WPL 2026: ಟಾಸ್ ಗೆದ್ದ ಆರ್​ಸಿಬಿ ತಂಡದಲ್ಲಿ ಬರೋಬ್ಬರಿ 3 ಬದಲಾವಣೆ

WPL RCB vs DC: ಮಹಿಳಾ ಪ್ರೀಮಿಯರ್ ಲೀಗ್‌ನ ಪ್ರಮುಖ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್​ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಸತತ 3 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಗೆಲುವಿನ ಓಟ ಮುಂದುವರಿಸಲು ಉತ್ಸುಕವಾಗಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಸವಾಲೊಡ್ಡಲು ಸಿದ್ಧವಾಗಿದೆ.

WPL 2026: ಟಾಸ್ ಗೆದ್ದ ಆರ್​ಸಿಬಿ ತಂಡದಲ್ಲಿ ಬರೋಬ್ಬರಿ 3 ಬದಲಾವಣೆ
Smriti Mandhana

Updated on: Jan 17, 2026 | 7:16 PM

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್​ ಲೀಗ್​ನ (Women’s Premier League) ನಾಲ್ಕನೇ ಆವೃತ್ತಿಯ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳು ಮುಖಾಮುಖಿಯಾಗಿವೆ. ಉಭಯ ತಂಡಗಳು ಗೆಲುವಿನೊಂದಿಗೆ ಬರುತ್ತಿರುವ ಕಾರಣ ಈ ಪಂದ್ಯದಲ್ಲಿ ಯಾರಿಗೆ ಗೆಲುವು ಎಂಬುದನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಒಂದೆಡೆ ಆರ್​ಸಿಬಿ ಆಡಿದ ಮೂರು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇತ್ತ ಡೆಲ್ಲಿ ತಂಡ ಆಡಿದ ಮೂರು ಪಂದ್ಯಗಳಲ್ಲಿ 2 ರಲ್ಲಿ ಸೋತು, 1 ರಲ್ಲಿ ಗೆದ್ದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಟಾಸ್ ಗೆದ್ದ ಆರ್​ಸಿಬಿ

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಮಾಡಲಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್‌ ಮಾಡಲಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಇಬ್ಬನಿ ಪ್ರಮುಖ ಪಾತ್ರವಹಿಸುವ ಕಾರಣ, ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚು ನೆರವು ಸಿಗಲಿದೆ. ಹೀಗಾಗಿ ಸ್ಮತಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಆ ಪ್ರಕಾರ ಆರ್​ಸಿಬಿ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದೆ.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್ (ದಯಾಲನ್ ಹೇಮಲತಾ ಬದಲಿಗೆ), ರಿಚಾ ಘೋಷ್ (ವಿಕೆಟ್ ಕೀಪರ್), ಗೌತಮಿ ನಾಯ್ಕ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್,ಪ್ರೇಮಾ ರಾವತ್ (ಅರುಂಧತಿ ರೆಡ್ಡಿ ಬದಲಿಗೆ), ಶ್ರೇಯಾಂಕ ಪಾಟೀಲ್, ಸಯಾಲಿ ಸತ್ಘರೆ (ಲಿನ್ಸೆ ಸ್ಮಿತ್ ಬದಲಿಗೆ), ಲಾರೆನ್ ಬೆಲ್.

ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಶಫಾಲಿ ವರ್ಮಾ, ಲಿಜೆಲ್ಲೆ ಲೀ (ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ (ನಾಯಕಿ), ಮರಿಝನ್ನೆ ಕಪ್, ಸ್ನೇಹ ರಾಣಾ, ನಿಕಿ ಪ್ರಸಾದ್, ಮಿನ್ನು ಮಣಿ, ಶ್ರೀ ಚರಣಿ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್ (ಚಿನೆಲ್ ಹೆನ್ರಿ ಬದಲಿಗೆ).

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Sat, 17 January 26