Under-19 World Cup 2022: ಕ್ವಾರ್ಟರ್ ಫೈನಲ್ನಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ; ಸೆಮಿಫೈನಲ್ನಲ್ಲಿ ಎದುರಾಳಿ ಯಾರು?
ಕೆರೆಬಿಯನ್ ನಾಡಿನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತವು ಬಾಂಗ್ಲಾದೇಶದ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಐದು ವಿಕೆಟ್ಗಳ ಜಯ ಸಾಧಿಸಿದೆ.
ಆ್ಯಂಟಿಗುವಾ: ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ನಲ್ಲಿ (Under- 19 World Cup 2022) ಭಾರತ ತಂಡದ (Indian Cricket Team) ವಿಜಯ ಯಾತ್ರೆ ಮುಂದುವರೆದಿದೆ. ನಿನ್ನೆ (ಶನಿವಾರ ಜ.29) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 5 ವಿಕೆಟ್ಗಳಿಂದ ಮಣಿಸಿದ ಭಾರತವು ಸೆಮಿಫೈನಲ್ಗೇರಿದೆ. ಆ್ಯಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ನಾಯಕ ಯಶ್ ಧುಲ್ ಆಯ್ಕೆಯನ್ನು ಸಮರ್ಥಿಸಿಕೊಂಡ ಭಾರತದ ಬೌಲರ್ಗಳು ಬಾಂಗ್ಲಾದೇಶದ ಬ್ಯಾಟರ್ಗಳು ಕ್ರೀಸ್ ಮೇಲೆ ನಿಲ್ಲಲು ಸಮಾಯಾವಕಾಶವನ್ನೇ ನೀಡಲಿಲ್ಲ. ಎರಡನೇ ಓವರ್ನಲ್ಲಿಯೇ ವಿಕೆಟ್ ಕಬಳಿಸಿದ ರವಿಕುಮಾರ್ ಬಾಂಗ್ಲಾದೇಶದ ಬ್ಯಾಟಿಂಗ್ ಕುಸಿತಕ್ಕೆ ನಾಂದಿ ಹಾಡಿದರು. ಅಲ್ಲಿಂದ ಬಾಂಗ್ಲಾ ತಂಡ ಚೇತರಿಸಿಕೊಳ್ಳಲೇ ಇಲ್ಲ. ಎಂಟನೇ ಓವರ್ ಒಳಗೆ ಬಾಂಗ್ಲಾ ತನ್ನ ಮೂರು ಬ್ಯಾಟರ್ಗಳನ್ನು ಕಳೆದುಕೊಂಡಿತ್ತು. ಮೂರೂ ವಿಕೆಟ್ಗಳು ರವಿಕುಮಾರ್ ಪಾಲಾಗಿತ್ತು. ಯಶಸ್ವಿ ಬೌಲಿಂಗ್ ದಾಳಿ ನಡೆಸಿದ ಭಾರತ ತಂಡ ಬಾಂಗ್ಲಾವನ್ನು 111 ರನ್ನುಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ನಂತರ ಬ್ಯಾಟಿಂಗ್ ನಡೆಸಿದ ಭಾರತ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನಿಂಗ್ ಬ್ಯಾಟರ್ ಹರ್ನೂರ್ ಸಿಂಗ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರ ತಂಡವನ್ನು ಆಧರಿಸಿದ ಅಂಗ್ಕ್ರಿಶ್ ರಘುವಂಶಿ ಹಾಗೂ ಶೈಕ್ ರಶೀದ್ ಎರಡನೇ ವಿಕೆಟ್ಗೆ 70 ರನ್ ಪೇರಿಸಿದರು. ರಘುವಂಶಿ 44 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಭಾರತ ಬ್ಯಾಟಿಂಗ್ನಲ್ಲಿ ಸಣ್ಣ ಕುಸಿತ ಕಂಡಿತು. ಸಿದ್ಧಾರ್ಥ್ ಯಾದವ್ 6ಕ್ಕೆ ವಿಕೆಟ್ ಒಪ್ಪಿಸಿದರೆ, ರಾಜ್ ಬವಾ ಸೊನ್ನೆ ಸುತ್ತಿದರು.
ಗೆಲುವಿನತ್ತ ಕೊಂಡೊಯ್ದ ನಾಯಕ!: ಭಾರತ ತಂಡದ ನಾಯಕ ಯಶ್ ಧುಲ್ ಟೂರ್ನಿಯುಲ್ಲಿ ಗಮನ ಸೆಳೆಯುತ್ತಿದ್ದಾರೆ. ಕೊರೊನಾದಿಂದ ಚೇತರಿಸಿಕೊಂಡು ಕಣಕ್ಕಿಳಿದಿದ್ದ ಅವರು, ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. 26 ಎಸೆತಗಳಲ್ಲಿ 20 ರನ್ಗಳ ಜವಾಬ್ದಾರಿಯುತ ಆಟವನ್ನು ಅವರಾಡಿದರು. ಯಶ್ ಧುಲ್ಗೆ ಸಾಥ್ ನೀಡಿದ್ದು- ಕೌಶಲ್ ತಾಂಬೆ (11 ರನ್). ಕೌಶಲ್ ಭರ್ಜರಿ ಸಿಕ್ಸರ್ ಮೂಲಕ ತಂಡದ ಜಯವನ್ನು ಸಾರಿದರು. ಏಳು ಓವರ್ಗಳ ದಾಳಿಯಲ್ಲಿ 1 ಮೇಡನ್ ಸಹಿತ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸಿದ ರವಿ ಕುಮಾರ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
All Over: Sealed with a SIX
India U19 have advanced to the semi-final of #U19CWC with a 5-wicket win over Bangladesh U19 in Antigua! #BoysInBlue #INDvBAN
Details – https://t.co/GJsWrPDzdJ pic.twitter.com/tkt6xC3qD9
— BCCI (@BCCI) January 29, 2022
ಮುಂದಿನ ಎದುರಾಳಿ ಆಸ್ಟ್ರೇಲಿಯಾ, ಪಂದ್ಯ ಯಾವಾಗ? ಭಾರತ ತಂಡವೀಗ ಕ್ವಾರ್ಟರ್ ಫೈನಲ್ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಅಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಸವಾಲೊಡ್ಡಲಿದೆ. ಬುಧವಾರ ಅಂದರೆ ಫೆಬ್ರವರಿ 2ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ. ಆ್ಯಂಟಿಗುವಾದಲ್ಲಿ ಪಂದ್ಯ ನಡೆಯಲಿದೆ.
ಇದನ್ನೂ ಓದಿ:
IND vs WI: ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದ ಉಪನಾಯಕ ಯಾರು ಗೊತ್ತಾ?
1w, 4, 4, 1w, 6, 6, 6: ಇಂಗ್ಲೆಂಡ್- ವಿಂಡೀಸ್ ರೋಚಕ ಪಂದ್ಯ: ಕೊನೆಯ ಓವರ್ನಲ್ಲಿ 30 ರನ್ಗಳ ಚೇಸಿಂಗ್..ಆದರೆ
Published On - 9:23 am, Sun, 30 January 22