RCB New Captain: ಶಾಕಿಂಗ್: ಇಂದು ಆರ್​​ಸಿಬಿ ಪ್ರಕಟಿಸಲಿರುವ ಹೊಸ ನಾಯಕ ಯಾರು ಗೊತ್ತೇ?

IPL 2022: ಐಪಿಎಲ್ 2022 ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಆದರೆ, ಆರ್​ಸಿಬಿ ತಂಡದ ನಾಯಕ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಈ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ಆರ್​​ಸಿಬಿ ತಂಡದ ನಾಯಕನಹೆಸರು ಇಂದು ಘೋಷಣೆ ಆಗಲಿದೆ ಎಂದು ಹೇಳಲಾಗಿದೆ.

RCB New Captain: ಶಾಕಿಂಗ್: ಇಂದು ಆರ್​​ಸಿಬಿ ಪ್ರಕಟಿಸಲಿರುವ ಹೊಸ ನಾಯಕ ಯಾರು ಗೊತ್ತೇ?
RCB New Captain 2022
Follow us
| Updated By: Vinay Bhat

Updated on: Mar 07, 2022 | 10:54 AM

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದ್ದು, ಭಾನುವಾರವಷ್ಟೆ ಬಿಸಿಸಿಐ ವೇಳಾಪಟ್ಟಿ ಕೂಡ ಪ್ರಕಟ ಮಾಡಿದೆ. ಇದರ ಪ್ರಕಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಮಾರ್ಚ್ 26ರ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು ಆಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾರ್ಚ್ 27 ರಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಶುರು ಮಾಡಲಿದೆ. ಆದರೆ, ಆರ್​ಸಿಬಿ ತಂಡದ ನಾಯಕ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಈ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ.

ಹೌದು, ಆರ್​​ಸಿಬಿ ತಂಡದ ನೂತನ ಸಾರಥಿಯ ಹೆಸರು ಇಂದು ಘೋಷಣೆ ಆಗಲಿದೆ ಎಂದು ಖಾಸಗಿ ವೆಬ್​ಸೈಟ್​ವೊಂದು ವರದಿ ಮಾಡಿದೆ. ಈಗಾಗಲೇ ಎಲ್ಲ 9 ತಂಡಗಳ ನಾಯಕ ಯಾರು ಎಂಬುದು ತಿಳಿದಿದೆ. ಆದರೆ, ಆರ್​​ಸಿಬಿ ಮಾತ್ರ ಹೆಸರು ಪ್ರಕಟಿಸಲು ದಿನವನ್ನು ಮುಂದೂಡುತ್ತಲೇ ಬರುತ್ತಿತ್ತು. ಆದರೀಗ ಇದಕ್ಕೆ ಸೂಕ್ತ ಸಮಯ ಬಂದಿದ್ದು ಸೋಮವಾರದಂದು ಆರ್​ಸಿಬಿ ಹೊಸ ನಾಯಕ ಹೆಸರು ರಿವೀಲ್ ಆಗಲಿದೆಯಂತೆ. ಅಲ್ಲದೆ ನೂನ ಕ್ಯಾಪ್ಟನ್ ಯಾರು ಇರಬಹುದು ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ.

ವರದಿಯ ಪ್ರಕಾರ ಶಾಕಿಂಗ್ ಎಂಬಂತೆ ಆರ್​ಸಿಬಿ ತಂಡದ ಹೊಸ ನಾಯಕನಾಗಿ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದಾರಂತೆ. ಇವರ ಹೆಸರನ್ನು ಘೋಷಣೆ ಮಾಡಲು ಮಾತ್ರ ಫ್ರಾಂಚೈಸಿ ಬಾಕಿಉಳಿದಿದೆ ಎನ್ನಲಾಗಿದೆ. ಪ್ರಮುಖವಾಗಿ ಗ್ಲೆನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡುಪ್ಲೆಸಿಸ್ ಅವರುಗಳ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿತ್ತು. ಕಾರ್ತಿಕ್ ನಾಯಕ ಆಗ್ತಾರೆ ಎಂದು ಯಾರು ಊಹಿಸಿರಲಿಲ್ಲ. ಯಾಕಂದ್ರೆ ಕಳೆದ ಸೀಸನ್​ನಲ್ಲಿ ಕೆಕೆಆರ್ ತಂಡದ ಪರ ಆಡಿದ್ದ ಕಾರ್ತಿಕ್ ನಾಯಕನಾಗಿ ಸತತ ಸೋಲಿನ ರುಚಿ ಕಂಡಿದ್ದರು. ಆದರೆ ಇದೀಗ ಶಾಕಿಂಗ್ ಎಂಬಂತೆ ಆರ್​ಸಿಬಿ ನೂತನ ನಾಯಕ ದಿನೇಶ್ ಕಾರ್ತಿಕ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಐಪಿಎಲ್ 2022 ಮೆಗಾ ಹರಾಜಿನಲ್ಲಿ ಕಾರ್ತಿಕ್ ಅವರನ್ನು ಆರ್​​ಸಿಬಿ ಫ್ರಾಂಚೈಸಿ 5.50 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಐಪಿಎಲ್ ಆರಂಭವಾದ 2008 ರಿಂದಲೂ ಕಾರ್ತಿಕ್ ಈ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2008 ರಿಂದ 10ರ ವರೆಗೆ ಡೆಲ್ಲಿ ಡೇರ್ ಡೆವಿಲ್ಸ್, 2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, 2012 ಮತ್ತು 2013 ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ನಂತರ 2014 ರಲ್ಲಿ ಇವರನ್ನು ಡೆಲ್ಲಿ ಮತ್ತೆ ಖರೀದಿ ಮಾಡಿದರೆ, 2015 ರಲ್ಲಿ ಆರ್​ಸಿಬಿ ಪರ ಕೂಡ ಕಣಕ್ಕಿಳಿದಿದ್ದರು. 2016 ಮತ್ತು 2017 ರಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು. 2018 ರಲ್ಲಿ ಕೋಲ್ಕತ್ತಾ ಸೇರಿದ್ದ ಇವರು 2021ರ ವರೆಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಕಳೆದ ಐಪಿಎಲ್ 2021 ರಲ್ಲಿ ಕಾರ್ತಿಕ್ ಆಡಿದ 17 ಪಂದ್ಯಗಳಲ್ಲಿ 223 ರನ್ ಗಳಿಸಿದ್ದರು. ಒಟ್ಟಾರೆಯಾಗಿ ಇವರು 213 ಐಪಿಎಲ್ ಪಂದ್ಯಗಳನ್ನು ಆಡಿದ್ದು 19 ಅರ್ಧಶತಕ ಬಾರಿಸಿ 4046 ರನ್ ಕಲೆಹಾಕಿದ್ದಾರೆ.

ದಿನೇಶ್ ಕಾರ್ತಿಕ್​ಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅಪಾರ ಅನುಭವವಿದೆ. ಇತ್ತ ಡುಪ್ಲೆಸಿಸ್ ಮತ್ತು ಮ್ಯಾಕ್ಸ್​ವೆಲ್ ಅವರಿಗೂ ನಾಯಕನಾಗುವ ಅರ್ಹತೆ ಖಂಡಿತಾ ಇದೆ. ಆದರೆ, ಇವರು ಐಪಿಎಲ್ 2022 ಆರಂಭದ ಕೆಲವು ಪಂದ್ಯಗಳಿಗೆ ಇವರು ಅಲಭ್ಯರಾಗಿದ್ದಾರೆ. ಮ್ಯಾಕ್ಸ್​ವೆಲ್ ಅವರ ವಿವಾಹ ಕಾರ್ಯ ಇರುವ ಕಾರಣ ಇವರು ಏಪ್ರಿಲ್ 6ರ ನಂತರವಷ್ಟೆ ಆರ್​ಸಿಬಿ ತಂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿ ನಾಯಕತ್ವದ ಜವಾಬ್ದಾರಿ ದಿನೇಶ್ ಕಾರ್ತಿಕ್ ಅವರಿಗೆ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ಅಧಿಕೃತ ಹೇಳಿಕೆ ಇನ್ನಷ್ಟೆ ಹೊರಬೀಳಬೇಕಿದೆ.

Rohit Sharma: ನಾಯಕನಾಗಿ ಚೊಚ್ಚಲ ಟೆಸ್ಟ್ ಗೆಲುವು: ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತೇ?

IND vs SL: ಮೂರು ದಿನಗಳಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಕಾರಣವಾಗಿದ್ದು ಈ ನಾಲ್ಕು ಅಂಶ

ತಾಜಾ ಸುದ್ದಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ಮಾಜಿ ಸಿಎಂಗಳಾದ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರದ್ದು ಒಂದೇ ಮಾತು!
ಮಾಜಿ ಸಿಎಂಗಳಾದ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರದ್ದು ಒಂದೇ ಮಾತು!
ದರ್ಶನ್​ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್​ ಕೊಟ್ಟಿದ್ದು ಯಾಕೆ?
ದರ್ಶನ್​ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್​ ಕೊಟ್ಟಿದ್ದು ಯಾಕೆ?
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ