Women’s World Cup 2022: ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಸತತ ಮೂರನೇ ಸೋಲು! ಗೆದ್ದ ದಕ್ಷಿಣ ಆಫ್ರಿಕಾ

|

Updated on: Mar 11, 2022 | 2:36 PM

Women's World Cup 2022: ಪಾಕಿಸ್ತಾನದ ಮುಂದೆ 224 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ನೀಡಿತ್ತು, ಅದನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 217 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಪಂದ್ಯವನ್ನು 6 ರನ್‌ಗಳಿಂದ ಕಳೆದುಕೊಂಡಿತು.

Womens World Cup 2022: ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಸತತ ಮೂರನೇ ಸೋಲು! ಗೆದ್ದ ದಕ್ಷಿಣ ಆಫ್ರಿಕಾ
ಪಾಕಿಸ್ತಾನ ಮಹಿಳಾ ತಂಡ
Follow us on

ಐಸಿಸಿ ಮಹಿಳಾ ವಿಶ್ವಕಪ್‌ (ICC Women’s World Cup)ನಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ (Pakistan and South Africa) ನಡುವಿನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪಾಕಿಸ್ತಾನವನ್ನು ಸೋಲಿಸುವ ಮೂಲಕ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಪಾಕಿಸ್ತಾನ 6 ರನ್‌ಗಳಿಂದ ಸೋಲನೊಪ್ಪಿಕೊಂಡಿದ್ದು, ಇದು ಟೂರ್ನಿಯಲ್ಲಿ ಈ ಏಷ್ಯಾದ ದೇಶಕ್ಕೆ ಸತತ ಮೂರನೇ ಸೋಲಾಗಿದೆ. ದಕ್ಷಿಣ ಆಫ್ರಿಕಾಕ್ಕೂ ಮುನ್ನ ಪಾಕಿಸ್ತಾನ, ಭಾರತ ಮತ್ತು ಆಸ್ಟ್ರೇಲಿಯಾದಿಂದ ಸೋಲನ್ನು ಎದುರಿಸಬೇಕಾಯಿತು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಸತತ ಎರಡನೇ ಗೆಲುವು ದಾಖಲಿಸಿತು. ಇದಕ್ಕೂ ಮುನ್ನ ಬಾಂಗ್ಲಾದೇಶವನ್ನು 32 ರನ್‌ಗಳಿಂದ ಸೋಲಿಸಿದ್ದರು. ಟೂರ್ನಿಯಲ್ಲಿ ಸತತ ಮೂರನೇ ಸೋಲಿನ ಬಳಿಕ ಪಾಕಿಸ್ತಾನಕ್ಕೆ ಸಂಕಷ್ಟ ಹೆಚ್ಚಿದೆ.

ಪಾಕಿಸ್ತಾನದ ಮುಂದೆ 224 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ನೀಡಿತ್ತು, ಅದನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 217 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಪಂದ್ಯವನ್ನು 6 ರನ್‌ಗಳಿಂದ ಕಳೆದುಕೊಂಡಿತು. ಆದರೆ, ಕೊನೆಗೆ ಉಭಯ ತಂಡಗಳಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಪಂದ್ಯ ನಡೆಯಿತು.

ಕೊನೆಯ ಓವರ್‌ನ ರೋಚಕತೆ
ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲುವಿಗೆ ಕೇವಲ 10 ರನ್‌ಗಳ ಅಗತ್ಯವಿತ್ತು, ಅವರ ಬಳಿ 2 ವಿಕೆಟ್‌ಗಳು ಉಳಿದಿದ್ದವು. ಶಬ್ನಿಮ್ ಇಸ್ಮಾಯಿಲ್ ದಕ್ಷಿಣ ಆಫ್ರಿಕಾದ ಬೌಲಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರ ಮೊದಲ ಎಸೆತದಲ್ಲಿ 2 ರನ್ ಗಳಿಸಿದರೆ, ನಂತರ ಪಂದ್ಯ ರೋಚಕವಾಗಿ ಕಂಡುಬಂದಿತು. ಆದರೆ ಮುಂದಿನ ಎಸೆತದಲ್ಲಿ ಇಸ್ಮಾಯಿಲ್ ಪಾಕಿಸ್ತಾನಕ್ಕೆ 9ನೇ ಹೊಡೆತ ನೀಡಿದರು. ಇದರ ನಂತರ, ಮುಂದಿನ ಎಸೆತದಲ್ಲಿ ಮತ್ತೊಮ್ಮೆ ಸಿಂಗಲ್ ಪಡೆಯಲಾಯಿತು. ಇದೀಗ ಕೊನೆಯ 3 ಎಸೆತಗಳಲ್ಲಿ ಪಾಕಿಸ್ತಾನಕ್ಕೆ 7 ರನ್‌ಗಳ ಅಗತ್ಯವಿತ್ತು, ಗುರಿ ತಲುಪುವಷ್ಟರಲ್ಲಿತ್ತು. ಆದರೆ ದಕ್ಷಿಣ ಆಫ್ರಿಕಾದ ಬೌಲರ್‌ನ ಉದ್ದೇಶವೇ ಬೇರೆಯಾಗಿತ್ತು. ನಾಲ್ಕನೇ ಎಸೆತದಲ್ಲಿ ಡಾಟ್ ಹಾಕಿದ ಅವರು 5ನೇ ಎಸೆತದಲ್ಲಿ ಪಾಕಿಸ್ತಾನದ ಕೊನೆಯ ವಿಕೆಟ್ ಉರುಳಿಸಿದರು.

ಟಾಸ್ ಗೆದ್ದ ಪಾಕ್ ನಾಯಕ ದಕ್ಷಿಣ ಆಫ್ರಿಕಾಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿದರು. ಈ ನಿರ್ಧಾರದಿಂದ ಸಂತಸಗೊಂಡ ದಕ್ಷಿಣ ಆಫ್ರಿಕಾ ನಾಯಕಿ ಈ ಪಂದ್ಯದಲ್ಲಿ 62 ರನ್ ಗಳಿಸಿದರೆ, ಆರಂಭಿಕ ವೊಲ್ವಾರ್ಟ್ 75 ರನ್ ಗಳಿಸಿದರು. ಇದರ ಆಧಾರದ ಮೇಲೆ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗೆ 223 ರನ್ ಗಳಿಸಲು ಯಶಸ್ವಿಯಾಯಿತು.

5ನೇ ಬಾರಿಗೆ ಪಾಕಿಸ್ತಾನಕ್ಕೆ 200ಕ್ಕೂ ಹೆಚ್ಚು ರನ್​ಗಳ ಮೊತ್ತ ಬೆನ್ನಟ್ಟುವ ಅವಕಾಶ ಸಿಕ್ಕಿತ್ತು. ಆದರೆ ಪಾಕಿಸ್ತಾನ ಗೆಲುವಿನಂಚಿನಲ್ಲಿ ಎಡವಿತು. ಒಂದು ವೇಳೆ ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧದ 224 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದರೆ, ಇದು ಮಹಿಳಾ ODIನಲ್ಲಿ ಅವರ ಎರಡನೇ ಅತಿದೊಡ್ಡ ಚೇಸ್ ಆಗುತ್ತಿತ್ತು.

ಇದನ್ನೂ ಓದಿ:ICC Women World Cup 2022: 11 ಬಾರಿ ನಡೆದಿರುವ ಮಹಿಳಾ ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ತಂಡಗಳಿವು