IPL 2023 Points Table: ಐಪಿಎಲ್ 2023 ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?, ಟೇಬಲ್ ಟಾಪರ್ ಯಾರು?

IPL 2023 Orange and Purple Cap: ಇದೀಗ ಚೆನ್ನೈ-ಲಖನೌ (CSK vs LSG) ಪಂದ್ಯದ ಬಳಿಕ ಐಪಿಎಲ್ 2023 ಪಾಯಿಂಟ್ ಟೇಬಲ್ ಹೇಗಿದೆ?, ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

IPL 2023 Points Table: ಐಪಿಎಲ್ 2023 ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?, ಟೇಬಲ್ ಟಾಪರ್ ಯಾರು?
IPL 2023 Orange Purple Cap
Follow us
|

Updated on:Apr 04, 2023 | 8:56 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್ (IPL 2023) ಟೂರ್ನಿ ರೋಚಕತೆ ಪಡೆಯುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಕೂಡ ಹೆಚ್ಚುತ್ತಿದ್ದು ಅಭಿಮಾನಿಗಳು ಸ್ಟೇಡಿಯಂಗಳಲ್ಲಿ ಪಂದ್ಯ ನೋಡಲು ಕಿಕ್ಕಿರಿದು ಬರುತ್ತಿದ್ದಾರೆ. ಸೋಮವಾರ ಐಪಿಎಲ್ 2023 ರಲ್ಲಿ ಚೆನ್ನೈ ಹಾಗೂ ಲಖನೌ (CSK vs LSG) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ 217 ರನ್ ಗಳಿಸಿದರೆ ಟಾರ್ಗೆಟ್ ಬೆನ್ನಟ್ಟಿದ ಎಲ್​ಎಸ್​ಜಿ ಗೆಲುವಿಗೆ ಹೋರಾಟ ನಡೆಸಿ ಅಂತಿಮವಾಗಿ 205 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲು ಕಂಡಿತು. ಇದೀಗ ಚೆನ್ನೈ-ಲಖನೌ ಪಂದ್ಯದ ಬಳಿಕ ಐಪಿಎಲ್ 2023 ಪಾಯಿಂಟ್ ಟೇಬಲ್ ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.

  • ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ದೊಡ್ಡ ಮೊತ್ತದ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಟೇಬಲ್ ಟಾಪ್​ನಲ್ಲಿದೆ. +3.600 ರನ್​ರೇಟ್​ನೊಂದಿಗೆ 2 ಅಂಕ ಸಂಪಾದಿಸಿದೆ.
  • ಚೆನ್ನೈ ವಿರುದ್ಧ ಲಖನೌ ಸೋತ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದು 2 ಅಂಕ ಹೊಂದಿ +1.981ರನ್​ರೇಟ್​ ಕಾಪಾಡಿಕೊಂಡಿದೆ.
  • ಮೂರನೇ ಸ್ಥಾನದಲ್ಲಿ ಲಖನೌ ಸೂಪರ್ ಜೇಂಟ್ಸ್ ತಂಡವಿದೆ. ಆಡಿದ ಎರಡು ಪಂದ್ಯಗಳ ಪೈಕಿ ಸೋಲು-ಗೆಲುವನ್ನು ಕಂಡು +0.950 ರನ್​ರೇಟ್​ನೊಂದಿಗೆ 2 ಅಂಕ ಪಡೆದುಕೊಂಡಿದೆ.
  • ಗುಜರಾತ್ ಟೈಟಾನ್ಸ್ ನಾಲ್ಕನೇ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿ 2 ಅಂಕದೊಂದಿಗೆ +0.514 ರನ್​ರೇಟ್ ಕಾಪಾಡಿಕೊಂಡಿದೆ.
  • ಪಂಜಾಬ್ ಕಿಂಗ್ಸ್ ಐದನೇ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿ 2 ಅಂಕದೊಂದಿಗೆ +0.438 ರನ್​ರೇಟ್ ಹೊಂದಿದೆ.
  • ನಂತರದ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವಿದೆ. ಆಡಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಒಂದು ಸೋಲುಂಡು 2 ಅಂಕದೊಂದಿಗೆ +0.036 ರನ್​ರೇಟ್ ಕಾಪಾಡಿಕೊಂಡಿದೆ.
  • ಕೆಕೆಆರ್ ಏಳನೇ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -0.438 ರನ್​ರೇಟ್ ಹೊಂದಿದೆ.
  • ಮುಂಬೈ ಇಂಡಿಯನ್ಸ್ ಎಂಟನೇ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -1.981 ರನ್​ರೇಟ್ ಹೊಂದಿದೆ.
  • ಡೆಲ್ಲಿ ಕ್ಯಾಪಿಟಲ್ಸ್ ಒಂಬತ್ತನೆ ಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -2.500 ರನ್​ರೇಟ್ ಹೊಂದಿದೆ.
  • ಕೊನೆಯ ಸ್ಥಾನದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವಿದೆ. ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಅಂಕ ಸಂಪಾದಿಸದೆ -3.600 ರನ್​ರೇಟ್ ಹೊಂದಿದೆ.

IPL 2023: ಕೇವಲ 8 ರನ್‌; ಚೆಪಾಕ್‌ನಲ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ ಧೋನಿ..!

ಆರೆಂಜ್ ಕ್ಯಾಪ್:

ಇದನ್ನೂ ಓದಿ
Image
DC vs GT, IPL 2023: ವಾರ್ನರ್ vs ಹಾರ್ದಿಕ್: ಐಪಿಎಲ್​ನಲ್ಲಿಂದು ಡೆಲ್ಲಿ- ಗುಜರಾತ್ ಮುಖಾಮುಖಿ
Image
CSK vs LSG: ಚೆನ್ನೈ ಸೂಪರ್ ಕಿಂಗ್ಸ್-ಲಖನೌ ಹೈವೋಲ್ಟೇಜ್ ಪಂದ್ಯದ ರೋಚಕ ಫೋಟೋಗಳು ನೋಡಿ
Image
IPL 2023: 140 ದಶಲಕ್ಷ ವೀಕ್ಷಕರು; ಐಪಿಎಲ್ ವೀಕ್ಷಣೆಯಲ್ಲಿ ದಾಖಲೆ ಬರೆದ ಡಿಸ್ನಿ ಸ್ಟಾರ್
Image
CSK vs LSG Highlights IPL 2023: ಗೆಲುವಿನ ಖಾತೆ ತೆರೆದ ಚೆನ್ನೈ; ಲಕ್ನೋಗೆ 12 ರನ್ ಸೋಲು

ಸಿಎಸ್​ಕೆ ತಂಡದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಆರೆಂಕ್ ಕ್ಯಾಪ್ ತೊಟ್ಟಿದ್ದಾರೆ. ಇವರು ಜಿಟಿ ವಿರುದ್ಧ 92 ರನ್ ಹಾಗೂ ಲಖನೌ ವಿರುದ್ಧ 57 ರನ್ ಸಿಡಿಸಿದ್ದರು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿ ಒಟ್ಟು 149 ರನ್ ಕಲೆಹಾಕಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಎಲ್​ಎಸ್​ಜಿಯ ಖೈಲ್ ಮೇಯರ್ಸ್ ಅವರಿದ್ದು 126 ರನ್ ಕಲೆಹಾಕಿದ್ದಾರೆ.

ಪರ್ಪಲ್ ಕ್ಯಾಪ್:

ಲಖನೌ ಸೂಪರ್ ಜೇಂಟ್ಸ್ ತಂಡದ ಮಾರ್ಕ್ ವುಡ್ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಡೆಲ್ಲಿ ವಿರುದ್ಧ 5 ವಿಕೆಟ್ ಕಬಳಿಸಿದ್ದರು. ಹಾಗೆಯೆ ಚೆನ್ನೈ ವಿರುದ್ಧ 3 ವಿಕೆಟ್ ಕಿತ್ತಿದ್ದಾರೆ. ಇದೀಗ 8 ವಿಕೆಟ್ ಪಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ 5 ವಿಕೆಟ್​ಗಳನ್ನು ಪಡೆದು ಎಲ್​ಎಸ್​ಜಿ ತಂಡದ ರವಿ ಬಿಷ್ಟೋಯಿ ಇದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 am, Tue, 4 April 23

ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?