AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಗ್ ಶಾಕ್; ಆರಂಭಿಕ ನಾಲ್ಕೈದು ಪಂದ್ಯಗಳಿಗೆ ಡೇವಿಡ್ ವಾರ್ನರ್ ಅಲಭ್ಯ!

David Warner: ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಡೇವಿಡ್ ವಾರ್ನರ್ ಮೊದಲ 4-5 ಪಂದ್ಯಗಳನ್ನು ಆಡದಿರಲು ಕ್ರಿಕೆಟ್ ಆಸ್ಟ್ರೇಲಿಯಾದ ಮಾರ್ಗಸೂಚಿಗಳು ಮತ್ತು ಶೇನ್ ವಾರ್ನ್ ಅವರ ಸಾವು ಕಾರಣವಾಗಿದೆ.

IPL 2022: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಗ್ ಶಾಕ್; ಆರಂಭಿಕ ನಾಲ್ಕೈದು ಪಂದ್ಯಗಳಿಗೆ ಡೇವಿಡ್ ವಾರ್ನರ್ ಅಲಭ್ಯ!
ವಾರ್ನರ್
TV9 Web
| Updated By: ಪೃಥ್ವಿಶಂಕರ|

Updated on: Mar 11, 2022 | 4:21 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಲೆಜೆಂಡ್ ಡೇವಿಡ್ ವಾರ್ನರ್ (David Warner) ಅವರನ್ನು ಇತ್ತೀಚಿನ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 6.25 ಕೋಟಿಗೆ ಖರೀದಿಸಿತು. ವಾರ್ನರ್ ಅವರನ್ನು ಖರೀದಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತನ್ನ ಬಲವನ್ನು ಹೆಚ್ಚಿಸಿಕೊಂಡಿತ್ತು. ವಾರ್ನರ್‌ನಂತಹ ಅಬ್ಬರದ ಆರಂಭಿಕ ಆಟಗಾರನನ್ನು ಪಡೆಯುವುದು ನಿಜವಾಗಿಯೂ ದೊಡ್ಡ ವಿಷಯವಾಗಿದೆ. ಹೀಗಾಗಿ ಡೆಲ್ಲಿ ಅವರಿಗಾಗಿ 6.25 ಕೋಟಿ ಖರ್ಚು ಮಾಡಿದೆ. ಆದಾಗ್ಯೂ, ಮಾರ್ಚ್ 26 ರಿಂದ ಪ್ರಾರಂಭವಾಗುವ ಐಪಿಎಲ್ ಮೊದಲು, ಡೆಲ್ಲಿ ಕ್ಯಾಪಿಟಲ್ಸ್ ಭಾರಿ ಹಿನ್ನಡೆ ಅನುಭವಿಸಿದೆ. ಡೇವಿಡ್ ವಾರ್ನರ್ ಬಹುಶಃ ಐಪಿಎಲ್‌ನ ಮೊದಲ 4-5 ಪಂದ್ಯಗಳಲ್ಲಿ ಆಡುವುದಿಲ್ಲ ಎಂಬ ವರದಿಗಳು ಕೇಳಿಬಮದಿವೆ. ವಾರ್ನರ್ ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿದ್ದು, ಅದು ಮುಗಿದ ನಂತರ ಅವರು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಡೇವಿಡ್ ವಾರ್ನರ್ ಮೊದಲ 4-5 ಪಂದ್ಯಗಳನ್ನು ಆಡದಿರಲು ಕ್ರಿಕೆಟ್ ಆಸ್ಟ್ರೇಲಿಯಾದ ಮಾರ್ಗಸೂಚಿಗಳು ಮತ್ತು ಶೇನ್ ವಾರ್ನ್ ಅವರ ಸಾವು ಕಾರಣವಾಗಿದೆ. ಶೇನ್ ವಾರ್ನ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಖಂಡಿತ ಪಾಲ್ಗೊಳ್ಳುತ್ತೇನೆ ಎಂದು ಡೇವಿಡ್ ವಾರ್ನರ್ ಹೇಳಿಕೆ ನೀಡಿದ್ದು, ಮಾರ್ಚ್ 30 ರಂದು ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲಾಗುವುದು. ಹೀಗಾಗಿ ವಾರ್ನರ್ ಆ ಸಭೆಯಲ್ಲಿ ಪಾಲ್ಗೋಂಡರೆ, ಐಪಿಎಲ್​ನ ಆರಂಭಿಕ ಕೆಲವು ಪಂದ್ಯಗಳಿಗೆ ಗೈರಾಗುವ ಸಾಧ್ಯತೆಗಳಿವೆ.

ವಾರ್ನ್ ಶ್ರದ್ಧಾಂಜಲಿ ಸಭೆಗೆ ವಾರ್ನರ್ ಹಾಜರು? ನಾನು ಕಡಖಂಡಿತವಾಗಿ ವಾರ್ನ್ ಅವರ ಶ್ರದ್ಧಾಂಜಲಿ ಸಭೆಗೆ ಹೋಗುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ. ನಾನು ಮಗುವಾಗಿದ್ದಾಗ, ನನ್ನ ಮನೆಯ ಗೋಡೆಯ ಮೇಲೆ ವಾರ್ನ್‌ ಅವರ ಪೋಸ್ಟರ್ ಇತ್ತು. ನಾನು ಯಾವಾಗಲೂ ಶೇನ್ ವಾರ್ನ್‌ನಂತೆ ಇರಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಲಾಹೋರ್ ಟೆಸ್ಟ್ ಮುಗಿದ ನಂತರ ವಾರ್ನರ್ ನೇರವಾಗಿ ಮೆಲ್ಬೋರ್ನ್‌ಗೆ ಹೋಗಲಿದ್ದಾರೆ ಎಂದು ವರದಿಯಾಗಿದೆ. ಅಂದಹಾಗೆ ಲಾಹೋರ್ ಟೆಸ್ಟ್ ಮಾರ್ಚ್ 25 ರಂದು ಕೊನೆಗೊಳ್ಳಲಿದ್ದು, 26ರಿಂದ ಐಪಿಎಲ್ ಆರಂಭವಾಗುವುದರಿಂದ ವಾರ್ನರ್ ಆರಂಭಿಕ ಪಂದ್ಯಗಳಿಗೆ ಗೈರಾಗುವ ಸಾಧ್ಯತೆಯಿದೆ.

ಏಪ್ರಿಲ್ 5 ರವರೆಗೆ ವಾರ್ನರ್ ಲಭ್ಯವಿಲ್ಲ! ಕ್ರಿಕೆಟ್ ಆಸ್ಟ್ರೇಲಿಯಾದ ಮಾರ್ಗಸೂಚಿಗಳ ಕಾರಣದಿಂದಾಗಿ ಡೇವಿಡ್ ವಾರ್ನರ್ ಅವರು ಏಪ್ರಿಲ್ 5 ರವರೆಗೆ ಐಪಿಎಲ್​ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಎಲ್ಲಾ ಆಟಗಾರರಿಗೆ ಏಪ್ರಿಲ್ 5 ರ ನಂತರವೇ ಐಪಿಎಲ್ ಪ್ರವೇಶಿಸಲು ಅವಕಾಶ ನೀಡಿದೆ. ಇದರರ್ಥ ಮಾರ್ಚ್ 30 ರಂದು ಮೆಲ್ಬೋರ್ನ್‌ನಲ್ಲಿ ಶೇನ್ ವಾರ್ನ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ವಾರ್ನರ್ ಭಾಗವಹಿಸಲಿದ್ದಾರೆ. ನಂತರ ಅವರು ಏಪ್ರಿಲ್ 6 ರಂದು ಮುಂಬೈಗೆ ಬರಲಿದ್ದಾರೆ. ಇದರ ನಂತರ, ಬಿಸಿಸಿಐ ನಿಯಮಗಳ ಆಧಾರದ ಮೇಲೆ, ಅವರು 5 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಕ್ವಾರಂಟೈನ್ ಮುಗಿದ ನಂತರ, ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ವಾರ್ನರ್ ಎರಡು ಬಾರಿ ನೆಗೆಟಿವ್ ಬರಬೇಕಾಗುತ್ತದೆ. ನೆಗೆಟಿವ್ ಬಂದ ನಂತರವೇ ಡೆಲ್ಲಿ ಕ್ಯಾಪಿಟಲ್ಸ್‌ನ ಬಯೋ-ಸೆಕ್ಯೂರ್ ಬಬಲ್‌ಗೆ ಸೇರಲು ವಾರ್ನರ್‌ಗೆ ಅವಕಾಶ ನೀಡಲಾಗುತ್ತದೆ.

ಇದರರ್ಥ ವಾರ್ನರ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ 4 ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ. IPL 2022 ರಲ್ಲಿ ದೆಹಲಿಯ ಅಭಿಯಾನವು ಮಾರ್ಚ್ 27 ರಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಾರಂಭವಾಗಲಿದೆ. ಇದರ ನಂತರ, ಏಪ್ರಿಲ್ 2 ರಂದು ಗುಜರಾತ್ ಟೈಟಾನ್ಸ್ ಮತ್ತು ಏಪ್ರಿಲ್ 7 ರಂದು ಲಕ್ನೋ ಸೂಪರ್‌ಜೈಂಟ್‌ನೊಂದಿಗೆ ಸ್ಪರ್ಧೆ ನಡೆಯಲಿದೆ. ಏಪ್ರಿಲ್ 10 ರಂದು ಡೆಲ್ಲಿ ತಂಡ ಕೆಕೆಆರ್ ವಿರುದ್ಧ ಸೆಣಸಲಿದೆ. ಇದರ ನಂತರ ಡೆಲ್ಲಿ ತಂಡವು ಏಪ್ರಿಲ್ 16 ರಂದು ಆರ್‌ಸಿಬಿ ವಿರುದ್ಧ ಸೆಣಸಲಿದೆ. ಐಪಿಎಲ್ 2022 ರಲ್ಲಿ ವಾರ್ನರ್ ಮೊದಲ ಬಾರಿಗೆ RCB ವಿರುದ್ಧ ಆಡುವ ಸಾಧ್ಯತೆಯಿದೆ.

ಇದನ್ನೂ ಓದಿ:David Warner, IPL 2022 Auction: ಡೆಲ್ಲಿ ಸೇರಿದ ಡೇವಿಡ್ ವಾರ್ನರ್! ಹರಾಜಿನಲ್ಲಿ ಪಡೆದ ಹಣ ಎಷ್ಟು ಗೊತ್ತಾ?