AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೇಕೆ ಮಾಡಿದೆ ನೀನು? ಧೋನಿ ರಿಯಾಕ್ಷನ್ ಬಹಿರಂಗಪಡಿಸಿದ ರೈನಾ

ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಸುರೇಶ್ ರೈನಾ ಅವರ ಜಂಟಿ ನಿವೃತ್ತಿಯ ರಹಸ್ಯ ಈಗ ಅಧಿಕೃತವಾಗಿ ಹೊರಬಿದ್ದಿದೆ. 2020ರ ಆಗಸ್ಟ್ 15 ರಂದು ಇವರಿಬ್ಬರೂ ಒಟ್ಟಿಗೆ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದಾಗ ಇಡೀ ವಿಶ್ವವೇ ಆಶ್ಚರ್ಯ ಪಟ್ಟಿತ್ತು. ಆ ಕ್ಷಣದಲ್ಲಿ ಧೋನಿ ತಮಗೆ ಹೇಗೆ ಪ್ರತಿಕ್ರಿಯಿಸಿದರು ಮತ್ತು ಇಬ್ಬರೂ ಒಟ್ಟಿಗೆ ಕಣ್ಣೀರು ಹಾಕಿದ ಭಾವುಕ ಕಥೆಯನ್ನು ಸುರೇಶ್ ರೈನಾ ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಹೀಗೇಕೆ ಮಾಡಿದೆ ನೀನು? ಧೋನಿ ರಿಯಾಕ್ಷನ್ ಬಹಿರಂಗಪಡಿಸಿದ ರೈನಾ
ಧೋನಿ - ರೈನಾImage Credit source: BCCI
ಝಾಹಿರ್ ಯೂಸುಫ್
|

Updated on: Sep 05, 2026 | 12:14 PM

Share

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 2020ರ ಆಗಸ್ಟ್ 15 ಎಂದಿಗೂ ಮರೆಯಲಾಗದ ದಿನ. ಅಂದು ಟೀಮ್ ಇಂಡಿಯಾದ ದಿಗ್ಗಜ ನಾಯಕ ಎಂ.ಎಸ್. ಧೋನಿ ತಮ್ಮ ಅಂತರರಾಷ್ಟ್ರೀಯ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ, ಅವರ ಆಪ್ತ ಗೆಳೆಯ ಸುರೇಶ್ ರೈನಾ ಕೂಡ ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿ ವಿದಾಯ ಹೇಳಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸುರೇಶ್ ರೈನಾ, ತಾವು ನಿವೃತ್ತಿ ಘೋಷಿಸಿದ ತಕ್ಷಣ ಧೋನಿ ಹೇಗೆ ಪ್ರತಿಕ್ರಿಯಿಸಿದರು ಎಂಬ ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಹೀಗೇಕೆ ಮಾಡಿದೆ ನೀನು?

ಆಗಸ್ಟ್ 15ರ ಸಂಜೆ 7:29ಕ್ಕೆ ಧೋನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿವೃತ್ತಿಯ ಪೋಸ್ಟ್ ಹಾಕಿದ್ದರು. ಇದನ್ನು ನೋಡಿದ ತಕ್ಷಣ ಸುರೇಶ್ ರೈನಾ ಕೂಡ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದರು. ರೈನಾ ಅವರ ಈ ದಿಢೀರ್ ನಿರ್ಧಾರವನ್ನು ಕಂಡು ಧೋನಿ ಅಚ್ಚರಿಗೊಂಡರಂತೆ. ರೈನಾ ಅವರ ಬಳಿ ಬಂದ ಧೋನಿ, “ಯೇ ಕ್ಯಾ ಕಿಯಾ ತೂನೇ?” (ಯೇ, ಹೀಗೆಕೆ ಮಾಡಿದೆ ನೀನು) ಎಂದು ಆಘಾತದಿಂದ ಕೇಳಿದ್ದರು ಎಂದು ರೈನಾ ನೆನಪಿಸಿಕೊಂಡಿದ್ದಾರೆ.

ಭಾವುಕರಾದ ‘ಥಲಾ’ ಮತ್ತು ‘ಚಿನ್ನ ಥಲಾ’:

ಚೆನ್ನೈ ಸೂಪರ್ ಕಿಂಗ್ಸ್ (CSK) ಕ್ಯಾಂಪ್‌ನಲ್ಲಿ ನಡೆದ ಈ ಘಟನೆಯನ್ನು ನೆನೆದ ರೈನಾ, ನಿವೃತ್ತಿ ಘೋಷಣೆಯಾದ ಬೆನ್ನಲ್ಲೇ ಇಬ್ಬರೂ ಭಾವೋದ್ವೇಗಕ್ಕೆ ಒಳಗಾದರು ಎಂದಿದ್ದಾರೆ. “ನಾವು ನಮ್ಮ ನಿವೃತ್ತಿಯ ಪೋಸ್ಟ್ ಹಾಕಿದ ನಂತರ ಪರಸ್ಪರ ಗಟ್ಟಿಯಾಗಿ ಅಪ್ಪಿಕೊಂಡು ಕಣ್ಣೀರು ಹಾಕಿದೆವು. ಅಂದು ರಾತ್ರಿ ನಮ್ಮ ಜೊತೆ ಪಿಯೂಷ್ ಚಾವ್ಲಾ, ಅಂಬಾಟಿ ರಾಯುಡು, ಕೇದರ್ ಜಾಧವ್ ಮತ್ತು ಕರನ್ ಶರ್ಮಾ ಇದ್ದರು. ನಾವೆಲ್ಲರೂ ಒಟ್ಟಿಗೆ ಕುಳಿತು ನಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತಡರಾತ್ರಿಯವರೆಗೆ ಪಾರ್ಟಿ ಮಾಡಿದೆವು,” ಎಂದು ರೈನಾ ಹೇಳಿದ್ದಾರೆ.

ಆಗಸ್ಟ್ 15ನ್ನೇ ಆಯ್ಕೆ ಮಾಡಿದ್ದರ ಹಿಂದೆ ಇತ್ತು ರೋಚಕ ಕಾರಣ!

ಸ್ವಾತಂತ್ರ್ಯ ದಿನದಂದೇ ಇಬ್ಬರೂ ಒಟ್ಟಿಗೆ ನಿವೃತ್ತಿ ಪಡೆಯಲು ಒಂದು ವಿಶೇಷವಾದ ಗಣಿತದ ಲೆಕ್ಕಾಚಾರವಿತ್ತು ಎಂಬುದನ್ನು ರೈನಾ ಬಹಿರಂಗಪಡಿಸಿದ್ದಾರೆ

  • ಧೋನಿ ಅವರ ಜೆರ್ಸಿ ನಂಬರ್: 7
  • ರೈನಾ ಅವರ ಜೆರ್ಸಿ ನಂಬರ್: 3
  • ಈ ಎರಡು ಸಂಖ್ಯೆಗಳನ್ನು ಒಟ್ಟಿಗೆ ಸೇರಿಸಿದರೆ 73 ಆಗುತ್ತದೆ.
  • ಅಂದು ಭಾರತ ತನ್ನ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿತ್ತು.

ಇದನ್ನೂ ಓದಿ: ಇಂಗ್ಲೆಂಡ್ ತಂಡ ಪ್ರಕಟ: ಇಬ್ಬರು ಹೊಸ ಆಟಗಾರರು ಎಂಟ್ರಿ

ದೇಶದ ಮೇಲಿನ ಗೌರವ ಹಾಗೂ ತಮ್ಮ ಸ್ನೇಹದ ಸಂಕೇತವಾಗಿ ಈ ಅಪರೂಪದ ದಿನವನ್ನೇ ಇಬ್ಬರೂ ವಿದಾಯಕ್ಕೆ ಆರಿಸಿಕೊಂಡಿದ್ದರು. ಭಾರತೀಯ ಕ್ರಿಕೆಟ್‌ನ ‘ಜಯ್-ವೀರು’ ಎಂದೇ ಖ್ಯಾತರಾಗಿದ್ದ ಈ ಜೋಡಿ, ಮೈದಾನದಿಂದ ಒಟ್ಟಿಗೆ ಹೊರನಡೆದರೂ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಎಂದಿಗೂ ಅಮರ. ಇವರ ಅಪರೂಪದ ಸ್ನೇಹ ಮುಂದಿನ ಪೀಳಿಗೆಯ ಆಟಗಾರರಿಗೂ ಸದಾ ಸ್ಫೂರ್ತಿ.

Follow Us
10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!
10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!
‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ
‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ
ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಸವದತ್ತಿಯಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕಾರ್ಮಿಕರಿಗೆ ನಿಧಿ ಪತ್ತೆ
ಸವದತ್ತಿಯಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕಾರ್ಮಿಕರಿಗೆ ನಿಧಿ ಪತ್ತೆ
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!