
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ 2024 ರ (Women’s Premier League) ಗುಂಪು ಹಂತದ ಅಂತಿಮ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು (Delhi Capital vs Gujarat Giants) ಮುಖಾಮುಖಿಯಾಗಿವೆ. ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲಿದ್ದರೆ ಗುಜರಾತ್ ಜೈಂಟ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅಂದರೆ ಡೆಲ್ಲಿ ತಂಡ ಈಗಾಗಲೇ ಫೈನಲ್ ತಲುಪಿದ್ದರೆ, ಗುಜರಾತ್ ತಂಡ ಲೀಗ್ನಿಂದ ಹೊರಬಿದ್ದಿದೆ. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಗುಜರಾತ್ ತಂಡದ ನಾಯಕಿ ಬೆತ್ ಮೂನಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.
ಮೇಲೆ ಹೇಳಿದಂತೆ ಇಬ್ಬರ ನಡುವಿನ ಈ ಪಂದ್ಯ ಕೇವಲ ಔಪಚಾರಿಕವಾದರೂ, ಸೋಲಿನೊಂದಿಗೆ ಈ ಸೀಸನ್ ಆರಂಭಿಸಿದ್ದ ಗುಜರಾತ್ ಜೈಂಟ್ಸ್, ಗೆಲುವಿನೊಂದಿಗೆ ಕೊನೆಗೊಳಿಸಲು ಬಯಸುತ್ತದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ತಂಡ ಗೆಲುವಿನ ಓಟವನ್ನು ಮುಂದುವರೆಸುವ ಇರಾದೆಯಲ್ಲಿದ್ದಾರೆ.
ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ಮೂರು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡು ಬಾರಿ ಗುಜರಾತ್ ತಂಡವನ್ನು ಸೋಲಿಸಿದೆ. ಒಂದು ಪಂದ್ಯ ಗುಜರಾತ್ ಪರ ವಾಲಿದೆ. ಈ ಸೀಸನ್ನಲ್ಲಿ ಮೊದಲ ಬಾರಿಗೆ ಈ ಎರಡು ತಂಡಗಳ ನಡುವೆ ಹಣಾಹಣಿ ನಡೆದಿತ್ತು. ಆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 25 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿತ್ತು. ಇದೀಗ ಆ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಗುರಿ ಹೊಂದಿರುವ ಗುಜರಾತ್ ಜೈಂಟ್ಸ್ ಗೆಲುವಿನೊಂದಿಗೆ ಈ ಸೀಸನ್ ಅಂತ್ಯಗೊಳಿಸುತ್ತಾ ಅಥವಾ ಮತ್ತೊಮ್ಮೆ ದೆಹಲಿ ಎದುರು ಸೋಲನ್ನು ಎದುರಿಸುತ್ತಾ ಎಂಬುದನ್ನು ಇಂದಿನ ಪಂದ್ಯದಲ್ಲಿ ಕಾದು ನೋಡಬೇಕಿದೆ.
WPL 2024: ರಣರೋಚಕ ಪಂದ್ಯದಲ್ಲಿ 1 ರನ್‌ಗಳಿಂದ ಸೋತ ಆರ್ಸಿಬಿ..!
ಗುಜರಾತ್ ಜೈಂಟ್ಸ್: ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ (ನಾಯಕಿ), ಡೇಲಾನ್ ಹೇಮಲತಾ, ಫೋಬೆ ಲಿಚ್‌ಫೀಲ್ಡ್, ಆಶ್ಲೇ ಗಾರ್ಡ್ನರ್, ಭಾರತಿ ಫುಲ್ಮಾಲಿ, ಕ್ಯಾಥರೀನ್ ಬ್ರೈಸ್, ತನುಜಾ ಕನ್ವರ್, ಶಬ್ನಮ್ ಎಂಡಿ ಶಕೀಲ್, ಮೇಘನಾ ಸಿಂಗ್, ಮನ್ನತ್ ಕಶ್ಯಪ್.
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಎಲಿಸ್ ಕ್ಯಾಪ್ಸೆ, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ, ಶಿಖಾ ಪಾಂಡೆ, ಮಿನ್ನು ಮಣಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Wed, 13 March 24