WPL 2026: ಮೊದಲ ಗೆಲುವು ದಾಖಲಿಸಿದ ಡೆಲ್ಲಿ; ಯುಪಿಗೆ ಹ್ಯಾಟ್ರಿಕ್ ಸೋಲು

WPL 2026 Match 7: ಮಹಿಳಾ ಪ್ರೀಮಿಯರ್ ಲೀಗ್‌ನ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯುಪಿ ವಾರಿಯರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ಡೆಲ್ಲಿ ತಂಡವು ಕೊನೆಯ ಎಸೆತದಲ್ಲಿ 155 ರನ್‌ಗಳ ಗುರಿಯನ್ನು ಬೆನ್ನಟ್ಟಿ ಈ ಆವೃತ್ತಿಯಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿತು. ಈ ಜಯದಿಂದ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಹೊಸ ಹುರುಪು ಪಡೆಯಿತು, ಯುಪಿ ವಾರಿಯರ್ಸ್ ಗೆಲುವಿನ ನಿರೀಕ್ಷೆಯಲ್ಲಿದೆ.

WPL 2026: ಮೊದಲ ಗೆಲುವು ದಾಖಲಿಸಿದ ಡೆಲ್ಲಿ; ಯುಪಿಗೆ ಹ್ಯಾಟ್ರಿಕ್ ಸೋಲು
Dc Vs Upw

Updated on: Jan 14, 2026 | 11:19 PM

ಮಹಿಳಾ ಪ್ರೀಮಿಯರ್ ಲೀಗ್‌ನ (WPL 2026) ಏಳನೇ ಪಂದ್ಯ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ (Delhi Capitals vs UP Warriorz) ನಡುವೆ ನಡೆಯಿತು. ಉಭಯ ತಂಡಗಳು ಮೊದಲ ಗೆಲುವನ್ನು ಎದುರು ನೋಡುತ್ತಿದ್ದ ಕಾರಣ ಪಂದ್ಯ ಸಾಕಷ್ಟು ಮಹತ್ವದ್ದಾಗಿತ್ತು. ಅಂತಿಮವಾಗಿ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಈ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 154 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ದೆಹಲಿ ತಂಡವು ಕೊನೆಯ ಎಸೆತದಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಬೆನ್ನಟ್ಟಿತು.

154 ರನ್ ಕಲೆಹಾಕಿದ ಡೆಲ್ಲಿ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್​ ಪರ ನಾಯಕಿ ಮೆಗ್ ಲ್ಯಾನಿಂಗ್ (54) ಅರ್ಧಶತಕ ಬಾರಿಸಿದರೆ, ಹರ್ಲೀನ್ ಡಿಯೋಲ್ 47 ರನ್, ಫೋಬೆ ಲಿಚ್‌ಫೀಲ್ಡ್ 27 ರನ್ ಗಳಿಸಿದರು. ಹರ್ಲೀನ್ ಡಿಯೋಲ್ ರಿಟೈರ್ಡ್ ಹರ್ಟ್ ಮತ್ತು ಮೆಗ್ ಲ್ಯಾನಿಂಗ್ (54) ಔಟ್ ಆದ ನಂತರ, ಯುಪಿ ತಂಡದ ಇನ್ನಿಂಗ್ಸ್ ಕುಸಿಯಿತು. ಇದರಿಂದ ತಂಡವು ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲವಾಯಿತು. ಕೊನೆಯ ಓವರ್‌ನಲ್ಲಿ ಶಫಾಲಿ ವರ್ಮಾ ಎರಡು ವಿಕೆಟ್ ಪಡೆದರೆ, ದೆಹಲಿ ಪರ ಮರಿಜನ್ನೆ ಕಪ್ ಮತ್ತು ಶಫಾಲಿ ತಲಾ ಎರಡು ವಿಕೆಟ್ ಪಡೆದರು. ನಂದನಿ ಶರ್ಮಾ, ಸ್ನೇಹ್ ರಾಣಾ ಮತ್ತು ಶ್ರೀಚರಣಿ ತಲಾ ಒಂದು ವಿಕೆಟ್ ಪಡೆದರು.

ಕೊನೆಯ ಎಸೆತದಲ್ಲಿ ಗೆದ್ದ ಡೆಲ್ಲಿ

ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಿಜೆಲ್ ಲೀ ಅವರ 67 ರನ್ ಮತ್ತು ಲಾರಾ ವೋಲ್ವಾರ್ಡ್ ಅವರ ಅಜೇಯ 25 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಡೆಲ್ಲಿಯ ಆರಂಭಿಕ ಜೋಡಿ ಅದ್ಭುತವಾಗಿ ಇನ್ನಿಂಗ್ಸ್ ಆರಂಭಿಸಿತು. ಶಫಾಲಿ ಮತ್ತು ಲಿಜೆಲ್ಲೆ ಲೀ 10 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 87 ರನ್ ಗಳಿಸಿದರು. ಇದರ ನಂತರ ಶಫಾಲಿ ವರ್ಮಾ ಮತ್ತು ಲಿಜೆಲ್ಲೆ ಲೀ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದರು. ಲಿಜೆಲ್ಲೆ ಅರ್ಧಶತಕ ಗಳಿಸಿದರೆ, ಶಫಾಲಿ ವರ್ಮಾ 12 ನೇ ಓವರ್‌ನಲ್ಲಿ ಔಟಾದರು. ಹೀಗಾಗಿ ಡೆಲ್ಲಿ 13 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು. ಲಿಜೆಲ್ಲೆ ಲೀ 15 ನೇ ಓವರ್‌ನಲ್ಲಿ 67 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಡೆಲ್ಲಿಗೆ ಕೊನೆಯ ಓವರ್‌ನಲ್ಲಿ 6 ರನ್‌ಗಳು ಬೇಕಾಗಿದ್ದವು. ಸೋಫಿ ಎಕ್ಲೆಸ್ಟೋನ್ ಅವರ ಈ ಓವರ್‌ ರೋಚಕತೆ ಸೃಷ್ಟಿಸಿತ್ತಾದರೂ, ದೆಹಲಿ ತಂಡವು ಕೊನೆಯ ಎಸೆತದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:10 pm, Wed, 14 January 26