Wanindu Hasaranga: ಈ ಬಾರಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವನಿಂದು ಹಸರಂಗ ಅವರನ್ನು ರಿಲೀಸ್ ಮಾಡಿತ್ತು. ಅದರಂತೆ ಹರಾಜಿನಲ್ಲಿ 1.5 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಲಂಕಾ ಸ್ಪಿನ್ನರ್ ಅನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ.
ಶ್ರೀಲಂಕಾ ಟಿ20 ತಂಡದ ನೂತನ ನಾಯಕನಾಗಿ ವನಿಂದು ಹಸರಂಗ (Wanindu Hasaranga) ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ನಾಯಕರಾಗಿದ್ದ ದಸುನ್ ಶಾನಕ ಅವರನ್ನು ಕಪ್ತಾನನ ಸ್ಥಾನದಿಂದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕೆಳಗಿಳಿಸಿದೆ. ಅಲ್ಲದೆ ಹೊಸ ನಾಯಕನಾಗಿ ಹಸರಂಗ ಅವರನ್ನು ಆಯ್ಕೆ ಮಾಡಲಾಗಿದೆ.
ಅಚ್ಚರಿ ಎಂದರೆ ವನಿಂದು ಹಸರಂಗ ಕಳೆದ ಆಗಸ್ಟ್ನಿಂದ ಶ್ರೀಲಂಕಾ ಪರ ಯಾವುದೇ ಪಂದ್ಯವಾಡಿಲ್ಲ. ಲಂಕಾ ಪ್ರೀಮಿಯರ್ ಲೀಗ್ ವೇಳೆ ಗಾಯಗೊಂಡಿದ್ದ ಹಸರಂಗ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ನಿಂದ ಹೊರಗುಳಿದಿದ್ದರು. ಇದೀಗ ನಾಯಕನಾಗಿ ತಂಡಕ್ಕೆ ಕಂಬ್ಯಾಕ್ ಮಾಡಲು ವನಿಂದು ಹಸರಂಗ ಸಜ್ಜಾಗಿದ್ದಾರೆ.
ಅದರಂತೆ ಜನವರಿಯಲ್ಲಿ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೂಲಕ ವನಿಂದು ಹಸರಂಗ ಶ್ರೀಲಂಕಾ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ಸರಣಿಯಲ್ಲಿ ಶೀಲಂಕಾ 3 ಟಿ20 ಪಂದ್ಯಗಳನ್ನಾಡಲಿದೆ. ಇತ್ತ ಜೂನ್ 4 ರಿಂದ ಟಿ20 ವಿಶ್ವಕಪ್ ಕೂಡ ಶುರುವಾಗಲಿದೆ. ಹೀಗಾಗಿ ಟಿ20 ವಿಶ್ವಕಪ್ನಲ್ಲೂ ಶ್ರೀಲಂಕಾ ತಂಡವನ್ನು ಆಲ್ರೌಂಡರ್ ವನಿಂದು ಹಸರಂಗ ಅವರೇ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.
SRH ಪಾಲಾದ RCB ಆಟಗಾರ:
ಈ ಬಾರಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವನಿಂದು ಹಸರಂಗ ಅವರನ್ನು ರಿಲೀಸ್ ಮಾಡಿತ್ತು. ಅದರಂತೆ ಹರಾಜಿನಲ್ಲಿ 1.5 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಲಂಕಾ ಸ್ಪಿನ್ನರ್ ಅನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ. ಅದು ಕೂಡ 1.5 ಕೋಟಿ ರೂ. ಮೂಲ ಬೆಲೆಗೆ ಎಂಬುದು ವಿಶೇಷ.
ಇದನ್ನೂ ಓದಿ: IPL 2024: ಒಂದು ಎಸೆತದ ಬೆಲೆ ಬರೋಬ್ಬರಿ 7.40 ಲಕ್ಷ ರೂ..!
ಅಂದರೆ ಈ ಹಿಂದೆ ಹಸರಂಗಗೆ ಆರ್ಸಿಬಿ ಫ್ರಾಂಚೈಸಿ ನೀಡಿದ್ದ ಮೊತ್ತ ಬರೋಬ್ಬರಿ 10.75 ಕೋಟಿ ರೂ. ಇದೀಗ ಕೇವಲ 1.5 ಕೋಟಿ ರೂ.ಗೆ ಶ್ರೀಲಂಕಾ ಸ್ಪಿನ್ ಆಲ್ರೌಂಡರ್ನನ್ನು ಎಸ್ಆರ್ಹೆಚ್ ಫ್ರಾಂಚೈಸಿ ಖರೀದಿಸಿದೆ.
ಶ್ರೀಲಂಕಾ ತಂಡದ ಹೊಸ ನಾಯಕರುಗಳು:
- ಏಕದಿನ ತಂಡದ ನಾಯಕ: ಕುಸಾಲ್ ಮೆಂಡಿಸ್
- ಏಕದಿನ ತಂಡದ ಉಪನಾಯಕ: ಚರಿತ್ ಅಸಲಂಕಾ
- ಟಿ20 ತಂಡದ ನಾಯಕ: ವನಿಂದು ಹಸರಂಗ
- ಟಿ20 ತಂಡದ ಉಪನಾಯಕ: ಚರಿತ್ ಅಸಲಂಕಾ
Published On - 1:47 pm, Sat, 30 December 23