ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
Chaithra Kundapura Youtube Channel: ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಸಿದ್ದರು. ಈ ಬಾರಿಯ ಸೀಸನ್ ಅಲ್ಲಿ ಅವರು ಅತಿಥಿಯಾಗಿ ಬಂದಿದ್ದರು. ಒಂದು ತಿಂಗಳ ಕಾಲ ಅವರು ಸ್ಪರ್ಧೆ ಮಾಡಿದ್ದರು. ಈಗ ಚೈತ್ರಾ ಕುಂದಾಪುರ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ.
ಚೈತ್ರಾ ಕುಂದಾಪುರ ಅವರು ಸಂಕ್ರಾಂತಿ ಸಂದರ್ಭದಲ್ಲಿ ಹೊಸ ಸುದ್ದಿ ನೀಡಿದ್ದಾರೆ. ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದಾರೆ. ಇದರ ಮೂಲಕ ಪಾಡ್ಕಾಸ್ಟ್ ನಡೆಸಲಿದ್ದಾರೆ ಎಂಬುದು ವಿಶೇಷ. ಚೈತ್ರಾಗೆ ಈಗಾಗಲೇ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅದನ್ನು ಅವರು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಆಧ್ಯಾತ್ಮ ಸೇರಿದಂತೆ ಹಲವು ವಿಷಯಗಳ ಕುರಿತು ಈ ಪಾಡ್ಕಾಸ್ಟ್ನಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ವಿವಿಧ ಕ್ಷೇತ್ರದವರನ್ನು ಇದರಲ್ಲಿ ಕರೆಸಿ ಮಾತುಕತೆ ನಡೆಸಲು ಅವರು ನಿರ್ಧರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 15, 2026 08:27 AM
