
ಮಹಿಳಾ ಪ್ರೀಮಿಯರ್ ಲೀಗ್ (Women’s Premier League) 2026 ರ 14 ನೇ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ (Gujarat Giants vs UP Warriorz 3. Women’s Premier League) ನಡುವೆ ವಡೋದರಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಯುಪಿ ತನ್ನ ಗೆಲುವಿನ ಓಟವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದರೆ, ಗುಜರಾತ್ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಉಳಿದಿರುವ ಪಂದ್ಯಗಳು ಎರಡೂ ತಂಡಗಳಿಗೆ ಬಹುಮುಖ್ಯವಾಗಿರುವ ಕಾರಣ, ಎರಡೂ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಗುಜರಾತ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ 11 ಕೂಡ ಖಚಿತವಾಗಿದೆ.
ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆ ಬಳಿಕ ಮಾತನಾಡಿದ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಆಡುವ 11 ರ ಬಳಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದರು. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಇಂದು ಸಹ ಆಡಲಿದೆ. ಇತ್ತ ಗುಜರಾತ್ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದ್ದು, ಜಾರ್ಜಿಯಾ ವೇರ್‌ಹ್ಯಾಮ್ ಬದಲಿಗೆ ಡ್ಯಾನಿ ವ್ಯಾಟ್-ಹಾಡ್ಜ್ ಅವರನ್ನು ಆಯ್ಕೆ ಮಾಡಲಾಗಿದೆ.
🚨 Toss 🚨@UPWarriorz elected to field against @Giant_Cricket
Updates ▶️ https://t.co/Nlx8ASrDqO #TATAWPL | #KhelEmotionKa | #GGvUPW pic.twitter.com/vWdWPFPonq
— Women’s Premier League (WPL) (@wplt20) January 22, 2026
ಯುಪಿ ವಾರಿಯರ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಕಿರಣ್ ನವಗಿರೆ, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಕ್ಲೋಯ್ ಟ್ರಯಾನ್, ಶ್ವೇತಾ ಸೆಹ್ರಾವತ್ (ವಿಕೆಟ್ ಕೀಪರ್), ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ, ಆಶಾ ಶೋಭನಾ, ಶಿಖಾ ಪಾಂಡೆ, ಕ್ರಾಂತಿ ಗೌಡ್.
ಗುಜರಾತ್ ಜೈಂಟ್ಸ್: ಬೆತ್ ಮೂನಿ (ವಿಕೆಟ್ ಕೀಪರ್), ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಡ್ಯಾನಿ ವ್ಯಾಟ್-ಹಾಡ್ಜ್, ಕನಿಕಾ ಅಹುಜಾ, ಆಶ್ಲೀ ಗಾರ್ಡ್ನರ್ (ನಾಯಕಿ), ಕಾಶ್ವಿ ಗೌತಮ್, ಭಾರತಿ ಫುಲ್ಮಾಲಿ, ತನುಜಾ ಕನ್ವರ್, ರೇಣುಕಾ ಸಿಂಗ್ ಠಾಕೂರ್, ಹ್ಯಾಪಿ ಕುಮಾರಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:28 pm, Thu, 22 January 26