Chahal-Dhanashree Verma: ನಮ್ಮಿಬ್ಬರ ನಡುವೆ ಸರಿಯಿಲ್ಲ ಎಂದವರಿಗೆ ಪಂದ್ಯದ ಮಧ್ಯೆಯೇ ತಕ್ಕ ಉತ್ತರ ನೀಡಿದ ಚಹಲ್-ಧನಶ್ರೀ

IPL 2023: ಆರ್​ಆರ್​- ಎಸ್​ಆರ್​​ಹೆಚ್ ಪಂದ್ಯದಲ್ಲಿ ಅನೇಕ ಘಟನೆಗಳು ನಡೆದವು. ಸಂಜು ಸ್ಯಾಮ್ಸನ್ ಪಡೆ 200+ ರನ್ ಕಲೆಹಾಕಿತ್ತು. ಯುಜ್ವೇಂದ್ರ ಚಹಲ್ ಇತಿಹಾಸ ನಿರ್ಮಿಸಿದರು. ಇದರ ಜೊತೆಗೆ ಚಹಲ್ ಪತ್ನಿ ಧನಶ್ರೀ ವರ್ಮಾ ಪಂದ್ಯ ನೋಡಲು ಮೈದಾನದಲ್ಲಿ ಹಾಜರಿದ್ದರು.

Chahal-Dhanashree Verma: ನಮ್ಮಿಬ್ಬರ ನಡುವೆ ಸರಿಯಿಲ್ಲ ಎಂದವರಿಗೆ ಪಂದ್ಯದ ಮಧ್ಯೆಯೇ ತಕ್ಕ ಉತ್ತರ ನೀಡಿದ ಚಹಲ್-ಧನಶ್ರೀ
Yuzvendra Chahal, Dhanashree Verma
Follow us
Vinay Bhat
|

Updated on:Apr 04, 2023 | 10:20 AM

ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಮತ್ತು ಧನಶ್ರೀ ವರ್ಮಾ ನಡುವೆ ಮನಸ್ತಾನ ಉಂಟಾಗಿದೆ, ಇವರಿಬ್ಬರು ಡೈವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬಳಿಕ ಇವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ವದಂತಿಗಳನ್ನು ನಂಬಬೇಡಿ ಎಂದು ಹೇಳಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದರು. ಹೀಗಿದ್ದರೂ ಚಹಲ್-ಧನಶ್ರಿ (Dhanashree Verma) ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಆಗಾಗ ಬರುತ್ತಲೇ ಇದೆ. ಇಂಥವರಿಗೆ ಈ ಜೋಡಿ ಇದೀಗ ತಕ್ಕ ಉತ್ತರ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ (Viral Video) ಆಗುತ್ತಿದ್ದು, ಇದಕ್ಕೆ ಅನೇಕ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಭಾನುವಾರ ಐಪಿಎಲ್ 2023 ರಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಸಂಜೆ 7:30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಹೈವೋಲ್ಟೇಜ್ ಪಂದ್ಯವಿದ್ದ ಕಾರಣ ಇದಕ್ಕೂ ಮುನ್ನ ಆಯೋಜಿಸಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯದ ಮೇಲೆ ಹೆಚ್ಚಿನವರ ಗಮನ ಇರಲಿಲ್ಲ. ಆದರೆ, ಆರ್​ಆರ್​- ಎಸ್​ಆರ್​​ಹೆಚ್ ಪಂದ್ಯದಲ್ಲಿ ಅನೇಕ ಘಟನೆಗಳು ನಡೆದವು. ಸಂಜು ಸ್ಯಾಮ್ಸನ್ ಪಡೆ 200+ ರನ್ ಕಲೆಹಾಕಿತ್ತು. ಯುಜ್ವೇಂದ್ರ ಚಹಲ್ ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ
Image
IPL 2023 Points Table: ಐಪಿಎಲ್ 2023 ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?, ಟೇಬಲ್ ಟಾಪರ್ ಯಾರು?
Image
DC vs GT, IPL 2023: ವಾರ್ನರ್ vs ಹಾರ್ದಿಕ್: ಐಪಿಎಲ್​ನಲ್ಲಿಂದು ಡೆಲ್ಲಿ- ಗುಜರಾತ್ ಮುಖಾಮುಖಿ
Image
CSK vs LSG: ಚೆನ್ನೈ ಸೂಪರ್ ಕಿಂಗ್ಸ್-ಲಖನೌ ಹೈವೋಲ್ಟೇಜ್ ಪಂದ್ಯದ ರೋಚಕ ಫೋಟೋಗಳು ನೋಡಿ
Image
IPL 2023: 140 ದಶಲಕ್ಷ ವೀಕ್ಷಕರು; ಐಪಿಎಲ್ ವೀಕ್ಷಣೆಯಲ್ಲಿ ದಾಖಲೆ ಬರೆದ ಡಿಸ್ನಿ ಸ್ಟಾರ್

CSK vs LSG Highlights IPL 2023: ಗೆಲುವಿನ ಖಾತೆ ತೆರೆದ ಚೆನ್ನೈ; ಲಕ್ನೋಗೆ 12 ರನ್ ಸೋಲು

ಇದರ ಜೊತೆಗೆ ಚಹಲ್ ಪತ್ನಿ ಧನಶ್ರೀ ವರ್ಮಾ ಪಂದ್ಯ ನೋಡಲು ಮೈದಾನದಲ್ಲಿ ಹಾಜರಿದ್ದರು. ಈ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಮಿಂಚಿದ ಚಹಲ್ 4 ಓವರ್ ಬೌಲಿಂಗ್ ಮಾಡಿ ಕೇವಲ 17 ರನ್ ನೀಡಿ 4 ವಿಕೆಟ್ ಕಿತ್ತರು. ಈ ಮೂಲಕ ಟಿ20 ಮಾದರಿಯ ಕ್ರಿಕೆಟ್​ನಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊಟ್ಟ ಮೊದಲ ಭಾರತೀಯ ಬೌಲರ್​ ಎನಿಸಿಕೊಂಡು ಇತಿಹಾಸದ ಪುಟ ಸೇರಿದರು. ಈ ಸಂದರ್ಭ ಖುಷಿ ತಾಳಲಾರದೆ ಚಹಲ್ ಪತ್ನಿ ಧನಶ್ರೀ ಕಣ್ಣೀರಿಡುತ್ತಿರುವುದು ಕಂಡುಬಂತು. ತನ್ನ ಗಂಡನ ಸಾಧನೆಗೆ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈ ಮೂಲಕ ಸುಳ್ಳು ಸುದ್ದಿಯನ್ನು ಹಬ್ಬಿಸಿದವರಿಗೆ ನಾವಿಬ್ಬರು ಜೊತೆಯಾಗಿ ಇದ್ದೇವೆ ಎಂದು ಮೈದಾನದಲ್ಲೇ ಹೇಳಿದ್ದಾರೆ.

ಚಹಲ್ 300 ವಿಕೆಟ್​ಗಳ ಸಾಧನೆ:

ಹೈದರಾಬಾದ್ ವಿರುದ್ಧ 4 ವಿಕೆಟ್​ಗಳನ್ನು ಕಬಳಿಸುವ ಮೂಲಕ ಯುಜ್ವೇಂದ್ರ ಚಹಲ್ ಟಿ20 ಮಾದರಿಯ ಕ್ರಿಕೆಟ್​ನಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊಟ್ಟ ಮೊದಲ ಭಾರತೀಯ ಬೌಲರ್​ ಎನಿಸಿಕೊಂಡರು. ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ ಯಾವ ಭಾರತೀಯ ಬೌಲರ್ ಕೂಡ 300 ವಿಕೆಟ್ ಪಡೆದ ಸಾಧನೆ ಮಾಡಿಲ್ಲ. ತನ್ನ 265ನೇ ಟಿ20 ಪಂದ್ಯದಲ್ಲಿ ಚಹಾಲ್ ಇತಿಹಾಸ ನಿರ್ಮಿಸಿದ್ದಾರೆ. ಇದೀಗ ಇವರ ಖಾತೆಯಲ್ಲಿ 303 ಟಿ20 ವಿಕೆಟ್​ಗಳಿವೆ. ಒಟ್ಟಾರೆಯಾಗಿ ಟಿ20 ಕ್ರಿಕೆಟ್​ನಲ್ಲಿ 300+ ವಿಕೆಟ್ ಪಡೆದವರ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಚುಟುಕು ಮಾದರಿಯ ಕ್ರಿಕೆಟ್​ನಲ್ಲಿ ಈವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ವೆಸ್ಟ್ ಇಂಡೀಸ್​ನ ಡ್ವೇನ್ ಬ್ರಾವೋ ಆಗಿದ್ದಾರೆ. ಇವರು ಬರೋಬ್ಬರಿ 558 ವಿಕೆಟ್ ತಮ್ಮದಾಗಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ 530 ವಿಕೆಟ್ ಕಿತ್ತು ರಶೀದ್ ಖಾನ್ ಇದ್ದಾರೆ.

ಎಸ್​ಆರ್​ಹೆಚ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಸ್ಫೋಟಕ ಆರಂಭ ಪಡೆದುಕೊಂಡಿತು. ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್​ಗೆ ಕೇವಲ 5.5 ಓವರ್​ನಲ್ಲಿ 85 ರನ್ ಕಲೆಹಾಕಿದರು. ಬಟ್ಲರ್ ಕೇವಲ 22 ಎಸೆತಗಳಲ್ಲಿ 54 ರನ್ ಚಚ್ಚಿದರು. ನಂತರ ನಾಯಕ ಸಂಜು ಸ್ಯಾಮ್ಸನ್ ಜೊತೆಯಾದ ಜೈಸ್ವಾಲ್ ಬಿರುಸಿನ ಆಟ ಪ್ರದರ್ಶಿಸಿದರು.

ಜೈಸ್ವಾಲ್ 37 ಎಸೆತಗಳಲ್ಲಿ 54 ರನ್ ಬಾರಿಸಿದರೆ, ಸ್ಯಾಮ್ಸನ್ 32 ಎಸೆತಗಳಲ್ಲಿ 55 ರನ್ ಗಳಿಸಿದರು. ಹೆಟ್ಮೇರ್ ಅಜೇಯ 22 ರನ್ ಕಲೆಹಾಕಿದರು. ಆರ್​ಆರ್​ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಸನ್​ರೈಸರ್ಸ್ ಆರಂಭದಿಂದ ವಿಕೆಟ್ ಕಳೆದುಕೊಂಡು ಸಾಗಿತು. ತಂಡದ ಪರ ಅಬ್ದುಲ್ ಸಮದ್ ಅಜೇಯ 32 ಮತ್ತು ಮಯಾಂಕ್ ಅಗರ್ವಾಲ್ 27 ರನ್ ಗಳಿಸಿದ್ದೇ ಹೆಚ್ಚು. ಹೈದರಾಬಾದ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:20 am, Tue, 4 April 23

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ