AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Under 19 World Cup: ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಬೌಲರ್‌ಗಳ ಅಬ್ಬರ; 111 ರನ್​ಗಳಿಗೆ ಬಾಂಗ್ಲಾ ಸರ್ವಪತನ!

Under19 World Cup: ಆ್ಯಂಟಿಗುವಾದಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್-19 ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತವು ಬಾಂಗ್ಲಾದೇಶವನ್ನು 37.1 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಕಟ್ಟಿಹಾಕಿದೆ.

Under 19 World Cup: ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಬೌಲರ್‌ಗಳ ಅಬ್ಬರ; 111 ರನ್​ಗಳಿಗೆ ಬಾಂಗ್ಲಾ ಸರ್ವಪತನ!
ಕ್ವಾರ್ಟರ್ ಫೈನಲ್‌ ಪಂದ್ಯ
TV9 Web
| Edited By: |

Updated on:Jan 29, 2022 | 10:11 PM

Share

ಆ್ಯಂಟಿಗುವಾದಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್-19 ವಿಶ್ವಕಪ್‌ ಕ್ವಾರ್ಟರ್ ಫೈನಲ್‌ನಲ್ಲಿ ಭಾರತವು ಬಾಂಗ್ಲಾದೇಶವನ್ನು 37.1 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಕಟ್ಟಿಹಾಕಿದೆ. ಭಾರತದ ಪರ ರವಿಕುಮಾರ್ ಮೂರು ವಿಕೆಟ್ ಪಡೆದರು. ವಿಕಿ ಓಸ್ಟ್ವಾಲ್ ಎರಡು ವಿಕೆಟ್ ಪಡೆದರೆ ಕೌಶಲ್ ತಾಂಬೆ ಮತ್ತು ರಾಜವರ್ಧನ್ ಹಂಗರಗೇಕರ್ ತಲಾ ಒಂದು ವಿಕೆಟ್ ಪಡೆದರು. ಇನಿಂಗ್ಸ್‌ನುದ್ದಕ್ಕೂ, ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳಿಗೆ ತಲೆಬಾಗಿದರು. ರವಿಕುಮಾರ್ ಅವರ ಸ್ವಿಂಗ್ ಎದುರು ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ನೆಲೆಯೂರಲು ಅವಕಾಶ ಸಿಗಲಿಲ್ಲ.

ಶಾಕ್ ಮೇಲೆ ಶಾಕ್ ಕೊಟ್ಟ ರವಿಕುಮಾರ್ ಬಾಂಗ್ಲಾದೇಶ ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದರೂ ರವಿಕುಮಾರ್ ಅವರ ನಿರೀಕ್ಷೆಯನ್ನು ಹುಸಿಗೊಳಿಸಿದರು. ಅವರು ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಮಹ್ಫಿಜುಲ್ ಇಸ್ಲಾಂ ಅವರ ವಿಕೆಟ್ ಪಡೆದರು. ಇಸ್ಲಾಂಗೆ ನಾಲ್ಕು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಲು ಸಾಧ್ಯವಾಯಿತು. ನಂತರ ಆರನೇ ಓವರ್​ನ ನಾಲ್ಕನೇ ಎಸೆತದಲ್ಲಿ ರವಿ ಇಫ್ತಿಕರ್ ಹುಸೇನ್ ಗೆ ಪೆವಿಲಿಯನ್ ಹಾದಿ ತೋರಿಸಿದರು. 17 ಎಸೆತಗಳನ್ನು ಆಡಿದ ಹುಸೇನ್ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ಎಂಟನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಪ್ರಾಂತಿಕ್ ನವ್ರೋಜ್ ನಬಿಲ್ ಅವರನ್ನು ಔಟ್ ಮಾಡುವ ಮೂಲಕ ಬಾಂಗ್ಲಾದೇಶಕ್ಕೆ ಮೂರನೇ ಹೊಡೆತ ನೀಡಿದರು. ನವ್ರೋಜ್ ಕೇವಲ ಏಳು ರನ್ ಗಳಿಸಲಷ್ಟೇ ಶಕ್ತರಾದರು. ಇಲ್ಲಿ ಪ್ರಸ್ತುತ ವಿಜೇತ ತಂಡ ಕೇವಲ 14 ರನ್‌ಗಳಿಗೆ ಮೂರು ವಿಕೆಟ್ ಆಗಿತ್ತು.

ರವಿಯ ನಂತರ ಒಸ್ತ್ವಾಲ್‌ ಅಬ್ಬರ ರವಿ ನಂತರ ಓಸ್ತ್ವಾಲ್ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳನ್ನು ಹೆಚ್ಚು ಕಾಲ ನಿಲ್ಲಲು ಬಿಡಲಿಲ್ಲ. ಓಸ್ತ್ವಾಲ್ ಒಂಬತ್ತು ರನ್ ಗಳಿಸಿದ ಅರಿಫುಲ್ ಇಸ್ಲಾಮ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಮೆಹಮದ್ ಫಹೀಮ್‌ಗೆ ಖಾತೆ ತೆರೆಯಲು ಸಹ ಬಿಡಲಿಲ್ಲ. ತಾಂಬೆ ಬಾಂಗ್ಲಾದೇಶದ ನಾಯಕ ರಕಿಬುಲ್ ಹಸನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಹಸನ್ ಏಳು ರನ್ ಗಳಿಸಲಷ್ಟೇ ಶಕ್ತರಾದರು. 17 ರನ್ ಗಳಿಸಿದ್ದಾಗ ಎಚ್ ಮೊಲ್ಲಾ ರನೌಟ್ ಆದರು. ಆಂಗ್ಕ್ರಿಶ್ ರಘುವಂಶಿ ತಂಡದ ಅತಿ ಹೆಚ್ಚು ಸ್ಕೋರರ್ ಆಗಿದ್ದ ಎಸ್.ಎಂ.ಮೆಹರೋಬ್ ಅವರನ್ನು ಬಲಿಪಶು ಮಾಡಿದರು. ಆಶಿಕುರ್ ಜಮಾನ್ 16 ರನ್ ಕೊಡುಗೆ ನೀಡಿ ರನ್ ಔಟ್ ಆದರು. ರಾಜವರ್ಧನ್ ಅವರು ತಂಜಿಮ್ ಹಸನ್ ಶಾಕಿಬ್ ಅವರನ್ನು ಔಟ್ ಮಾಡುವ ಮೂಲಕ ಬಾಂಗ್ಲಾದೇಶದ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು.

Published On - 10:10 pm, Sat, 29 January 22