Yuvraj Singh: ಬದಲಾದ ಯುವಿ ಲುಕ್: ಅಷ್ಟಕ್ಕೂ ಸಿಕ್ಸರ್ ಕಿಂಗ್​ಗೆ ಏನಾಯ್ತು?

| Updated By: ಝಾಹಿರ್ ಯೂಸುಫ್

Updated on: Jan 30, 2022 | 2:19 PM

yuvraj singh : ಯುವರಾಜ್ ಸಿಂಗ್ ಟೀಮ್ ಇಂಡಿಯಾ ಕಂಡಂತಹ ಚಾಂಪಿಯನ್ ಆಲ್​ರೌಂಡರ್. ಏಕೆಂದರೆ ಭಾರತ ತಂಡವು ಮೊದಲ T20 ವಿಶ್ವಕಪ್(2007) ಮತ್ತು ODI ವಿಶ್ವಕಪ್ (2011) ಅನ್ನು ಗೆದ್ದಾಗ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಯುವರಾಜ್ ಸಿಂಗ್ .

Yuvraj Singh: ಬದಲಾದ ಯುವಿ ಲುಕ್: ಅಷ್ಟಕ್ಕೂ ಸಿಕ್ಸರ್ ಕಿಂಗ್​ಗೆ ಏನಾಯ್ತು?
yuvraj singh
Follow us on

ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಸಖತ್ (Yuvraj Singh) ಸಂಭ್ರಮದಲ್ಲಿದ್ದಾರೆ. ಇದಕ್ಕೆ ಒಂದು ಕಾರಣ ಯುವಿ ಪಾಜಿ ತಂದೆಯಾಗಿರುವುದು. ಜನವರಿ 25 ರಂದು ಯುವಿ ಪತ್ನಿ ಹೇಜೆಲ್ ಕೀಚ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂಭ್ರಮದ ಒಂದೆಡೆಯಾದರೆ, ಈ ಖುಷಿಯ ಸಂದರ್ಭದಲ್ಲಿ ಯುವರಾಜ್ ಸಿಂಗ್ ಹಂಚಿಕೊಂಡ ವಿಡಿಯೋ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಏಕೆಂದರೆ ಈ ವಿಡಿಯೋದಲ್ಲಿ ಯುವರಾಜ್ ವಿಕೃತ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಸಕ್ರೀಯರಾಗಿರುವ ಯುವರಾಜ್​ ಸಿಂಗ್, ರೀಲ್ಸ್ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ. ಈ ವೇಳೆ ಫಿಲ್ಟರ್ ಬಳಸಿ ತನ್ನ ಗುರುತು ಸಿಗದಂತೆ ವಿಕೃತವಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ “ಕಿನ್ನ ಸೋನಾ ತೈನು ರಬ್ ನೆ ಬನಾಯಾ” ಹಾಡನ್ನು ಗುನುಗುತ್ತಾ ಡಿಫರೆಂಟ್ ಗೆಟಪ್​ನಲ್ಲಿ ಕಾಣಿಸಿದ್ದಾರೆ. ಯುವರಾಜ್​ ಸಿಂಗ್ ತಮಾಷೆಗಾಗಿ ಕ್ರಿಯೇಟ್ ಮಾಡಿರುವ ಈ ವಿಡಿಯೋ ನೋಡಿದ ಬಹುತೇಕ ಅಭಿಮಾನಿಗಳು ಆರಂಭದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಯುವಿ ಇನ್​ಸ್ಟಾ ಫಿಲ್ಟರ್ ಬಳಿಸಿ ವಿಡಿಯೋ ಕ್ರಿಯೇಟ್ ಮಾಡಿರುವುದು ಗೊತ್ತಾಗಿದೆ. ಒಟ್ಟಿನಲ್ಲಿ ರಂಜಿಸಲು ಯತ್ನಿಸಿದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ಹೊಸ ಲುಕ್ ನೋಡಿ ಒಂದು ಕ್ಷಣ ಅಭಿಮಾನಿಗಳಿಗೆ ಶಾಕ್ ಆಗಿರುವುದಂತು ಸತ್ಯ.

ಚಾಂಪಿಯನ್ ಆಲ್​ರೌಂಡರ್:
ಯುವರಾಜ್ ಸಿಂಗ್ ಟೀಮ್ ಇಂಡಿಯಾ ಕಂಡಂತಹ ಚಾಂಪಿಯನ್ ಆಲ್​ರೌಂಡರ್. ಏಕೆಂದರೆ ಭಾರತ ತಂಡವು ಮೊದಲ T20 ವಿಶ್ವಕಪ್(2007) ಮತ್ತು ODI ವಿಶ್ವಕಪ್ (2011) ಅನ್ನು ಗೆದ್ದಾಗ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಯುವರಾಜ್ ಸಿಂಗ್ . ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವಿ 14 ಎಸೆತಗಳಲ್ಲಿ 58 ರನ್ ಗಳಿಸಿ ವಿಶ್ವ ದಾಖಲೆ ಬರೆದಿದ್ದರು. ಇದರ ನಂತರ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 30 ಎಸೆತಗಳಲ್ಲಿ 70 ರನ್ ಗಳಿಸಿ ತಂಡವನ್ನು ಫೈನಲ್​ಗೆ ತಲುಪಿಸಿದ್ದರು. ಅದೇ ಸಮಯದಲ್ಲಿ, 2011 ರ ODI ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಯುವಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಯುವರಾಜ್ ಸಿಂಗ್ ಅವರ ಅಂತರಾಷ್ಟ್ರೀಯ ವೃತ್ತಿಜೀವನ:
ಯುವರಾಜ್ ಸಿಂಗ್ ವೈಟ್ ಬಾಲ್ ಕ್ರಿಕೆಟ್‌ನ ಅಪಾಯಕಾರಿ ಆಟಗಾರರಲ್ಲಿ ಒಬ್ಬರು. ಅವರು ತಮ್ಮ ವೃತ್ತಿಜೀವನದಲ್ಲಿ 304 ODI ಮತ್ತು 58 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ODI ಗಳಲ್ಲಿ 8701 ರನ್ ಮತ್ತು 111 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1177 ರನ್ ಮತ್ತು 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಯುವಿ ಕೇವಲ 40 ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿದೆ. ಈ ವೇಳೆ 1900 ರನ್ ಮತ್ತು 9 ವಿಕೆಟ್​ಗಳನ್ನು ಪಡೆದಿದ್ದರು.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(yuvraj singh shares funny video on instagram)