AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಆರ್​ಸಿಬಿ ಹೊಸ ವಿಡಿಯೋ ರಿಲೀಸ್: ಮಾರ್ಚ್ 12ಕ್ಕೂ ಮೊದಲೇ ಸರ್​ಪ್ರೈಸ್ ಕೊಟ್ಟ ವಿರಾಟ್ ಕೊಹ್ಲಿ

RCB Captaincy Announcement: ಆರ್​​ಸಿಬಿ ತಂಡವು 12 ಮಾರ್ಚ್ 2022 ರಂದು ಸಂಜೆ 4 ಗಂಟೆಗೆ ಹೊಸ ನಾಯಕನನ್ನು ಘೋಷಿಸುವುದಾಗಿ ತಿಳಿಸಿದೆ. ಹೀಗಿರುವಾಗ ವಿರಾಟ್ ಕೊಹ್ಲಿ ಮಾತನಾಡಿರುವ ವಿಡಿಯೋ ಒಂದನ್ನು ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸರ್​ಪ್ರೈಸ್ ನೀಡಿದೆ.

Virat Kohli: ಆರ್​ಸಿಬಿ ಹೊಸ ವಿಡಿಯೋ ರಿಲೀಸ್: ಮಾರ್ಚ್ 12ಕ್ಕೂ ಮೊದಲೇ ಸರ್​ಪ್ರೈಸ್ ಕೊಟ್ಟ ವಿರಾಟ್ ಕೊಹ್ಲಿ
Virat Kohli and RCB Unbox
TV9 Web
| Edited By: |

Updated on: Mar 11, 2022 | 10:58 AM

Share

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಉಳಿದಿವೆ. ಮಾರ್ಚ್ 26 ರಂದು ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ 2022ಕ್ಕೆ (IPL 2022) ಅದ್ದೂರಿ ಚಾಲನೆ ಸಿಗಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿ  ಭರ್ಜರಿ ತಯಾರಿ ನಡೆಸುತ್ತಿದ್ದರೆ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕನ ಘೋಷಣೆ ಮಾಡುವ ತವಕದಲ್ಲಿದೆ. ಇದೇ ಮಾರ್ಚ್ 12 ಶನಿವಾರದಂದು ಆರ್​​ಸಿಬಿ ಫ್ರಾಂಚೈಸಿ ನೂತನ ಸಾರಥಿಯ ಹೆಸರು ಪ್ರಕಟ ಮಾಡಲಿದೆ. ಈ ಬಗ್ಗೆ ಆರ್​​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಎರಡು ದಿನಗಳ ಹಿಂದೆ ಮಾಹಿತಿ ನೀಡಿತ್ತು. ಆರ್​​ಸಿಬಿ ತಂಡವು 12 ಮಾರ್ಚ್ 2022 ರಂದು ಸಂಜೆ 4 ಗಂಟೆಗೆ ಹೊಸ ನಾಯಕನನ್ನು ಘೋಷಿಸುವುದಾಗಿ ತಿಳಿಸಿದೆ. ಹೀಗಿರುವಾಗ ವಿರಾಟ್ ಕೊಹ್ಲಿ (Virat Kohli) ಮಾತನಾಡಿರುವ ವಿಡಿಯೋ ಒಂದನ್ನು ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸರ್​ಪ್ರೈಸ್ ನೀಡಿದೆ.

“ಕೆಲವು ಅಪ್ಡೇಟ್​ಗಳು ಸದ್ಯದಲ್ಲೇ ಎಲ್ಲರಿಗೂ ತಿಳಿಯಲಿದೆ. ಮತ್ತೊಂದು ಕುತೂಹಲದ ಐಪಿಎಲ್ ಅನ್ನು ಎದುರು ನೋಡುತ್ತಿದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ….,” ಎಂದು ಹೇಳಿ ಅರ್ಧದಲ್ಲೇ ನಿಲ್ಲಿಸಿ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುವ ಜೊತೆಗೆ ಕುತೂಹಲ ಮೂಡಿಸಿದೆ. ಕೊಹ್ಲಿ ಏನನ್ನು ಹೇಳಲು ಹೊರಟು ಅರ್ಧದಲ್ಲೇ ನಿಲ್ಲಿಸಿದರು ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ.

ಈ ಎಲ್ಲ ಗೊಂದಲಗಳಿಗೆ ಮಾರ್ಚ್ 12 ರಂದು ತೆರೆಬೀಳಲಿದೆ. ಈ ದಿನ ಆರ್​ಸಿಬಿ ನೂತನ ನಾಯಕನ ಘೋಷಣೆ ಆಗಲಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಮ್ಯೂಸಿಯಂ ಕ್ರಾಸ್ ರೋಡ್‌ನಲ್ಲಿ ಫ್ರಾಂಚೈಸಿ ತಂಡ ತನ್ನ 14 ವರ್ಷಗಳನ್ನು ಆಚರಿಸಲಿದೆ. ಹೊಸ ನಾಯಕನ ಹೊರತಾಗಿ ಹೊಸ ಜೆರ್ಸಿ ಕೂಡ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಮರುನಾಮಕರಣ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.

ಈಗಾಗಲೇ 2022 ಐಪಿಎಲ್​ಗಾಗಿ ಎಲ್ಲಾ ತಂಡಗಳು ತಮ್ಮ ನಾಯಕರುಗಳನ್ನು ಬಹಿರಂಗಪಡಿಸಿದೆ. ಒಟ್ಟು 8 ಫ್ರಾಂಚೈಸಿಗಳು ಭಾರತೀಯರನ್ನೇ ನಾಯಕನಾಗಿ ಆಯ್ಕೆ ಮಾಡಿವೆ. ಆದರೆ ಆರ್​ಸಿಬಿ ಮಾತ್ರ ಕೊಹ್ಲಿಯಿಂದ ತೆರವಾಗಿರುವ ಸ್ಥಾನಕ್ಕೆ ಇನ್ನೂ ಅಂತಿಮ ಹೆಸರನ್ನು ಪ್ರಕಟಿಸಿಲ್ಲ. ಆದರೆ ಇದಕ್ಕೆಲ್ಲಾ ಮಾರ್ಚ್​ 12ರಂದು ಉತ್ತರ ಸಿಗಲಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಮೂಲಗಳ ಪ್ರಕಾರ, ದಕ್ಷಿಣ ಅಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್​ರನ್ನು ನಾಯಕನಾಗಿ ನೇಮಕ ಮಾಡಬಹುದು ಎನ್ನಲಾಗುತ್ತಿದೆ. ನಾಯಕತ್ವ ಸ್ಥಾನಕ್ಕೆ ಮ್ಯಾಕ್ಸ್​ವೆಲ್​ ನೆಚ್ಚಿನ ಆಯ್ಕೆಯಾಗಿದ್ದರೂ ಕೂಡಾ ಫ್ರಾಂಚೈಸಿ ಡುಪ್ಲೆಸಿಸ್​ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ ಎನ್ನಲಾಗಿದೆ. ಇವರಲ್ಲದೆ ತಂಡದಲ್ಲಿ ದಿನೇಶ್ ಕಾರ್ತಿಕ್ ಹೆಸರು ಕೂಡ ಕೇಳಿಬರುತ್ತಿದೆ.

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾರ್ಚ್ 26ರ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು ಆಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾರ್ಚ್ 27 ರಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಶುರು ಮಾಡಲಿದೆ.

IND vs SL: ಪಿಂಕ್ ಬಾಲ್ ಟೆಸ್ಟ್​ನಿಂದ ಸ್ಟಾರ್ ಪ್ಲೇಯರ್ ಔಟ್: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

Cheteshwar Pujara: ಟೀಮ್ ಇಂಡಿಯಾದಲ್ಲಿಲ್ಲ ಅವಕಾಶ: ಇಂಗ್ಲೆಂಡ್ ದೇಶಿ ಟೂರ್ನಿಯತ್ತ ಮುಖಮಾಡಿದ ಚೇತೇಶ್ವರ್ ಪೂಜಾರ

Follow Us
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!
ಅನನ್ಯಾಗಾಗಿ ಅದ್ಭುತವಾಗಿ ಹಾಡು ಹೇಳಿದ ಅಂಕಿತಾ ಅಮರ್
ಅನನ್ಯಾಗಾಗಿ ಅದ್ಭುತವಾಗಿ ಹಾಡು ಹೇಳಿದ ಅಂಕಿತಾ ಅಮರ್
ಇಂಜಿನಿಯರ್ ಮನೇಲಿತ್ತು 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ಆಸ್ತಿ!
ಇಂಜಿನಿಯರ್ ಮನೇಲಿತ್ತು 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ಆಸ್ತಿ!
2nd PUCಯಲ್ಲಿ 6ನೇ ರ‍್ಯಾಂಕ್ ಗಳಿಸಿದ ವಿಕಾಸ್ ಹೇಳಿದ್ದೇನು ನೋಡಿ!
2nd PUCಯಲ್ಲಿ 6ನೇ ರ‍್ಯಾಂಕ್ ಗಳಿಸಿದ ವಿಕಾಸ್ ಹೇಳಿದ್ದೇನು ನೋಡಿ!
25 ವರ್ಷಗಳ ಬಳಿಕ ರೀ-ರಿಲೀಸ್ ಆದ ಕೋಟಿಗೊಬ್ಬ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್
25 ವರ್ಷಗಳ ಬಳಿಕ ರೀ-ರಿಲೀಸ್ ಆದ ಕೋಟಿಗೊಬ್ಬ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್
ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ತಂಡ
ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ತಂಡ
ಪಾಕಿಸ್ತಾನದಲ್ಲಿಂದು ಶಾಂತಿ ಮಾತುಕತೆ: ಇಸ್ಲಾಮಾಬಾದ್ ಕಂಪ್ಲೀಟ್ ಲಾಕ್​ಡೌನ್!
ಪಾಕಿಸ್ತಾನದಲ್ಲಿಂದು ಶಾಂತಿ ಮಾತುಕತೆ: ಇಸ್ಲಾಮಾಬಾದ್ ಕಂಪ್ಲೀಟ್ ಲಾಕ್​ಡೌನ್!
ನೀವು ಈ ಜಾಗಗಳಲ್ಲಿ ಎಡಗಾಲು ಮುಂದಕ್ಕಿಟ್ಟು ಒಳ ಹೋಗಬಹುದು!
ನೀವು ಈ ಜಾಗಗಳಲ್ಲಿ ಎಡಗಾಲು ಮುಂದಕ್ಕಿಟ್ಟು ಒಳ ಹೋಗಬಹುದು!