Yashasvi Jaiswal: ಕನ್ನಡಿಗನ ದಾಖಲೆ ಮುರಿದು ​ಹೊಸ ಇತಿಹಾಸ ಬರೆದ ಯಶಸ್ವಿ ಜೈಸ್ವಾಲ್

|

Updated on: Oct 27, 2024 | 2:00 PM

Yashasvi Jaiswal Records: ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ 77 ರನ್​ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಈ ಇನಿಂಗ್ಸ್​ನೊಂದಿಗೆ ಯುವ ದಾಂಡಿಗ ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 45 ವರ್ಷಗಳ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ.

Yashasvi Jaiswal: ಕನ್ನಡಿಗನ ದಾಖಲೆ ಮುರಿದು ​ಹೊಸ ಇತಿಹಾಸ ಬರೆದ ಯಶಸ್ವಿ ಜೈಸ್ವಾಲ್
Follow us on

ಭಾರತದಲ್ಲಿ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ ವರ್ಷದೊಳಗೆ ಸಾವಿರ ರನ್ ಕಲೆಹಾಕಿದ್ದು ಕೇವಲ ಇಬ್ಬರು ಬ್ಯಾಟರ್​ಗಳು ಮಾತ್ರ. ಆ ಇಬ್ಬರು ಬ್ಯಾಟರ್​ಗಳಲ್ಲಿ ಎರಡನೇಯವರು ಯಶಸ್ವಿ ಜೈಸ್ವಾಲ್. ಈ ಸಾಧನೆ ಮಾಡಿದ ಮೊದಲ ಭಾರತೀಯ ನಮ್ಮೆಲ್ಲರ ಹೆಮ್ಮೆಯ ಕನ್ನಡಿಗ ಗುಂಡಪ್ಪ ವಿಶ್ವನಾಥ್.

1979 ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳ ಮೂಲಕ ಗುಂಡಪ್ಪ ವಿಶ್ವನಾಥ್ ಬರೋಬ್ಬರಿ 1047 ರನ್​ ಕಲೆಹಾಕಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದು ವರ್ಷದೊಳಗೆ ತವರಿನಲ್ಲಿ ಸಾವಿರ ರನ್ ಪೇರಿಸಿದ ಭಾರತದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆ ಪಟ್ಟಿಗೆ ಯಶಸ್ವಿ ಜೈಸ್ವಾಲ್ ಕೂಡ ಸೇರ್ಪಡೆಯಾಗಿದ್ದಾರೆ. ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಈ ವರ್ಷ ತವರಿನಲ್ಲಿ 1000+ ಟೆಸ್ಟ್ ರನ್ ಕಲೆಹಾಕಿದ್ದಾರೆ. ಈ ಮೂಲಕ ಗುಂಡಪ್ಪ ವಿಶ್ವನಾಥ್ ಸಾಧನೆಯನ್ನು ಯಶಸ್ವಿ ಜೈಸ್ವಾಲ್ ಪುನರಾವರ್ತಿಸಿದ್ದಾರೆ.

ಅಷ್ಟೇ ಅಲ್ಲದೆ ಗುಂಡಪ್ಪ ವಿಶ್ವನಾಥ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಅಂದರೆ 1979 ರಲ್ಲಿ ವಿಶ್ವನಾಥ್ ಅವರು ಒಟ್ಟು 1047 ರನ್​ ಬಾರಿಸಿ ತವರಿನಲ್ಲಿ ಕ್ಯಾಲೆಂಡರ್ ವರ್ಷದೊಳಗೆ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನಿರ್ಮಿಸಿದ್ದರು.

ಇದೀಗ ಯಶಸ್ವಿ ಜೈಸ್ವಾಲ್ 1056 ರನ್ ಪೇರಿಸುವ ಮೂಲಕ ಭಾರತದಲ್ಲಿ ವರ್ಷವೊಂದರಲ್ಲಿ ಟೆಸ್ಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 45 ವರ್ಷಗಳ ಹಿಂದೆ ಗುಂಡಪ್ಪ ವಿಶ್ವನಾಥ್ ಬರೆದಿದ್ದ ದಾಖಲೆಯನ್ನು ಮುರಿಯುವಲ್ಲಿ 22 ವರ್ಷದ ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಝಿಂಬಾಬ್ವೆ ಅಬ್ಬರಕ್ಕೆ ಟೀಮ್ ಇಂಡಿಯಾದ ವಿಶ್ವ ದಾಖಲೆ ಉಡೀಸ್

ಇನ್ನು ಒಂದು ಕ್ಯಾಲೆಂಡರ್ ವರ್ಷದೊಳಗೆ ಟೆಸ್ಟ್​ನಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಆರಂಭಿಕರ ಪೈಕಿ ವೀರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದಾರೆ. 2008 ರಲ್ಲಿ 14 ಪಂದ್ಯಗಳಲ್ಲಿ ಸೆಹ್ವಾಗ್ 1,462 ರನ್ ಕಲೆಹಾಕಿ ಈ ದಾಖಲೆ ಬರೆದಿದ್ದರು. ಈ ವರ್ಷ 14 ಪಂದ್ಯಗಳಲ್ಲಿ 1,305 ರನ್ ಗಳಿಸಿರುವ ಯಶಸ್ವಿ ಜೈಸ್ವಾಲ್ ವೀರೇಂದ್ರ ಸೆಹ್ವಾಗ್ ಅವರ ದಾಖಲೆ ಮುರಿಯುವ ನಿರೀಕ್ಷೆಯಿದೆ.