ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್, ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಯುಜ್ವೇಂದ್ರ ಚಹಲ್ (Yuzvendra Chahal) ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವೆ ಮನಸ್ತಾನ ಉಂಟಾಗಿದೆ, ಇವರಿಬ್ಬರು ಡೈವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬಳಿಕ ಇವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ವದಂತಿಗಳನ್ನು ನಂಬಬೇಡಿ ಎಂದು ಹೇಳಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದರು. ಹೀಗಿದ್ದರೂ ಚಹಲ್-ಧನಶ್ರಿ (Dhanashree Verma) ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಆಗಾಗ ಬರುತ್ತಲೇ ಇದೆ. ಹೀಗಿರುವಾಗ ಚಹಲ್ ಅವರು ತನ್ನ ಹಾಗೂ ಧನಶ್ರೀ ವರ್ಮ ಭೇಟಿ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅತ್ಯಂತ ಜನಪ್ರಿಯ ನೃತ್ಯಗಾರ್ತಿ ಆಗಿರುವ ಧನಶ್ರೀ ವರ್ಮಾ ಅವರನ್ನು ಚಹಲ್ ಮೊದಲು ನೋಡಿದ್ದೇ ಕೋವಿಡ್ ಸಮಯದಲ್ಲಿ ಡ್ಯಾನ್ಸ್ ಕಲಿಯುವಾಗಂತೆ. ಬಳಿಕ ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಆಗಿ 2020 ರಲ್ಲಿ ಹಸಮಣೆ ಏರಿದರು. ಇದೀಗ ಚಹಲ್ ಅವರು ಧನಶ್ರೀ ಜೊತೆಗಿನ ಮದುವೆ ಪ್ರಸ್ತಾಪದ ಬಗ್ಗೆ ತಮಾಷೆಯ ಘಟನೆಯನ್ನು ವಿರಿಸಿದ್ದಾರೆ.
“ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದಾಗ ನಾನು ಮೊದಲ ಬಾರಿಗೆ ನನ್ನ ಗುರುಗ್ರಾಮ್ ಮನೆಯಲ್ಲಿ ಅಷ್ಟು ದಿನ ಕುಟುಂಬದೊಂದಿಗೆ ಇದ್ದೆ. ಸುಮಾರು ಮೂರು-ನಾಲ್ಕು ತಿಂಗಳು ಯಾವುದೇ ಕೆಲಸವಿಲ್ಲದೆ ಸುಮ್ಮನೆ ಇರುತ್ತಿದ್ದೆ. ನನಗೆ ಡ್ಯಾನ್ಸ್ ಎಂದರೆ ಅಚ್ಚುಮೆಚ್ಚು. ಹೀಗೆ ಸುಮ್ಮನೆ ಕೂರುವ ಬದಲು ನೃತ್ಯವನ್ನಾದರು ಕಲಿಯಬಹುದಲ್ಲ ಎಂದು ಆಲೋಚಿಸಿದೆ. ಆಗ ಧನಶ್ರೀ ವರ್ಮಾ ಆನ್ಲೈನ್ನಲ್ಲಿ ಡ್ಯಾನ್ಸ್ ತರಭೇತಿ ನೀಡಲಿದ್ದಾರೆ ಎಂದು ನನಗೆ ಸಲಹೆ ಬಂದಿತು. ಹಾಗಾಗಿ ನಾನು ಎರಡು ತಿಂಗಳು ಆನ್‌ಲೈನ್ ತರಗತಿಗಳನ್ನು ತೆಗೆದುಕೊಂಡೆ,” ಎಂದು ಹ್ಯೂಮನ್ಸ್ ಆಫ್ ಬಾಂಬೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಚಹಾಲ್ ಹೇಳಿದ್ದಾರೆ.
IPL 2023 Points Table: ಆರೆಂಜ್, ಪರ್ಪಲ್ ಕ್ಯಾಪ್ ಆರ್ಸಿಬಿ ಪ್ಲೇಯರ್ಸ್ ಬಳಿ ಭದ್ರ: ಪಾಯಿಂಟ್ ಟೇಬಲ್ ಹೇಗಿದೆ?
”ಹೀಗೆ ಡ್ಯಾನ್ಸ್ ಕ್ಲಾಸ್ ನಡೆಯುತ್ತಿರುವಾಗ ಒಂದು ದಿನ ನಾನು ಅವರ ಬಳಿ ‘ನೀವು ಜೀವನದಲ್ಲಿ ಹೇಗೆ ಇಷ್ಟೊಂದು ಸಂತೋಷವಾಗಿರುವಿರಿ?’ ಎಂದು ಕೇಳಿದೆ. ಅದಕ್ಕೆ ಅವರು, ನಾನು ಜೀವನದಲ್ಲಿ ಸಣ್ಣ ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಹುಡುಕುತ್ತೇನೆ ಎಂದು ಹೇಳಿದರು. ಅವರು ಆಡಿದ ಮಾತು ನನಗೆ ಸರಿಯಾದ ವೈಬ್ಸ್ ಸಿಕ್ಕಿತು. ನಂತರ ನಾನು ಅವರಿಗೆ ಪ್ರಪೋಸ್ ಮಾಡಿದೆ. ‘ನಾನು ನಿನ್ನನ್ನು ಮದುವೆಯಾಗಲು ಬಯಸುತ್ತೇನೆ, ನಿನ್ನೊಂದಿಗೆ ಡೇಟಿಂಗ್ ಮಾಡಲು ಇಷ್ಟವಿಲ್ಲ. ಡೇಟಿಂಗ್‌ನಲ್ಲಿ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ನನಗೆ ಈಗ 30 ವರ್ಷ ಆಗಿದೆ’ ಎಂದು ಧನಶ್ರೀ ಬಳಿ ಹೇಳಿದೆ. ಆದರೆ, ಅದಕ್ಕೆ ಅವರು, ‘ನೋ, ನಾನು ಮೊದಲು ನಿನ್ನನ್ನು ಭೇಟಿಯಾಗಬೇಕು’ ಎಂದರು. ಸರಿ ಎಂದು ನಾವು ಮುಂಬೈನಲ್ಲಿ ಭೇಟಿಯಾದೆವು. ನಂತರ ಈಗ, ಎಲ್ಲವೂ ಚೆನ್ನಾಗಿದೆ,” ಎಂದು ಚಹಲ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಯುಜ್ವೇಂದ್ರ ಚಹಲ್ಗೆ ಐಪಿಎಲ್ನ ನೆಚ್ಚಿನ ನಾಯಕ ಯಾರು ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ನನ್ನ ನೆಚ್ಚಿನ ನಾಯಕ ಎಂದು ಚಹಲ್ ಹೇಳಿದ್ದಾರೆ. ”ನಾನು ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಿದ್ಧೇನೆ. ಅವರೆಲ್ಲರೂ ಒಬ್ಬ ಬೌಲರ್ಗೆ ನೀಡಬೇಕಾದ ಎಲ್ಲಾ ಸ್ವಾತಂತ್ರ್ಯ ನೀಡಿದ್ದರು. ಇದಾಗ್ಯೂ ನನಗೆ ಐಪಿಎಲ್ನಲ್ಲಿ ಸಂಜು ಸ್ಯಾಮ್ಸನ್ ಅವರ ನಾಯಕತ್ವದ ತುಂಬಾ ಇಷ್ಟ. ಧೋನಿ ಅವರಲ್ಲಿನ ಗುಣಗಳನ್ನು ಸ್ಯಾಮ್ಸನ್ನಲ್ಲಿ ನೋಡುತ್ತಿದ್ದೇನೆ. ಆತ ಶಾಂತ ರೀತಿಯಲ್ಲಿ ಎಲ್ಲವನ್ನೂ ನಿಭಾಯಿಸುತ್ತಾನೆ,” ಎಂಬುದು ಚಹಲ್ ಮಾತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Tue, 25 April 23