AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 140 ದಶಲಕ್ಷ ವೀಕ್ಷಕರು; ಐಪಿಎಲ್ ವೀಕ್ಷಣೆಯಲ್ಲಿ ದಾಖಲೆ ಬರೆದ ಡಿಸ್ನಿ ಸ್ಟಾರ್

IPL 2023: ಐಪಿಎಲ್ ಮೊದಲ ದಿನದಂದು 140 ದಶಲಕ್ಷಕ್ಕೂ ಅಧಿಕ ವೀಕ್ಷಕರು ನೇರ ಪ್ರಸಾರ ವೀಕ್ಷಿಸಿದ್ದರು. ಇದರಲ್ಲಿ ಉದ್ಘಾಟನಾ ಸಮಾರಂಭ ಸೇರಿದಂತೆ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಒಳಗೊಂಡ ಮೊದಲ ಪಂದ್ಯವನ್ನು 130 ದಶಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

IPL 2023: 140 ದಶಲಕ್ಷ ವೀಕ್ಷಕರು; ಐಪಿಎಲ್ ವೀಕ್ಷಣೆಯಲ್ಲಿ ದಾಖಲೆ ಬರೆದ ಡಿಸ್ನಿ ಸ್ಟಾರ್
ಐಪಿಎಲ್ ನೇರ ಪ್ರಸಾರImage Credit source: insidesport
ಪೃಥ್ವಿಶಂಕರ
| Updated By: Vinay Bhat|

Updated on:Apr 04, 2023 | 6:57 AM

Share

16ನೇ ಆವೃತ್ತಿಯ ಐಪಿಎಲ್​ (IPL 2023) ನಿರೀಕ್ಷೆಗೂ ಮೀರಿದ ಆರಂಭ ಪಡೆದುಕೊಂಡಿದೆ. ಇದಕ್ಕೆ ಕಾರಣವೂ ಇದ್ದು, ಈಗಗಾಲೇ ನಡೆದಿರುವ 5 ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿವೆ. ಪ್ರತಿ ಪಂದ್ಯಕ್ಕೂ ಕ್ರೀಡಾಂಗಣಗಳು ಭರ್ತಿಯಾಗುತ್ತಿದ್ದು, ಇತ್ತ ನೇರ ಪ್ರಸಾರದಲ್ಲೂ (LIVE Broadcast) ದಾಖಲೆಯ ಏರಿಕೆ ಕಂಡುಬಂದಿದೆ. ಈ ಬಾರಿಯ ಐಪಿಎಲ್​ನ ಅಧಿಕೃತ ಟೆಲಿವಿಷನ್ ಪ್ರಸಾರದ ಹಕ್ಕು ಪಡೆದುಕೊಂಡಿರುವ ಡಿಸ್ನಿ ಸ್ಟಾರ್ (Disney Star) ಕೇವಲ ನಡೆದಿರುವ 5 ಪಂದ್ಯಗಳಲ್ಲಿ ಬರೋಬ್ಬರಿ 8.7 ಶತಕೋಟಿ ನಿಮಿಷಗಳ ವೀಕ್ಷಣನೆಯನ್ನು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 47 ರಷ್ಟು ಏರಿಕೆ ಕಂಡಿದೆ. ಐಪಿಎಲ್ ಮೊದಲ ದಿನದಂದು 140 ದಶಲಕ್ಷಕ್ಕೂ ಅಧಿಕ ವೀಕ್ಷಕರು ನೇರ ಪ್ರಸಾರ ವೀಕ್ಷಿಸಿದ್ದರು. ಇದರಲ್ಲಿ ಉದ್ಘಾಟನಾ ಸಮಾರಂಭ ಸೇರಿದಂತೆ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಒಳಗೊಂಡ ಮೊದಲ ಪಂದ್ಯವನ್ನು 130 ದಶಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಐಪಿಎಲ್ ಟಿವಿ ವೀಕ್ಷಣೆಯಲ್ಲಿ ದಾಖಲೆಯ ಏರಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಡಿಸ್ನಿ ಸ್ಟಾರ್ ಕ್ರೀಡಾ ವಿಭಾಗದ ಮುಖ್ಯಸ್ಥ ಸಂಜೋಗ್ ಗುಪ್ತಾ, ಅಭಿಮಾನಿಗಳಿಂದ ಈ ರೀತಿಯ ಸ್ಪಂದನೆ ಸಿಕ್ಕಿರುವುದು ಖುಷಿ ತಂದಿದೆ. ಸ್ಟಾರ್ ಸ್ಪೋಟ್ರ್ಸ್ ಕ್ರಿಕೆಟ್​ನ ನೇರ ಪ್ರಸಾರದ ಜೊತೆಗೆ ಆಟದ ನಡುವೆ ಅಭಿಮಾನಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ವೀಕ್ಷಕ ವಿವರಣೆ ನೀಡುತ್ತಿದೆ. ಇದು ವಿಶ್ವದ ಪ್ರಮುಖ ಕ್ರಿಕೆಟ್ ಪಂದ್ಯಾವಳಿಯಾದ ಟಾಟಾ ಐಪಿಎಲ್‍ನ ಜನಪ್ರಿಯತೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.

CSK vs LSG Live Score IPL 2023: ಟಾಸ್ ಗೆದ್ದ ಲಕ್ನೋ; ಚೆನ್ನೈ ಬ್ಯಾಟಿಂಗ್

ಸ್ಟಾರ್ ಸ್ಪೋಟ್ರ್ಸ್, ಕ್ರೀಡೆಯನ್ನು ಪೋಷಿಸುವ ಸಲುವಾಗಿ ದೇಶದ ಒಂಬತ್ತು ಭಾಷೆಗಳಲ್ಲಿ ಕ್ರೀಡಾ ಚಾನೆಲ್ ಆರಂಭಿಸಿದೆ. ಅಲ್ಲದೆ ಮಾಜಿ ಕ್ರಿಕೆಟಿಗರು ಸೇರಿದಂತೆ ಆಯಾ ಭಾಷೆಯ ಖ್ಯಾತ ವೀಕ್ಷಕ ವಿವರಣೆಗಾರರನ್ನು ಒಳಗೊಂಡ “ಸ್ಟಾರ್ ಕ್ಯಾಸ್ಟ್” ಅನ್ನು ಪ್ರಸ್ತುತಪಡಿಸುತ್ತಿದೆ. ಇದರಲ್ಲಿ ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ತೆಲುಗು ನಟ ನಂದಮೂರಿ ಬಾಲಕೃಷ್ಣ ಕೂಡ ಇದ್ದಾರೆ.

ಅಷ್ಟೇ ಅಲ್ಲದೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ಹೋಗುವ ಮಾರ್ಗದಲ್ಲಿ ಸ್ಟಾರ್ ಸ್ಪೋಟ್ರ್ಸ್ ತಜ್ಞರೊಂದಿಗೆ ಸಂವಾದ ನಡೆಸಲು ‘ಫ್ಯಾನ್ ಬಸ್’ ನಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರಲ್ಲಿ ಅಭಿಮಾನಿಗಳು ಆಟದ ಬಗ್ಗೆ ಪರಣಿತರ ಜೊತೆ ಚರ್ಚಿಸಬಹುದಾಗಿದೆ. ಇದರೊಂದಿಗೆ ಶಾಲಾ ಕ್ರಿಕೆಟ್ ರಸಪ್ರಶ್ನೆಯನ್ನು ಆಯೋಜಿಸಲಾಗುತ್ತಿದ್ದು, ‘ದಿ ಇನ್‍ಕ್ರೆಡಿಬಲ್ ಲೀಗ್ ಕ್ವಿಜ್’ ಅನ್ನು ಸಹ ಪ್ರಾರಂಭಿಸಿದ್ದಾರೆ. ಇದರಲ್ಲಿ 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಹಾಗೆಯೇ ‘ಆಸ್ಕ್ ಸ್ಟಾರ್​ನಡಿಯಲ್ಲಿ ಅಭಿಮಾನಿಗಳು ವೀಕ್ಷಕ ವಿವರಣೆಕಾರರಿಗೆ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳು ನೇರ ಪ್ರಸಾರದ ಸಮಯದಲ್ಲಿ ಪ್ರದರ್ಶನವಾಗಲಿದ್ದು, ಈ ಪ್ರಶ್ನೆಗಳಿಗೆ ವೀಕ್ಷಕ ವಿವರಣೆಗಾರರು ಉತ್ತರಿಸಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Mon, 3 April 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ