IND vs SL: ಪಿಂಕ್ ಬಾಲ್ ಟೆಸ್ಟ್​ನಿಂದ ಸ್ಟಾರ್ ಪ್ಲೇಯರ್ ಔಟ್: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

India Playing XI 2nd Test vs SL: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ ಬಳಗ ಹೇಗಿರಲಿದೆ ಎಂಬುದೇ ಕುತೂಹಲ. ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡುವುದು ಖಚಿತ ಎಂದೇ ಹೇಳಲಾಗಿದೆ.

IND vs SL: ಪಿಂಕ್ ಬಾಲ್ ಟೆಸ್ಟ್​ನಿಂದ ಸ್ಟಾರ್ ಪ್ಲೇಯರ್ ಔಟ್: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ
India Playing XI vs SL 2nd Test
Follow us
TV9 Web
| Updated By: Vinay Bhat

Updated on: Mar 11, 2022 | 9:26 AM

ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 222 ರನ್​ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿರುವ ಭಾರತ (India vs Sri Lanka 2nd Test) ತಂಡ ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 12 ರಿಂದ ಪಿಂಕ್ ಬಾಲ್ ಟೆಸ್ಟ್ (Pink Ball Test) ಪ್ರಾರಂಭವಾಗಲಿದೆ. ಇದು ಭಾರತದಲ್ಲಿ ನಡೆಯುತ್ತಿರುವ ಎರಡನೇ ಡೇ-ನೈಟ್ ಟೆಸ್ಟ್ ಪಂದ್ಯವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಂದ್ಯ ವೀಕ್ಷಿಸಲು ಶೇ. 100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದ್ದು, ಹೀಗಾಗಿ ತುಂಬಿದ ಕ್ರೀಡಾಂಗಣದಲ್ಲಿ ಇಂಡೋ-ಲಂಕಾ ಕದನ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ ಬಳಗ ಹೇಗಿರಲಿದೆ ಎಂಬುದೇ ಕುತೂಹಲ. ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಕೋಚ್ ರಾಹುಲ್ ದ್ರಾವಿಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡುವುದು ಖಚಿತ ಎಂದೇ ಹೇಳಲಾಗಿದೆ.

ಪ್ರಮುಖವಾಗಿ ಸ್ಟಾರ್ ಪ್ಲೇಯರ್ ಜಯಂತ್ ಯಾದವ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಅನುಮಾನ. ಯಾಕೆಂದರೆ ಮೊದಲ ಟೆಸ್ಟ್​ನಲ್ಲಿ ಇವರಿಗೆ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿದ್ದು ಕಡಿಮೆ. ಸಿಕ್ಕ ಅವಕಾಶದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್​ನಲ್ಲೂ ಯಾವುದೇ ಕಮಾಲ್ ಮಾಡಲಿಲ್ಲ. ಇದರ ನಡುವೆ ಅಕ್ಷರ್ ಪಟೇಲ್ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇವರು ಇದುವರೆಗೆ ಆಡಿರುವ 5 ಟೆಸ್ಟ್‌ಗಳಲ್ಲಿ ಬರೋಬ್ಬರಿ 36 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಕಳೆದ ವರ್ಷ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಅಹರ್ನಿಶಿ ಟೆಸ್ಟ್‌ನಲ್ಲಿ ಅಕ್ಷರ್ 70 ರನ್‌ಗೆ 11 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠರಾಗಿದ್ದರು. ಇದು ಇವರ ಪ್ಲಸ್ ಪಾಯಿಂಟ್ ಕೂಡ ಆಗಿದೆ.

ಓಪನರ್ ಆಗಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವುದು ಯಾರು ಎಂಬುದು ಇನ್ನೂ ಖಚಿತ ಮಾಹಿತಿ ಇಲ್ಲ. ಯಾಕೆಂದರೆ ಮಯಾಂಕ್ ಅಗರ್ವಾಲ್ ಮೊದಲ ಟೆಸ್ಟ್​ನಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿಲ್ಲ. ಇತ್ತ ಶುಭ್ಮನ್ ಗಿಲ್​ಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಮಯಾಂಕ್ ಕೈಬಿಟ್ಟು ಗಿಲ್ ಆರಂಭಿಕನಾಗಿ ಆಡ್ತಾರ ಎಂಬುದು ಕುತೂಹಲ ಕೆರಳಿಸಿದೆ. ಮೂರನೇ ಕ್ರಮಾಂಕದಲ್ಲಿ ಮೋಡಿ ಮಾಡಿರುವ ಹನುಮಾ ವಿಹಾರಿ ಸ್ಥಾನ ಭದ್ರವಾಗಿದೆ.

ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿ ಆಡಲಿದ್ದಾರೆ. ಕಳೆದ 100ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್​ನಿಂದ ಮೂರಂಕಿ ಬಂದಿರಲಿಲ್ಲ. ಬೆಂಗಳೂರು ಕೊಹ್ಲಿಯ ಹೋಮ್ ಗ್ರೌಂಡ್ ಇದ್ದಂತೆ. ಹೀಗಾಗಿ ಇಲ್ಲಾದರೂ ಕೊಹ್ಲಿ ಶತಕ ಸಿಡಿಸುತ್ತಾರಾ ಎಂಬುದು ಪ್ರಶ್ನೆಯಾಗಿದೆ. ನಂತರದ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದು ಭರವಸೆ ಮೂಡಿಸಿದ್ದಾರೆ. ಶತಕ ವಂಚಿತ ರಿಷಭ್ ಪಂತ್ 7ನೇ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ.

ಆಲ್ರೌಂಡರ್​ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯುವುದು ಖಚಿತ. 9ನೇ ಸ್ಥಾನದಲ್ಲಿ ಜಯಂತ್ ಯಾದವ್ ತಂಡದಿಂದ ಹೊರಗುಳಿಲಿದ್ದು ಅಕ್ಷರ್ ಪಟೇಲ್ ಅಥವಾ ಮೊಹಮ್ಮದ್ ಸಿರಾಜ್ ಕಾಣಿಸಿಕೊಳ್ಳಲಿದ್ದಾರೆ. ಅಕ್ಷರ್ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದಾರೆ. ಇತ್ತ ಸಿರಾಜ್​ಗೆ ಬೆಂಗಳೂರಿನ ಪಿಚ್​ನಲ್ಲಿ ಆಡಿ ಸಾಕಷ್ಟು ಅನುಭವವಿದೆ. ಹೀಗಾಗಿ ಈ ಸ್ಥಾನದ ಮೇಲೆ ಎಲ್ಲರ ಕಣ್ಣಿದೆ. ಉಳಿದಂತೆ ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಎಂದಿನಂತೆ ತಂಡದಲ್ಲಿರಲಿದ್ದಾರೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್/ಶುಭ್ಮನ್ ಗಿಲ್, ಹನುಮಾ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್/ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ.

Cheteshwar Pujara: ಟೀಮ್ ಇಂಡಿಯಾದಲ್ಲಿಲ್ಲ ಅವಕಾಶ: ಇಂಗ್ಲೆಂಡ್ ದೇಶಿ ಟೂರ್ನಿಯತ್ತ ಮುಖಮಾಡಿದ ಚೇತೇಶ್ವರ್ ಪೂಜಾರ

IND vs SL Test: ಭಾರತ-ಲಂಕಾ ಟೆಸ್ಟ್​ಗೆ ಶೇ. 100 ರಷ್ಟು ಪ್ರೇಕ್ಷಕರಿಗೆ ಅವಕಾಶ: ಇಂದೇ ಚಿನ್ನಸ್ವಾಮಿಯಲ್ಲಿ ಟಿಕೆಟ್ ಖರೀದಿಸಿ