DC vs GT, IPL 2023: ವಾರ್ನರ್ vs ಹಾರ್ದಿಕ್: ಐಪಿಎಲ್ನಲ್ಲಿಂದು ಡೆಲ್ಲಿ- ಗುಜರಾತ್ ಮುಖಾಮುಖಿ
Delhi vs Gujarat: ಡೆಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಲಖನೌ ವಿರುದ್ಧ ಸೋಲು ಕಂಡಿದ್ದು ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಇತ್ತ ಜಿಟಿ ತಂಡ ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಖಾತೆ ತರೆದಿತ್ತು.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಇಂದು ನಡೆಯಲಿರುವ ಏಳನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ (DC vs GT) ಮುಖಾಮುಖಿ ಆಗುತ್ತಿದೆ. ಡೆಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಲಖನೌ ವಿರುದ್ಧ ಸೋಲು ಕಂಡಿದ್ದು ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಇತ್ತ ಜಿಟಿ ತಂಡ ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ (CSK) ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಖಾತೆ ತರೆದಿತ್ತು. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರಿದ್ದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್:
ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ದೊಡ್ಡ ಮೊತ್ತ ಚೇಸಿಂಗ್ ಮಾಡುವಲ್ಲಿ ಎಡವಿತ್ತು. ನಾಯಕ ಡೇವಿಡ್ ವಾರ್ನರ್ ಕಡೆಯಿಂದ ಅರ್ಧಶತಕದ ಕೊಡುಗೆ ಬಿಟ್ಟರೆ ಉಳಿದವರೆಲ್ಲ ವೈಫಲ್ಯ ಅನುಭವಿಸಿದ್ದರು. ಪೃಥ್ವಿ ಶಾ ಕಡೆಯಿಂದ ಉತ್ತಮ ಆರಂಭ ನಿರೀಕ್ಷಿಸಲಾಗಿದೆ. ಲಖನೌ ವಿರುದ್ಧ ಡಕೌಟ್ ಆಗಿದ್ದ ಮಿಚೆಲ್ ಮಾರ್ಶ್ ನೆರವಾಗಬೇಕಿದೆ. ಸರ್ಫರಾಜ್ ಖಾನ್, ರೋಮನ್ ಪೊವೆಲ್ ಹಾಗೂ ರಿಲೀ ರುಸ್ಸೋ ಅಬ್ಬರಿಸಬೇಕಿದೆ. ಅಕ್ಷರ್ ಪಟೇಲ್ ಕೊಡುಗೆ ಎರಡೂ ವಿಭಾಗಗಳಿಂದ ಬೇಕಾಗಿದೆ. ಆನ್ರಿಚ್ ನಾರ್ಟ್ಜೆ ಇಂದು ಕಣಕ್ಕಿಳಿಯುವ ಸಾಧ್ಯತೆ ಇದೆ. ಮೊದಲ ಮ್ಯಾಚ್ನಲ್ಲಿ ಬೆಂಚ್ ಕೂದಿದ್ದ ಮನೀಶ್ ಪಾಂಡೆಗೆ ಅವಕಾಶ ಸಿಗಬಹುದು.
IPL 2023: ಆಡಿದ ಮೊದಲ ಪಂದ್ಯದಲ್ಲೇ ಫ್ರಾಂಚೈಸಿಗಳಿಗೆ ನಿರಾಸೆ ಮೂಡಿಸಿದ ಕೋಟಿ ವೀರರು..!
ಗುಜರಾತ್ ಟೈಟಾನ್ಸ್:
ಡೆಲ್ಲಿಗೆ ಹೋಲಿಸಿದರೆ ಜಿಟಿ ತಂಡ ಹೆಚ್ಚು ಬಲಿಷ್ಠವಾಗಿದೆ. ಶುಭ್ಮನ್ ಗಿಲ್ ಬೊಂಬಾಟ್ ಫಾರ್ಮ್ನಲ್ಲಿದ್ದು ವೃದ್ದಿಮಾನ್ ಸಾಹ ಸಾಥ್ ನೀಡುತ್ತಿದ್ದಾರೆ. ಸಾಯಿ ಸುದರ್ಶನ್ ಭರವಸೆ ಮೂಡಿಸಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಯಾವುದೇ ಸಮಯದಲ್ಲಿ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ವಿಜಯ್ ಶಂಕರ್, ರಾಹುಲ್ ತೇವಾಟಿಯ ಹಾಗೂ ರಶೀದ್ ಖಾನ್ ಡೆತ್ ಓವರ್ಗಳಲ್ಲಿ ಅಪಾಯಕಾರಿ ಆಗಬಲ್ಲರು. ರಶೀದ್ ಸ್ಪಿನ್ ಜಾದು ಕೂಡ ವರ್ಕ್ ಆಗುತ್ತಿದೆ. ಮೊಹಮ್ಮದ್ ಶಮಿ, ಜೋಶ್ವಾ ಲಿಟಲ್ ಹಾಗೂ ಅಲ್ಜರಿ ಜೋಸೆಫ್ರಂತಹ ಅಪಾಯಕರಿ ಬೌಲಿಂಗ್ ಪಡೆಯಿದೆ.
ಪಂದ್ಯ ಎಷ್ಟು ಗಂಟೆಗೆ?:
ಡೆಲ್ಲಿ ಹಾಗೂ ಗುರಾಜತ್ ನಡುವಣ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪಪ್ರಸಾರ ಕಾಣಲಿದೆ. ಆನ್ಲೈನ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಇರಲಿದೆ.
ಡೆಲ್ಲಿ ತಂಡ : ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮಿಚೆಲ್ ಮಾರ್ಶ್, ಸರ್ಫರಾಜ್ ಖಾನ್, ರಿಲೀ ರುಸ್ಸೋ, ರೋಮನ್ ಪೊವೆಲ್, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ಮನೀಶ್ ಪಾಂಡೆ, ಪ್ರವೀಣ್ ದುಬೆ, ಲಲಿತ್ ಯಾದವ್, ಅಭಿಷೇಕ್ ಪೊರೆಲ್, ಫಿಲಿಪ್ ಸಾಲ್ಟ್, ಇಶಾಂತ್ ಶರ್ಮಾ, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಒಸ್ತ್ವಾಲ್.
ಗುಜರಾತ್ ತಂಡ: ವೃದ್ಧಿಮಾನ್ ಸಹಾ, ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶ್ವಾ ಲಿಟಲ್, ಯಶ್ ದಯಾಳ್, ಅಲ್ಜರಿ ಜೋಸೆಫ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಶ್ರೀಕರ್ ಭರತ್, ಅಭಿನವ್ ಮನೋಹರ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ಡೇವಿಡ್ ಮಿಲ್ಲರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:11 am, Tue, 4 April 23