ನಾನಾ… ಹೌದು ನೀನೇ… ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
Harleen Deol retired out: ಅರ್ಧಶತಕದ ಹೊಸ್ತಿಲಲ್ಲಿದ್ದ ಹರ್ಲೀನ್ ಡಿಯೋಲ್ ಅವರನ್ನು ಯಪಿ ವಾರಿಯರ್ಸ್ ತಂಡದ ಕೋಚ್ ಅಭಿಷೇಕ್ ನಾಯರ್ ವಾಪಸ್ ಕರೆದಿದ್ದಾರೆ. 17ನೇ ಓವರ್ ಮುಕ್ತಾಯದ ಬೆನ್ನಲ್ಲೇ ಹರ್ಲೀನ್ ಅವರನ್ನು ಬ್ಯಾಟಿಂಗ್ ನಿಲ್ಲಿಸಿ ಹಿಂತಿರುಗುವಂತೆ ಸೂಚಿಸಿದರು. ಈ ವೇಳೆ ಗೊಂದಲಕ್ಕೊಳಗಾದ ಹರ್ಲೀನ್ ಡಿಯೋಲ್ ನಾನಾ ಎಂದು ಕೋಚ್ ಅನ್ನು ಪ್ರಶ್ನಿಸಿದರು. ಹೌದು, ನೀನೇ ಎನ್ನುವ ಸೂಚನೆ ಸಿಕ್ಕ ಬೆನ್ನಲ್ಲೇ ಹರ್ಲೀನ್ ಡಿಯೋಲ್ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಬಂದಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲೂ ರಿಟೈರ್ಡ್ ಔಟ್ ಸದ್ದು ಮಾಡಿದೆ. ಈ ಬಾರಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮರಳಿದ್ದು ಹರ್ಲೀನ್ ಡಿಯೋಲ್. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಯುಪಿ ವಾರಿಯರ್ಸ್ ಪರ ಹರ್ಲೀನ್ ಡಿಯೋಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ 36 ಎಸೆತಗಳನ್ನು ಎದುರಿಸಿದ ಹರ್ಲೀನ್ 7 ಫೋರ್ಗಳೊಂದಿಗೆ 47 ರನ್ ಕಲೆಹಾಕಿದ್ದರು.
ಆದರೆ ಅರ್ಧಶತಕದ ಹೊಸ್ತಿಲಲ್ಲಿದ್ದ ಹರ್ಲೀನ್ ಡಿಯೋಲ್ ಅವರನ್ನು ಯಪಿ ವಾರಿಯರ್ಸ್ ತಂಡದ ಕೋಚ್ ಅಭಿಷೇಕ್ ನಾಯರ್ ವಾಪಸ್ ಕರೆದಿದ್ದಾರೆ. 17ನೇ ಓವರ್ ಮುಕ್ತಾಯದ ಬೆನ್ನಲ್ಲೇ ಹರ್ಲೀನ್ ಅವರನ್ನು ಬ್ಯಾಟಿಂಗ್ ನಿಲ್ಲಿಸಿ ಹಿಂತಿರುಗುವಂತೆ ಸೂಚಿಸಿದರು.
ಈ ವೇಳೆ ಗೊಂದಲಕ್ಕೊಳಗಾದ ಹರ್ಲೀನ್ ಡಿಯೋಲ್ ನಾನಾ ಎಂದು ಕೋಚ್ ಅನ್ನು ಪ್ರಶ್ನಿಸಿದರು. ಹೌದು, ನೀನೇ ಎನ್ನುವ ಸೂಚನೆ ಸಿಕ್ಕ ಬೆನ್ನಲ್ಲೇ ಹರ್ಲೀನ್ ಡಿಯೋಲ್ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಬಂದಿದ್ದಾರೆ.
ಹರ್ಲೀನ್ ಡಿಯೋಲ್ ವಾಪಸ್ ಬಂದ ಬಳಿಕ ಕೊನೆಯ 3 ಓವರ್ಗಳಲ್ಲಿ ಯುಪಿ ವಾರಿಯರ್ಸ್ ತಂಡ ಕಲೆಹಾಕಿದ್ದು ಕೇವಲ 13 ರನ್ಗಳು ಮಾತ್ರ. ಹೀಗಾಗಿಯೇ ಇದೀಗ ಕೋಚ್ ಅಭಿಷೇಕ್ ನಾಯರ್ ಅವರ ನಡೆಯ ಬಗ್ಗೆ ಪ್ರಶ್ನೆಗಳೆದ್ದಿವೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು 154 ರನ್ಗಳು ಮಾತ್ರ. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ 7 ವಿಕೆಟ್ಗಳ ಜಯ ಸಾಧಿಸಿದೆ.

